ನವದೆಹಲಿ, ಮೇ 17, ಕೊರೊನಾ ವೈರಸ್ ನಿಂದಾಗಿ ವಿಶ್ವಾದಲ್ಲಿ 46.34 ಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿದ್ದು, 3.11 ಲಕ್ಷಕ್ಕೂ ಹೆಚ್ಚು ಜನರು ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ.
ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ಎಂಜಿನಿಯರಿಂಗ್ ಕೇಂದ್ರ (ಸಿಎಸ್‌ಎಸ್‌ಇ) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಒಟ್ಟು ಸೋಂಕಿತರ ಸಂಖ್ಯೆ 46,34,068 ಕ್ಕೆ ಏರಿದ್ದರೆ, ಒಟ್ಟು 3,11,781 ಜನರು ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ.
ಕೊರೊನಾ ವೈರಸ್ ಸೋಂಕು ಭಾರತದಲ್ಲಿ ಅತ್ಯಂತ ವೇಗವಾಗಿ ಹರಡುತ್ತಿದೆ ಮತ್ತು ಸೋಂಕಿನಿಂದ ಹೆಚ್ಚು ಬಾಧಿತ ರಾಷ್ಟ್ರಗಳ ಪಟ್ಟಿಯಲ್ಲಿ ಇದು 11 ನೇ ಸ್ಥಾನದಲ್ಲಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾನುವಾರ ಬೆಳಿಗ್ಗೆ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ದೇಶದಲ್ಲಿ ಈವರೆಗೆ 90,927 ಜನರು ಇದರ ಸೋಂಕಿನಿಂದ ಬಳಲುತ್ತಿದ್ದಾರೆ ಮತ್ತು 2872 ಜನರು ಸಾವನ್ನಪ್ಪಿದ್ದು, 34,109 ಜನರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.ಅಮೆರಿಕದಲ್ಲಿ 14,67,820 ಸೋಂಕಿತರಾಗಿದ್ದಾರೆ ಮತ್ತು 88,754 ಮಂದಿ ಸಾವನ್ನಪ್ಪಿದ್ದಾರೆ. ರಷ್ಯಾದಲ್ಲಿ ಇಲ್ಲಿಯವರೆಗೆ 2,72,043 ಜನರು ಇದಕ್ಕೆ ಬಲಿಯಾಗಿದ್ದಾರೆ ಮತ್ತು 2537 ಜನರು ಸಾವನ್ನಪ್ಪಿದ್ದಾರೆ.ಇಟಲಿಯಲ್ಲಿ 2,24,760 ಜನರಿಗೆ ಸೋಂಕು ತಗುಲಿದೆ. ಸ್ಪೇನ್‌ನಲ್ಲಿ 230698 ಜನರು ಕೊರೊನಾ ಸೋಂಕಿಗೆ ಒಳಗಾಗಿದ್ದರೆ, 27563 ಜನರು ಸಾವನ್ನಪ್ಪಿದ್ದಾರೆ.ಫ್ರಾನ್ಸ್‌ನಲ್ಲಿ ಈವರೆಗೆ 1,79,630 ಜನರು ಸೋಂಕಿಗೆ ಒಳಗಾಗಿದ್ದು, 27532 ಜನರು ಸಾವನ್ನಪ್ಪಿದ್ದಾರೆ. ಜರ್ಮನಿಯಲ್ಲಿ, 175752 ಜನರು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಮತ್ತು 7938 ಜನರು ಸಾವನ್ನಪ್ಪಿದ್ದಾರೆ.ಇಂಗ್ಲೆಂಡ್ ನಲ್ಲೂ ಪರಿಸ್ಥಿತಿಯೂ ಹದಗೆಡುತ್ತಿದೆ. ಈ ಸಾಂಕ್ರಾಮಿಕ ರೋಗದಿಂದ ಈವರೆಗೆ 2,41,461 ಜನರು ಬಾಧಿತರಾಗಿದ್ದು, 34,546 ಜನರು ಸಾವನ್ನಪ್ಪಿದ್ದಾರೆ. ಟರ್ಕಿಯಲ್ಲಿ ಈವರೆಗೆ 148067 ಜನರು ಕೊರೊನಾ ಸೋಂಕಿಗೆ ಒಳಗಾಗಿದ್ದು, 4096 ಜನರು ಸಾವನ್ನಪ್ಪಿದ್ದಾರೆ. ಗಲ್ಫ್ ರಾಷ್ಟ್ರ ಇರಾನ್‌ನಲ್ಲಿ 118392 ಜನರು ಸೋಂಕಿಗೆ ಒಳಗಾಗಿದ್ದರೆ, 6937 ಜನರು ಸಾವನ್ನಪ್ಪಿದ್ದಾರೆ.ಇನ್ನು ಕೊರೊನಾ ವೈರಸ್ ನ ಕೇಂದ್ರ ಬಿಂದುವಾಗಿರುವ ಚೀನಾದಲ್ಲಿ ಈವರೆಗೆ 84,044 ಜನರು ಸೋಂಕಿಗೆ ಒಳಗಾಗಿದ್ದಾರೆ ಮತ್ತು 4638 ಸಾವನ್ನಪ್ಪಿದ್ದಾರೆ.