ನವದೆಹಲಿ, ಜೂನ್ 6, ಜಾರಿ ನಿರ್ದೇಶನಾಲಯದ 6 ಅಧಿಕಾರಿಗಳಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿರುವ ಕಾರಣ ನಿರ್ದೇಶನಾಲಯದ ಕೇಂದ್ರ ಕಚೇರಿಯನ್ನು ಎರಡು ದಿನಗಳ ಕಾಲ ಸೀಲ್ ಮಾಡಲಾಗಿದೆ.ಈ ಆರು ಅಧಿಕಾರಿಗಳ ಜತೆ ಸಂಪರ್ಕ ಹೊಂದಿದ್ದ ಹತ್ತಕ್ಕೂ ಅಧಿಕ ಅಧಿಕಾರಿಗಳನ್ನು ಪತ್ತೆಹಚ್ಚಿ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಇತ್ತೀಚೆಗೆ ಈಡಿ ಕೇಂದ್ರ ಕಚೇರಿಯ ಎಸ್ಟಾಬ್ಲಿಶ್ಮೆಂಟ್ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ಕಿರಿಯ ಶ್ರೇಣಿಯ ಅಧಿಕಾರಿಯೊಬ್ಬರಿಗೆ ಕೊರೋನ ಸೋಂಕು ದೃಢ ಪಟ್ಟಿತ್ತು. ಅವರು ಕೇಂದ್ರ ಅರೆಸೇನಾ ಪಡೆಯಿಂದ ತನಿಖಾ ಸಂಸ್ಥೆಗೆ ಬಂದಿದ್ದರು.