೩.೧೨ ಲಕ್ಷಕ್ಕೆ ಏರಿದ ಕೊರೊನಾ ಸಾವಿನ ಸಂಖ್ಯೆ

ವಾಷಿಂಗ್ಟನ್, ಮೇ ೧೭,ಪ್ರಪಂಚದಾದ್ಯಂತ ಕೊರೊನಾ ಪಾಸಿಟಿವ್  ಪ್ರಕರಣಗಳ ಸಂಖ್ಯೆ ಮಾತ್ರ ಇಳಿಮುಖವಾಗುತ್ತಿಲ್ಲ. ಕೊರೊನಾ  ತಡೆಯಲು ಎಷ್ಟೇ ಕ್ರಮ ಕೈಗೊಳ್ಳುತ್ತಿದ್ದರೂ,  ಪ್ರಕರಣಗಳ ಸಂಖ್ಯೆ ಮಾತ್ರ  ಏರುತ್ತಲೇ ಇದೆ.ಈವರೆಗೂ ಪ್ರಪಂಚದಾದ್ಯಂತ ಕೊರೊನಾ ಪಾಸಿಟಿವ್  ಪ್ರಕರಣಗಳ ಸಂಖ್ಯೆ ೪೭.೧೬ ಲಕ್ಷ ದಾಟಿದೆ. ಇನ್ನೂ ವೈರಸ್ ನಿಂದ ಈವರೆಗೆ ೩.೧೨ಲಕ್ಷ ಮಂದಿ ಮೃತಪಟ್ಟಿದ್ದಾರೆ. ಕೊರೊನಾ ಸೋಂಕಿನಿಂದ   ೧೮.೧೦ ಲಕ್ಷ ಮಂದಿ ಗುಣಮುಖರಾಗಿದ್ದಾರೆ. 
ಇನ್ನೂ  ಬಹಳ ದೇಶಗಳು ಕೊರಾನಾ  ವಿರುದ್ದ  ದೊಡ್ಡ ಸಮರವನ್ನೇ   ನಡೆಸುತ್ತಿವೆ. ಪ್ರಮುಖವಾಗಿ ಬ್ರಿಜೆಲ್ ನಲ್ಲಿ ಇತ್ತಿಚಿಗೆ  ಕೊರೊನಾ  ವೈರಸ್   ಪ್ರಸರಣ  ತೀವ್ರಗೊಂಡಿರುವುದು  ಕಳವಳ ಉಂಟುಮಾಡಿದೆ. ಅಗ್ರರಾಜ್ಯ ಅಮೆರಿಕಾದಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ  ಸ್ವಲ್ಪ ಇಳಿಮುಖಗೊಂಡಿದೆ. ಇನ್ನೂ ರಷ್ಯಾದಲ್ಲೂ ವೈರಸ್  ವ್ಯಾಪ್ತಿ ವೇಗ  ತೀವ್ರತೆ ಪಡೆದುಕೊಂಡಿದೆ.
 ಅಮೆರಿಕಾದಲ್ಲಿ ೧೫,೦೭,೮೬೪ ಪಾಸಿಟಿವ್ ಪ್ರಕರಣಗಳು, ೮೯,೫೯೬ ಮಂದಿ ಸಾವು
ಸ್ಪೇನ್ ನಲ್ಲಿ  ೨,೭೬,೫೦೫ ಪಾಸಿಟಿವ್  ಪ್ರಕರಣಗಳು, ೨೭, ೫೬೩ ಮಂದಿ ಸಾವು.
ರಷ್ಯದಲ್ಲಿ ೨,೭೨,೦೪೩ ಪಾಸಿಟಿವ್ ಪ್ರಕರಣಗಳು ೨,೫೩೭  ಮಂದಿ ಸಾವು
ಇಂಗ್ಲೆಂಡ್ ನಲ್ಲಿ ೨,೪೦,೧೬೧ ಪಾಸಿಟಿವ್ ಪ್ರಕರಣಗಳು, ೩೪,೪೬೬  ಮಂದಿ ಸಾವು
 ಬ್ರೆಜಿಲ್  ನಲ್ಲಿ ೨,೩೩,೧೪೨ ಪಾಸಿಟಿವ್  ಪ್ರಕರಣಗಳು, ೧೫,೬೩೩ ಮಂದಿ ಸಾವು
ಇಟಲಿಯಲ್ಲಿ ೨,೨೪,೭೬೦ ಪಾಸಿಟಿವ್ ಪ್ರಕರಣಗಳು, ೩೧,೭೬೩ ಮಂದಿ ಸಾವು
ಫ್ರಾನ್ಸ್ ನಲ್ಲಿ ೧,೭೯,೩೬೫ ಪಾಸಿಟಿವ್  ಪ್ರಕರಣಗಳು, ೨೭, ೬೨೫ ಮಂದಿ ಸಾವು
ಜರ್ಮನಿಯಲ್ಲಿ ೧,೭೯,೨೪೭ ಪಾಸಿಟಿವ್ ಪ್ರಕರಣಗಳು, ೮,೦೨೭ ಮಂದಿ ಸಾವು.
ಟರ್ಕಿಯಲ್ಲಿ ೧,೪೮,೦೬೭ ಪಾಸಿಟಿವ್ ಪ್ರಕರಣಗಳು, ೪೦೯೬ ಮಂದಿ ಸಾವು
ಇರಾನ್ ನಲ್ಲಿ ೧,೧೮,೩೯೨ ಪಾಸಿಟಿವ್ ಪ್ರಕರಣಗಳು, ೬,೯೩೭ ಮಂದಿ ಮೃತಿ
ಭಾರತದಲ್ಲಿ ೯೦,೯೨೭ ಪಾಸಿಟಿವ್ ಪ್ರಕರಣಗಳು, ೨೮೭೨ ಮಂದಿ ಸಾವು
ಚೈನಾದಲ್ಲಿ ೮೨,೯೪೧ ಪಾಸಿಟಿವ್ ಪ್ರಕರಣಗಳು, ೪,೬೩೩ ಮಂದಿ ಸಾವು
ಕೆನಡಾದಲ್ಲಿ ೭೫,೮೬೪ ಪಾಸಿಟಿವ್ ಪ್ರಕರಣಗಳು, ೫,೬೩೩ ಮಂದಿ  ಸಾವು