ಕೊರೊನಾ ಸೋಂಕಿತರ ಚೇತರಿಕೆ ಪ್ರಮಾಣ ಶೇ. 33.66ಕ್ಕೆ ಏರಿಕೆ

corona
ನವದೆಹಲಿ, ಮೇ 14,ದೇಶದಲ್ಲಿ  ಕೊರೊನಾ  ವೈರಸ್  ಸೋಂಕಿತರ  ಚೇತರಿಕೆ ಪ್ರಮಾಣ ಶೇ 33.63ರಷ್ಟು ಏರಿಕೆಯಾಗಿದ್ದು. ಈವರೆಗೆ  26 ಸಾವಿರದ 235 ಸೋಂಕಿತರು  ಗುಣಮುಖರಾಗಿದ್ದಾರೆ ಎಂದು  ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ 3 ಸಾವಿರದ 722      ಕೊರೊನಾ ದೃಢಪಟ್ಟ ಪ್ರಕರಣಗಳು ವರದಿಯಾಗಿದ್ದು,  ಇದರಿಂದ ದೇಶದಲ್ಲಿ ಕೊರೊನಾ ಪ್ರಕರಣಗಳ  ಒಟ್ಟು ಸಂಖ್ಯೆ 78ಸಾವಿರದ ಮೂರಕ್ಕೆ ತಲುಪಿದೆ.
ಕಳೆದ 24 ಗಂಟೆಗಳಲ್ಲಿ  ಒಂದು ಸಾವಿರದ 849  ಸೋಂಕು ಪೀಡಿತರು  ಚೇತರಿಸಿಕೊಂಡಿದ್ದು,  139 ಮಂದಿ ಸಾವನ್ನಪ್ಪಿದ್ದು, ಇದರೊಂದಿಗೆ ದೇಶದಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 2549ಕ್ಕೆ ಏರಿಕೆಯಾಗಿದೆ.