ನವದೆಹಲಿ, ಮೇ ೨೪,ರಾಮ ಮನೋಹರ್ ಲೊಹಿಯಾ(ಆರ್ ಎಂ ಎಲ್) ಆಸ್ಪತ್ರೆಯ ಡೀನ್ ಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಬಾಧಿತ ವೈದ್ಯರಿಗೆ ಸ್ವಲ್ಪ ಜ್ವರ ಕಂಡು ಬಂದಿದ್ದು, ಆದರೆ ಕೊರೊನಾ ಲಕ್ಷಣಗಳು ಇರಲಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಅವರಿಗೆ ಕೊರೊನಾ ಪರೀಕ್ಷೆ ನಡೆಸಿದಾಗ .. ಕೊರೊನಾ ಪಾಸಿಟಿವ್ ಕಂಡುಬಂದಿದೆ. ಆರ್ ಎಂ ಎಲ್ ಡೀನ್ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೊರೊನಾ ರೋಗಿಗಳ ಮೂಲಕ ಡೀನ್ ಗೆ ಕೊರೊನಾ ಸೋಂಕು ತಗುಲಿರಬಹುದು ಎಂದು ಆಸ್ಪತ್ರೆ ಸಿಬ್ಬಂದಿ ಭಾವಿಸಿದೆ. ವೈದ್ಯರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಉಳಿದ ಸಿಬ್ಬಂದಿ ಪ್ರಾರ್ಥಿಸುತ್ತಿದ್ದಾರೆ.
ಕೊರೊನಾ ವೈರಸ್ ಪ್ರಕರಣಗಳಿಗೆ ಆರ್ ಎಂ ಎಲ್ ಆಸ್ಪತ್ರೆ ನೋಡಲ್ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ.ಕೊರೊನಾ ವೈರಸ್ ನಿಂದಾಗಿ ದೆಹಲಿಯ ಏಮ್ಸ್ ವೈದ್ಯ ಡಾ. ಜಿತೇಂದ್ರ ನಾಥ್ ಪಾಂಡೆ(೭೮) ಶನಿವಾರ ಮೃತಪಟ್ಟಿದ್ದರು. ಕಳೆದ ಕೆಲವು ವಾರಗಳಿಂದ ಕೊರೊನಾ ಬಾಧಿತರಿಗೆ ಡಾ. ಜಿತೇಂದ್ರನಾಥ್ ಪಾಂಡೆ ಚಿಕಿತ್ಸೆ ಕಲ್ಪಿಸುತ್ತಿದ್ದರು. ಈ ಕ್ರಮವಾಗಿ ಅವರಿಗೆ ವೈರಸ್ ಸೋಂಕು ತಗುಲಿ ಮೃತಪಟ್ಟಿದ್ದಾರೆ. ಪಲ್ಮನಾಲಜಿ ವಿಭಾಗದ ನಿರ್ದೇಶಕರಾಗಿದ್ದ ಜಿತೇಂದ್ರ ನಾಥ್ ಅವರ ವೈದ್ಯ ಪತ್ನಿಗೂ ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದಿದ್ದು ಅವರಿಗೂ ಚಿಕಿತ್ಸೆ ಕಲ್ಪಿಸಲಾಗುತ್ತಿದೆ.