ಗದಗ 05: ಕೊರೊನಾ ವೈರಸ್ ಶಂಕಿತ ಪ್ರಕರಣಗಳ ಗಂಟಲು ದ್ರವ್ಯ ಮಾದರಿ ಸಂಗ್ರಹಿಸುವ ಸಂದರ್ಭದಲ್ಲಿ ವೈದ್ಯರ ಸುರಕ್ಷತೆಗಾಗಿ ಗದಗ ನಗರದ ಡಾ. ಸಂಕನೂರ ಆಸ್ಪತ್ರೆಯಿಂದ ತಯಾರಿಸಲಾದ ರಕ್ಷಣಾ ಕವಾಟ (ಪ್ರೊಟೆಕ್ಟಿವ ಬೂತ್) ಅನ್ನು ವಿಧಾನ ಪರಿಷತ ಸದಸ್ಯ ಎಸ್.ವಿ.ಸಂಕನೂರ ಅವರು ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಹಸ್ತಾಂತರಿಸಿದರು. ಮಹಾಮಾರಿ ಕೊವಿಡ್19 ಪ್ರಕರಣಗಳ ಗಂಟಲು ದ್ರವ್ಯ ಪರೀಕ್ಷೆಗಾಗಿ ಸಂಗ್ರಹಿಸಲಾಗುವ ಸಂದರ್ಭದಲ್ಲಿ ಈ ರಕ್ಷಣಾ ಕವಾಟ ವೈದ್ಯರಿಗೆ, ನಸರ್ಿಂಗ್ ಸಿಬ್ಬಂದಿಗೆ ಹೆಚ್ಚಿನ ಸುರಕ್ಷತೆ ಒದಗಿಸುತ್ತದೆ. ರಾಜ್ಯದಲ್ಲಿ ಪ್ರಥಮವಾಗಿ ಜಿಲ್ಲೆಯಲ್ಲಿ ಇದನ್ನು ಬಳಸಲಾಗುತ್ತಿದ್ದು ನಗರದ ಸಂಕನೂರ ಆಸ್ಪತ್ರೆಯ ಡಾ. ಪ್ರಕಾಶ ಸಂಕನೂರ ಇದನ್ನು ಸಿದ್ದಪಡಿಸಿದ್ದಾರೆ ಎಂದು ಸಂಕನೂರ ತಿಳಿಸಿದರು.
ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಮಾತನಾಡಿ ರಕ್ಷಣಾ ಕವಾಟದಿಂದ ಕೊವಿಡ್-19 ಪ್ರಕರಣಗಳ ಪತ್ತೆ ಸಂಬಂಧ ಪರೀಕ್ಷೆಗಾಗಿ ಸಂಗ್ರಹಿಸಲಾಗುವ ಗಂಟಲು ದ್ರವ್ಯ ಮಾದರಿಗಳನ್ನು ಪಡೆಯುವ ಸಂದರ್ಭದಲ್ಲಿ ವೈದ್ಯರಿಗೆ ಹೆಚ್ಚಿನ ಸುರಕ್ಷತೆ ಒದಗಿಸಲಿದ್ದು ಇದಕ್ಕಾಗಿ ಜಿಲ್ಲಾಡಳಿತ ಮತ್ತು ಆರೊಗ್ಯ ಇಲಾಖೆ ಪರವಾಗಿ ಅಭಿನಂದನೆಗಳು ಎಂದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡಾ.ಆನಂದ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ ಎನ್, ಜಿಮ್ಸ ನಿದರ್ೆಶಕ ಡಾ. ಪಿ.ಎಸ್. ಭೂಸರೆಡ್ಡಿ, ಜಿಲ್ಲಾ ಸರ್ಜನ್ ಬಿ.ಸಿ.ಕರಿಗೌಡರ, ಜಿಮ್ಸ ಸೂಕ್ಷ್ಮಾಣು ಜೀವಿ ವಿಭಾಗದ ಮುಖ್ಯಸ್ಥ ಡಾ.ಮಹೇಶ ಬರಗುಂಡಿ ಇದ್ದರು.