ಫಿಲಿಪೈನ್ಸ್ ನಲ್ಲಿ 13 ಸಾವಿರ ದಾಟಿದ ಕೊರೊನಾ ಪೀಡಿತರು

ನವದೆಹಲಿ, ಮೇ 20,ಫಿಲಿಪೈನ್ಸನಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದ್ದು, ದೇಶದಲ್ಲಿ ಒಟ್ಟು ಪೀಡಿತರ ಸಂಖ್ಯೆ 13 ಸಾವಿರ ದಾಟಿದೆ. ಬುಧವಾರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ 279 ಹೊಸ ಪ್ರಕರಣ ಬುಧವಾರ ವರದಿಯಾಗಿದ್ದು, ಒಟ್ಟು ಪೀಡಿತರ ಸಂಖ್ಯೆ 13,221ಕ್ಕೆ ಏರಿದೆ. ಇಲಾಖೆ ನೀಡಿದ ಮಾಹಿತಿಯ ಪ್ರಕಾರ 89 ಜನ ಮಹಾಮಾರಿಯಿಂದ ಚೇತರಿಸಿಕೊಂಡಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 2,932ಕ್ಕೆ ತಲುಪಿದೆ. ಒಂದೇ ದಿನದಲ್ಲಿ ಐವರು ರೋಗಿಗಳು ಮೃತ ಪಟ್ಟಿದ್ದು, ಕೊರೊನಾದಿಂದ ಸತ್ತವರ ಸಂಖ್ಯೆ 842 ಆಗಿದೆ. ಆರೋಗ್ಯ ಇಲಾಖೆಯ ಮಾಹಿತಿಯಂತೆ ಮನಿಲಾದಲ್ಲಿ 150 ಪ್ರಕರಣ ಅಥವಾ ದೇಶದಲ್ಲಿ ಒಟ್ಟು ಪ್ರಕರಣದ ಪ್ರತಿಷತ 51 ರಷ್ಟು ವರದಿಯಾಗುತ್ತವೆ. ಉಳಿದಂತೆ 41 ಪ್ರತಿಷತ ಪ್ರಕರಣ ದೇಶದ ವಿವಿಧ ಭಾಗಗಳಿಂದ ವರದಿಯಾಗುತ್ತವೆ. ನಮ್ಮ ಆರೋಗ್ಯ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸುವ ಸಲುವಾಗಿ ನಾವು ಶ್ರಮಿಸುತ್ತಿದ್ದೇವೆ "ಎಂದು ಫಿಲಿಪೈನ್ ಆರೋಗ್ಯ ಕಾರ್ಯದರ್ಶಿ ಫ್ರಾನ್ಸಿಸ್ಕೊ ಡುಕ್ ಬುಧವಾರ ತಿಳಿಸಿದರು.ಲಾಕ್ ಡೌನ್ ನಿಯಮದಲ್ಲಿ ಕೊಂಚ ಮಾರ್ಪಾಡು ಮಾಡಿ, ಕೆಲವು ವಲಯಗಳಿಗೆ ಕೆಲಸ ಮಾಡಲು ಸೂಚಿಸಲಾಗಿದೆ. ಉಳಿದಂತೆ ಮನೆಯಲ್ಲಿಯೇ ಇರಿ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಜಕೊಳ್ಳಿ ಎಂದು ಕರೆ ನೀಡಲಾಗಿದೆ.