ಕೊರೊನಾ : ರಾಜ್ಯಸಭಾ ಕಾರ್ಯದರ್ಶಿ ಕಚೇರಿ ಕಾರ್ಯಾಚರಣೆ ಪುನರಾರಂಭ

ನವದೆಹಲಿ, ಏ 20, ರಾಜ್ಯ ಸಭಾ ಕಾರ್ಯದರ್ಶಿ ಕಚೇರಿ 27 ದಿನಗಳ ನಂತರ ಸೋಮವಾರ ಪುನಃ ಕಾರ್ಯಾರಂಭ ಮಾಡಿದೆ. ಮಾರ್ಚ್ 25 ರಿಂದ ಲಾಕ್ ಡೌನ್ ಜಾರಿಯಾದ ಕಾರಣ ಕಚೇರಿ ತೆರೆದಿರಲಿಲ್ಲ.   ಕಡಿಮೆ ಸಿಬ್ಬಂದಿಯೊಂದಿಗೆ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸದೇ ತುರ್ತು ಕೆಲಸಗಳತ್ತ ಗಮನಹರಿಸುವಂತೆ ರಾಜ್ಯಸಭಾಧ್ಯಕ್ಷ ಮತ್ತು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಸೂಚನೆ ನೀಡಿದ್ದಾರೆ. ಕೊರೊನಾ ವೈರಾಣು ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಂಸತ್ ಭವನದೊಳಗೆ ಪ್ರವೇಶಿಸುವ ವಾಹನಗಳ ನೈರ್ಮಲ್ಯ ಕಾರ್ಯ ಹಾಗೂ ಸಿಬ್ಬಂದಿಯ ಆರೋಗ್ಯ ತಪಾಸಣೆ ನಡೆಯಲಿದೆ ಎಂದು ವೆಂಕಯ್ಯನಾಯ್ಡು ಮಾಹಿತಿ ನೀಡಿದ್ದಾರೆ.ಲಾಕ್ ಡೌನ್ ಭಾಗಶಃ ತೆರವಾಗಿದ್ದು ಕೆಲಸಗಳನ್ನು ಮಾಡಲೇಬೇಕಾದ ಸಂಬಂಧಪಟ್ಟ ಎಲ್ಲರೂ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಿದ್ದಾರೆ.