ಬಳ್ಳಾರಿ/ಹೊಸಪೇಟೆ,ಏ.18: ಕೋವಿಡ-19 ಹಿನ್ನಲೆಯಲ್ಲಿ ಸಾರ್ವಜನಿಕ ಅಂತರ ಹಾಗೂ ಕರೋನಾ ವೈರಾಣು ತಗುಲದಂತೆ ಅನೇಕ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹೊಸಪೇಟೆ ನಗರಸಭೆ ಆಯುಕ್ತರಾದ ಜಯಲಕ್ಷ್ಮಿ ಅವರು ಗೋಡೆಗಳಲ್ಲಿ ಚಿತ್ರಗಳನ್ನು ರಚಿಸುವ ಮೂಲಕ ಜನಜಾಗೃತಿಯನ್ನು ಮೂಡಿಸುತ್ತಿದ್ದಾರೆ.
ಹೊಸಪೇಟೆ ನಗರಸಭೆಯು ಆರೋಗ್ಯ ಇಲಾಖೆಯೊಂದಿಗೆ ಧ್ವನಿ, ಮುದ್ರಿಕೆ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ ಅದೇ ರೀತಿಯಾಗಿ ನಗರಸಭೆ ಆಯುಕ್ತರಾದ ಜಯಲಕ್ಷ್ಮಿ ಅವರು ನಗರಸಭೆ ಕಾಯರ್ಾಲಯದ ಸುತ್ತ ಮುತ್ತಲಿನ ಕಟ್ಟಡಗಳ ಗೋಡೆಗಳ ಮೇಲೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ, ಮಾಸ್ಕ್ ಧರಿಸುವ, ಸ್ಯಾನಿಟೈಸರ್ ಬಳಕೆ, ವೈದ್ಯರ ಹಾಗೂ ದಾದಿಯರ ಸೇವೆ ಸೇರಿದಂತೆ ಹಲವಾರು ವಸ್ತು ವಿಷಯಗಳ ಕುರಿತು ಚಿತ್ರಗಳನ್ನು ಗೋಡೆಗಳಲ್ಲಿ ಬಿತ್ತರಿಸುತ್ತಿದ್ದಾರೆ. ಗ್ರೀನ್ ಹೊಸಪೇಟೆ ಸಂಸ್ಥೆ ಮತ್ತು ವಿಶ್ವ ಚಿತ್ರಕಾಲ ಸಂಸ್ಥೆಯ ಕಲಾವಿದರು ಈ ಯೋಜನೆಗೆ ಸಹಕಾರ ನೀಡುತ್ತಿದ್ದಾರೆ.