ದೊಡವಾಡ ಗ್ರಾಮಸ್ಥರಲ್ಲಿ ಕೊರೊನಾ ಆತಂಕ
ಲೋಕದರ್ಶನ ವರದಿ
ಬೈಲಹೊಂಗಲ 10: ರಾಜ್ಯದಲ್ಲಿ ಅತೀ ಹೆಚ್ಚು ಕೊರೋನಾ ಕೇಸ್ ಪತ್ತೆಯಾಗಿರುವ ಹಿರೇಬಾಗೆವಾಡಿ ಗ್ರಾಮದಲ್ಲಿ ಇಲ್ಲಿಯವರೆಗೆ ಇದ್ದ ಮೂಲತ: ದೊಡವಾಡದ ಗ್ರಾಮದ ವ್ಯಕ್ತಿಯೋರ್ವರು ದೊಡವಾಡ ಗ್ರಾಮಕ್ಕೆ ಭಾನುವಾರ ವಾಪಸ್ ಆಗಮಿಸಿದ್ದಾರೆ ಎಂಬ ಸುದ್ದಿ ತಿಳಿದು ಗ್ರಾಮದ ನೂರಾರು ಜನ ಪೇಟೆ ರಸ್ತೆಯಲ್ಲಿ ಸಾಮಾಜಿಕ ಅಂತರ ಗಾಳಿಗೆ ತೂರಿ ರವಿವಾರ ಜಮಾಯಿಸಿದ್ದರು.
ಆತನನ್ನು ಗ್ರಾಮದಲ್ಲಿ ಕ್ವಾರಂಟೈನ್ ಮಾಡದೆ ಬೇರೆ ಕಡೆ ಕ್ವಾರಂಟೈನ್ ಮಾಡಬೇಕೆಂದು ತಾಲೂಕು ಆರೋಗ್ಯಾಧಿಕಾರಿಗಳಿಗೆ ಮತ್ತು ಸ್ಥಳೀಯ ಗ್ರಾಪಂ ಪಿಡಿಓ ರವರಿಗೆ ಮನವಿ ಮಾಡಿದರು.
ಒಬ್ಬರ ಮೇಲೊಬ್ಬರು ಬೆರಳು ತೋರಿದ ಅಧಿಕಾರಿಗಳು:
ಹಿರೇಬಾಗೆವಾಡಿಯಿಂದ ಅಧಿಕಾರಿಗಳ ಕಣ್ತಪ್ಪಿಸಿ ಕಾಲ್ನಡಿಗೆ ಮುಖಾಂತರ ಗ್ರಾಮಕ್ಕೆ ಬಂದಿರುವ ಆ ವ್ಯಕ್ತಿಯ ಮಕ್ಕಳು ಕೂಡ ಸರಕಾರದ ನಿಯಮದಂತೆ ನಮ್ಮ ತಂದೆಯನ್ನು ನಾವು ಹೋಮ್ ಕ್ವಾರಂಟೈನ್ ಗೊಳಪಡಿಸಲು ಸಿದ್ದರಿದ್ದೇವೆ. ಆದರೆ ನಾವು ಕೆಲಸಕ್ಕೆಂದು ಹೊರಗಡೆ ಹೋಗಲೆಬೇಕು. ಇದರಿಂದ ಗ್ರಾಮಸ್ಥರಲ್ಲೂ ವ್ಯಥಾ ಶಂಕೆ ಬೇಡ ಕೊರೋನಾ ಆತಂಕದಿಂದ ನಮ್ಮನ್ನು ಸಂಶಯದ ಕಣ್ಣಿನಿಂದ ನೋಡುವುದು ಬೇಡ. ಆದ್ದರಿಂದ ತಂದೆಯನ್ನು ಸರಕಾರದ ಕ್ವಾರಂಟೈನ್ ಕೇಂದ್ರದಲ್ಲಿ ಇಟ್ಟು ಅವಧಿ ಮುಗಿದ ನಂತರ ಕಳಿಸಿಕೊಡಿ ಎಂದರು.
ಆದರೆ ತಾಲೂಕು ಆರೋಗ್ಯ ಅಧಿಕಾರಿಗಳು, ಗ್ರಾ.ಪಂ ಪಿಡಿಓರವರು ಒಬ್ಬರ ಮೇಲೊಬ್ಬರು ಆರೋಪಿಸಲು ಪ್ರಾರಂಭಿಸಿದ್ದರಿಂದ ಗ್ರಾಮಸ್ಥರು ಆಶಾ ಕಾರ್ಯಕತರ್ೆಯರಿಂದ ವ್ಯಕ್ತಿಯ ಪರೀಕ್ಷೆ ಮಾಡಿಸಿ ಹೋಮ್ ಕ್ವಾರಂಟೈನ್ ಸೀಲ್ ಹಾಕಿಸಿ ಸ್ಥಳೀಯ ಬಿಸಿಎಮ್ ಹಾಸ್ಟೇಲ್ ನಲ್ಲಿ 14 ದಿನಗಳವೆರೆಗ ಕ್ವಾರಂಟೈನ್ ಅವಧಿ ಪೂರೈಸಲು ಕಳಿಸಿಕೊಟ್ಟರು. ಆದರೆ ಹಾಸ್ಟೇಲ್ ಸುತ್ತಲಿನ ಮನೆಗಳ ಜನ ಆ ವ್ಯಕ್ತಿಯಿಂದ ತಮ್ಮ ಪಾಡೇನು ಆತ ಕ್ವಾರಂಟೈನ್ ನಿಯಮ ಪಾಲಿಸದೆ ಹೊರಗಡೆ ತಿರುಗಾಡಿದರೆ ಜನ ಜೀವನ ಹೇಗೆ ಎಂಬಿತ್ಯಾದಿ ಪ್ರಶ್ನೆ ಗೊಂದಲಗಳಿಂದ ಆತಂಕ ಪಡುವಂತಾಗಿದೆ. ಅಧಿಕಾರಿಗಳು ಸ್ಥಳೀಯವಾಗಿ ಆತನನ್ನು ಕ್ವಾರಂಟೈನ್ ಮಾಡದೆ ಕ್ವಾರಂಟೈನ್ ಕೆಂದ್ರಕ್ಕೆ ದಾಖಲಿಸಿ ಗ್ರಾಮಸ್ಥರಲ್ಲಿರುವ ಜನರ ಭಯ ಆತಂಕ ದೂರ ಮಾಡಬೇಕೆಂದು ತಾ.ಪಂ ಸದಸ್ಯ ಸಂಗಯ್ಯ ದಾಭಿಮಠ, ಪಿಕೆಪಿಎಸ್ ಅಧ್ಯಕ್ಷ ನಿಂಗಪ್ಪ ಚೌಡಣ್ಣವರ, ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 