ಕೊರೊನಾ ವೈರಸ್ ಜಾಗೃತಿ ಕಾರ್ಯಕ್ರಮ

ಲೋಕದರ್ಶನ ವರದಿ

ಬೆಳಗಾವಿ 30:  ಕೋರೊನಾ ವೈರಸ್ ಬಗ್ಗೆ ತಿಳುವಳಿಕೆಯಿಂದ ಇದ್ದರೆ ಸೋಂಕಿನಿಂದ  ದೂರ ಉಳಿಯಬಹುದಾಗಿದೆ. ಚೈನಾ ದೇಶದಲ್ಲಿ ಹುಟ್ಟಿಕೊಂಡ ಈ ವೈರಸ್ ಅಸಡ್ಡೆ ತೋರಿದರೆ ಪ್ರಾಣಾಂತಕವಾಗಿದೆ ಎಂದು ಕೆಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿದರ್ೇಶಕ ಡಾ. ಎಸ್ ಸಿ ಧಾರವಾಡ  ಎಚ್ಚರಿಸಿದರು. ನಗರದ ಕೆ ಎಲ್ ಇಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೊರೊನಾ ವೈರಸ್ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಮಾತನಾಡುತ್ತಿದ್ದರು. ಕೆಮ್ಮುವಾಗ, ಸೀನುವಾಗ ಸರಿಯಾದ  ಮುಂಜಾಗೃತಾ ಕ್ರಮಗಳನ್ನು ಅನುಸರಿಸಿ, ಒಬ್ಬರಿಂದೊಬ್ಬರು ಮುಟ್ಟುವಾಗ, ಸೋಂಕಿತರು ಜನಸಂದಣಿಯಲ್ಲಿರುವಾಗ ಅಗತ್ಯ ಕ್ರಮಗಳನ್ನು ಅನುಸರಿಸಿದರೆ ಈ ರೋಗದಿಂದ ಅಂಜುವ ಅವಶ್ಯಕತೆಯಿಲ್ಲ ಎಂದು ತಿಳುವಳಿಕೆ ನೀಡಿದರು. 

ಇದೇ ಸಂದರ್ಭದಲ್ಲಿ ಯುಎಸ್ಎಮ್ ಕೆಎಲ್ಇಯ ನಿದರ್ೇಶಕ ಡಾ. ಹೆಚ್ ಬಿ ರಾಜಶೇಖರ  ಮಾತನಾಡುತ್ತ ಕೊರೊನಾ ವೈರಸ್ ಸಾಮಾನ್ಯ ಸೋಂಕಿನಂತೆ ರೋಗ ನಿಧಾನದಲ್ಲಿ ತೋರಿದರೂ ಸಾಮಾನ್ಯ ಲಕ್ಷಣಗಳಾದ ಮೂಗು ಸೋರುವದು, ಕೆಮ್ಮು, ಗಂಟಲು ಬೇನೆ, ಜ್ವರ ಹೀಗೆ ಮುಂತಾದ ಲಕ್ಷಣಗಳ ಕಂಡುಬರುವವುಇದು ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರಲ್ಲಿ ಉಲ್ಬಣಾವಸ್ತೆಗೆ ತಲುಪಿ ಮಾರಣಾಂತಿಕವಾಗಬಹುದು. ಕಾರಣ  ಇಂತಹ ಲಕಣ ಕಂಡುಬಂದವರಿಂದ ಆದಷ್ಟು ದೂರ ಇರುವದು ಒಳಿತು ಹಾಗೂ ಈ ಬೇನೆಯು ಪಕ್ಷಿಗಳಿಂದ, ಪ್ರಾಣಿಗಳಿಂದ ನಂತರ ಪ್ರಾಣಿಗಳಿಂದ ಮನುಷ್ಯರಿಗೆ ತಗುಲುವದು. ಮನುಷ್ಯರಲ್ಲಿ ಒಬ್ಬರಿಂದ ಒಬ್ಬರಿಗೆ ರೋಗಿಯ ಕೆಮ್ಮಿನಿಂದ, ಸೀನುವದರಿಂದ, ಹಾಗೂ ಗಾಳಿಯ ಮೂಲಕ ಹರಡುವದು. ಆದುದರಿಂದ ಮಾಂಸಾಹಾರಿಗಳು ಕಾಳಜೀಯಿಂದ ಇರುವದು ಒಳಿತು. ಸೋಂಕು ಇರುವವರ ಹತ್ತಿರ ಹೋಗುವಾಗ ಮಾಸ್ಕ ಧರಿಸುವದು ಕಡ್ಡಾಯ. ಆದರೂ ಈ ಬೇನೆಯು ಇಲ್ಲಿಯವರೆಗೆ ನಮ್ಮ ದೇಶದಲ್ಲಿ ಕಂಡುಬಂದಿರುವದಿಲ್ಲ ಕಾರಣ ಜನರು ಭಯಬೀತಿ ಹೊಂದಬಾರದು ಎಂದು ತಿಳುವಳಿಕೆ ನೀಡಿದರು.   

ಇನ್ನೊಬ್ಬ ಉಪಸ್ಥಿತ ವ್ಯಕ್ತಿ ಮಾಜೀ ಮೇಯರ ವಿಜಯ ಮೋರೆ ಮಾತನಾಡುತ್ತ ಬೆಳಗಾವಿ ನಗರವು ಹೆಸರಾಂತ  ವೈದ್ಯರಿಗೆ ಹೆಸರುವಾಸಿಯಾಗಿದೆ. ಅಂತೆಯೆ  ನಮ್ಮ ನಗರವು ಯಾವುದೇ ರೋಗಗಳ ಭಯ ಪಡುವಂತಿಲ್ಲ. ರೋಗಗಳ ಬಗ್ಗೆ ಅಗತ್ಯ ತಿಳುವಳಿಕೆ ಶಿಕ್ಷಣ, ಜಾಗೃತಿ ನೀಡುವಲ್ಲಿ ಆರೋಗ್ಯ ಸಂಸ್ಥೆಗಳು ಮುಂಚೂಣಿಯಲ್ಲಿದೆ ಅದರಲ್ಲೂ ಕೆ ಎಲ್ ಇ ಸಂಸ್ಥೆಯ ಹೆಸರು ಪ್ರಥಮಸ್ಥಾನದಲ್ಲಿದೆ ಎಂದು ಅಭಿಮತ ವ್ಯಕ್ತ ಪಡಿಸಿದರು. 

ಈ ಸಂದರ್ಭದಲ್ಲಿ ಕೊರೊನಾ ವೈರಸ್ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಡಾ. ಸೌಮ್ಯ ವೇಣರ್ೆಕರ  ಕೊರೊನಾ ವೈರಸ್ ಹೇಗೆ ಹುಟ್ಟಿಕೊಂಡಿತು? ಅದರ ಲಕ್ಷಣಗಳೇನು? ಇದರ ತೀವ್ರತೆ ಏನು? ಅದರ ರೋಗ ನಿಧಾನ ಹೇಗೆ? ಅದನ್ನು ಹೇಗೆ ಉಪಚರಿಸಬಹುದು ಎಂಬ ವಿಷಯದ ಮೇಲೆ ಸವಿಸ್ತಾರವಾಗಿ ಉಪನ್ಯಾಸ ನೀಡಿದರು. ನಂತರ ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಎಮ್ ಎಸ ಕಡ್ಡಿ ಕೊರೊನಾ ವೈರಸ ಸಂಭಂದಿತ ಅನೇಕ ವಿಷಯಗಳ ಮೇಲೆ ಬೆಳಕು ಚೆಲ್ಲಿದರು.  

ಈ ಸಂದರ್ಭದಲ್ಲಿ ಹಿರಿಯ ನಾಗರಿಕರ ಸಂಸ್ಥೆಯ ಮಾಜೀ ಅಧ್ಯಕ್ಷ ಶ್ರೀ ಪ್ರಭಾಕರ ಕುಲಕಣರ್ಿ ಹಾಗೂ ಕೆ ಎಲ್ ಇ ಹೋಮಿಯೊಪಥಿ ಕಾಲೇಜಿನ ವಿಧ್ಯಾಥರ್ಿಗಳು ಹಾಗೂ ಉಪನ್ಯಾಸಕರು ಮತ್ತು ಕೆ ಎಲ್ ಇ ಸೆಂಟಿನರಿ ಇನ್ಸ್ಟಿಟ್ಯುಟ್ ಆಪ್ ನಸರ್ಿಂಗ ಸೈನ್ಸ ನ ವಿದ್ಯಾಥರ್ಿಗಳು ಹಾಗೂ ಉಪನ್ಯಾಸಕರು ಮತ್ತು  ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಸಮಸ್ತ ವೈದ್ಯಕೀಯ ವೈದ್ಯಕೀಯೇತರ ಸಿಬ್ಬಂದಿ ಹಾಗೂ ಈ ಭಾಗದ ಜನರು ಭಾಗವಹಿಸಿದ್ದರು. ಅರುಣ ನಾಗಣ್ಣವರ ನಿರೂಪಿಸಿದರು. ಆಸ್ಪತ್ರೆಯ ನಿದರ್ೇಶಕ ಡಾ. ಎಸ್ ಸಿ ಧಾರವಾಡ ಸ್ವಾಗತಿಸಿದರು.