ಲೋಕದರ್ಶನ ವರದಿ
ಧಾರವಾಡ 31:
ಮಹಿಳಾ ಶಕ್ತಿಯೇ ಸರ್ವಶಕ್ತಿ-ಶ್ರೀ ರಮಾಕಾಂತ ಕ್ಷೇತ್ರ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ
ಧಾರವಾಡ ತಾಲೂಕ ವಿದ್ಯಾಗಿರಿ ವಲಯದ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳು
ವಿದ್ಯಾಗಿರಿ, ಜನ್ನತನಗರ, ಸಿದ್ದರಾಮೇಶ್ವರ ನಗರ ಇವರ ಸಂಯುಕ್ತ
ಆಶ್ರಯದಲ್ಲಿ ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣ
ಸಮಾರಂಭವನ್ನು ರಮಾಕಾಂತ್ ವಾಯ್ ಹಲ್ಲೂರ ಸಿ.ಪಿ.ಐ. ವಿದ್ಯಾಗಿರಿ
ಪೋಲಿಸ್ ಸ್ಟೇಷನ್ ಇವರು ಉದ್ಘಾಟಿಸಿ ಶ್ರೀಕ್ಷೇತ್ರ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮಹಿಳೆಯರು ಅರಿವನ್ನು
ಪಡೆದುಕೊಂಡು ಆಥರ್ಿಕ ನೆರವಿನೊಂದಿಗೆ ಸ್ವಾವಲಂಬಿಯಾಗಿ ಬದುಕುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಧಾರವಾಡ ತಾಲೂಕಿನ ಯೋಜನಾಧಿಕಾರಿಯವರಾದ ಉಲ್ಲಾಸ್ ಮೇಸ್ತರವರು ಕಾರ್ಯಕ್ರಮವನ್ನು ಪ್ರಾಸ್ತಾವಿಸಿ ನೂತನ ಒಕ್ಕೂಟಗಳ ಪದಾಧಿಕಾರಿಗಳಿಗೆ
ಜವಾಬ್ದಾರಿ ಹಸ್ತಾಂತರಿಸಿ ಪ್ರತಿಜ್ಞೆಯ ವಿಧಿಯನ್ನು ಬೋದಿಸಿ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿ ರಜನಿ ಎಚ್.ದಾಸ್,
ಪ್ರಾಚಾರ್ಯರು, ಜೆ.ಎಸ್.ಎಸ್.ಪ್ರೌಢ ಶಾಲೆರವರು ಮಹಿಳೆಯರು ಯೋಜನೆಯ ಸ್ವ-ಸಹಾಯ ಸಂಘಗಳಿಗೆ
ಸೇರಿಕೊಂಡು ತಮ್ಮ ಮಕ್ಕಳಿಗೆ ಉನ್ನತ
ಶಿಕ್ಷಣವನ್ನು ಕೊಡಿಸುತ್ತಿರುವುದು ಸಂಘದ ಅಭಿವೃದ್ಧಿಗೆ ಸಾಕ್ಷಿಯಾಗಿದೆ.ಕೆಲವು ಮಹಿಳೆಯರಿಗೆ ವಿದ್ಯೆ ಇಲ್ಲದಿದ್ದರು ಬುದ್ದಿ ಶಕ್ತಿಯ ಮೂಲಕ ವ್ಯವಹಾರವನ್ನು ನಡೆಸುತ್ತಿರುವುದು
ಮಹತ್ವದ ಕಾರ್ಯವಾಗಿದೆ ಈ ಹೆಗ್ಗಳಿಕೆಗೆ ಶ್ರೀಕ್ಷೇತ್ರ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಪಾತ್ರವಾಗಿದೆ ಎಂದು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂತೋಷ ಪೂಜಾರ, ಕನರ್ಾಟಕ ರಾಜ್ಯಮಾನವ ಹಕ್ಕುಗಳ ಆಯೋಗದ ಉಪಾಧ್ಯಕ್ಷರು ಉಪಸ್ಥಿತರಿದ್ದರು.ಮೇಲ್ವಿಚಾರಕರಾದ ಶ್ರೀತಿಮ್ಮಪ್ಪರವರು ನಿರೂಪಿಸಿದರು ವಲಯದ ಮೇಲ್ವಿಚಾರಕಿಯಾದ ಪೂಣರ್ಿಮಾ,
ವಲಯದ ಸೇವಾ ಪ್ರತಿನಿಧಿಗಳು ಹಾಗೂ
ಸಂಘದ ಸದಸ್ಯರು ಉಪಸ್ಥಿತರಿದ್ದರು.