ಲೋಕದರ್ಶನವರದಿ
ಕಂಪ್ಲಿ:21 ತಾಲ್ಲೂಕಿನ ಸಣಾಪುರ ಗ್ರಾಮ ಪಂಚಾಯ್ತಿಯಲ್ಲಿ ಮಹಾಮಾರಿ ಕೊರೊನಾ ವೈರಸ್ ಟಾಸ್ಕ್ ಫೋಸರ್್ ಸಮಿತಿ ಸಭೆ ಶನಿವಾರ ನಡೆಯಿತು.
ಸಭೆಯಲ್ಲಿ ಅನೇಕ ಗ್ರಾಮಸ್ಥರು ಮಾತನಾಡಿ, ಮಹಾಮಾರಿಕೊರೊನಾ ವೈರಸ್ದಿಂದ ಲಾಕ್ ಡೌನ ಆಗಿದೆ ಸಣಾಪುರ 'ಗ್ರಾಮದಿಂದ ನಿತ್ಯ 15ಜನರು ತೋರಣಗಲ್ ಜಿಂದಾಲ್ ಕಾಖರ್ಾನೆಗೆ ನೌಕರಿಗೆ ಕೆಲಸಕ್ಕೆ ಹೋಗುತ್ತಿದ್ದಾರೆ ಆದರೆ,ಇತ್ತಿಚಿಗೆ ತೋರಣಗಲ್ ಪ್ರದೇಶದಲ್ಲಿ ಸುಮಾರು 31ಜನರಿಗೆ ಕೊರೊನಾ ವೈರಸ್ ಲಕ್ಷಣಗಳು ಕಂಡು ಬಂದಿದ್ದು, ಈ ಹಿನ್ನೆಲೆಯಲ್ಲಿ ಜಿಂದಾಲ್ ಕಾಖರ್ಾನೆಗೆ ನೌಕರಿಗೆ ಕೆಲಸಕ್ಕೆ ನೌಕರಿಗೆ ತೆರಳದಂತೆ ಸೂಚಿಸಬೇಕು' ಎಂದು ಒತ್ತಾಯಿ ಸಿದರು.
ಸಣಾಪುರ ಪಿಡಿಒ ಶೇಷಗಿರಿ ಮಾತನಾಡಿ, 'ಗ್ರಾಮದಿಂದ ಜಿಂದಾಲ್ಗೆ ಹೋಗುತ್ತಿರುವ ನೌಕರರ ಮನೆ ಮನೆಗೆ ಹೋಗಿ ನೋಟಿಸ್ ನೀಡಲಾಗಿದೆ. ಇನ್ನು ಮುಂದೆ ನೌಕರಿಗೆ ಹೋದರೆ ಜಿಂದಾಲ್ ಅಲ್ಲಿಯೇ ವಾಸ್ತವ್ಯ ಹೂಡುವಂತೆಯೂ ತಿಳಿಸಲಾಗಿದೆ' ಎಂದರು 'ಕೊರೊನಾ ಹಿನ್ನೆಲೆಯಲ್ಲಿ ಗ್ರಾಮದ ಮುಖ್ಯ ರಸ್ತೆಯಲ್ಲಿದ್ದ ತಿಪ್ಪೆಗಳನ್ನು ತೆರವು ಮಾಡಲಾಗಿದೆ. ಚರಂಡಿ ಸ್ವಚ್ಛಗೊಳಿಸಿ ಬ್ಲಿಚಿಂಗ್ ಪೌಡರ್ ಸಿಂಪಡಣೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ನಿತ್ಯ ಕೊರೊನಾ ಜಾಗೃತಿ ಕುರಿತು ಪಂಚಾಯ್ತಿ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ' ಎಂದು ತಿಳಿಸಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಮ್ಮಿಗನೂರು ಮಹಾಂತೇಶ ಸಭೆ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯ್ತಿ ಸದಸ್ಯರು, ಟಾಸ್ಕ್ ಫೋಸರ್್ ಸಮಿತಿ ಸದಸ್ಯರು, ಅಂಗನವಾಡಿ, ಆಶಾ ಕಾರ್ಯಕತರ್ೆಯರು, ಆರೋಗ್ಯ, ಪೊಲೀಸ್ ಇಲಾಖೆ ಸಿಬ್ಬಂದಿ, ಕೊರೊನಾ ಸೈನಿಕರು, ಅನೇಕ ಗ್ರಾಮಸ್ಥರಿದ್ದರು.