ಸಹಕಾರ ಸಂಸ್ಥೆಗಳಿಗೆ ಆದಾಯ ತೆರಿಗೆ ರದ್ಧತಿಗೆ ಕೇಂದ್ರಕ್ಕೆ ಮನವಿ

ಲೋಕದರ್ಶನ ವರದಿ

ಕೊಪ್ಪಳ 15: ಸಹಕಾರ ಕ್ಷೇತ್ರ ಈ ದೇಶದ ಕೃಷಿಕರ ಮಧ್ಯಮ ವರ್ಗದವರ ಹಾಗೂ ಕಡುಬಡವರಿಗೆ ಸೇವೆ ನೀಡುವ ಕ್ಷೇತ್ರವಾಗಿದೆ. ಕಳೆದ 110 ವರ್ಷಕ್ಕಿಂತ ಹೆಚ್ಚು ಕಾಲದಿಂದ ಸಹಕಾರ ಸಂಸ್ಥೆಗಳು ಈ ದೇಶದ ಆಥರ್ಿಕ ವ್ಯವಸ್ಥೆಗೆ ಅತ್ಯಮೂಲವಾದ ಕೊಡುಗೆ ನೀಡಿದೆ. ಆದರೆ ಕೇಂದ್ರ ಸರಕಾರ ಜಾರಿಗೊಳಿಸಿರುವ ಆದಾಯ ತೆರಿಗೆ (ಜಿಎಸ್ಟಿ, ಟಿಡಿಎಸ್) ಹೇರಿಕೆಯಿಂದ ಸಹಕಾರ ಕ್ಷೇತ್ರ ಕುಂಠಿತಗೊಂಡಿದೆ. ಕೂಡಲೇ ಆದಾಯ ತೆರಿಗೆ ರದ್ಧು ಮಾಡಲು ಕೇಂದ್ರ ಸರಕಾರ ಮುಂದಾಗಬೇಕೆಂದು ವಿವಿಧ ಸಹಕಾರಿ ಕ್ಷೇತ್ರಗಳು ಒತ್ತಾಯಿಸಿವೆ.

ಶುಕ್ರವಾರ ಬೆಳಿಗ್ಗೆ ಜಿಲ್ಲೆಯ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಪತ್ತಿನ ಸೌಹಾರ್ದ ಸಹಕಾರಿ ಕೊಪ್ಪಳ, ಗಂಗಾ ಯಮುನಾ ಪತ್ತಿನ ಸಹಕಾರಿ, ಭಗತ್ಸಿಂಗ್ ಪತ್ತಿನ ಸೌಹಾರ್ದ ಸಹಕಾರಿ, ಬಸವೇಶ್ವರ ವಿವಿಧೋದ್ದೇಶ ಪತ್ತಿನ ಸಹಕಾರಿ, ಗಾಣದ ಕಣ್ಣಪ್ಪ ಜ್ಯೋತಿ ಪತ್ತಿನ ಸಹಕಾರ ಸೇರಿದಂತೆ ವಿವಿಧ ಸಹಕಾರಿ ಸಂಘಗಳ ಪದಾಧಿಕಾರಿಗಳು, ಆಡಳಿತ ಮಂಡಳಿಯ ನಿದರ್ೇಶಕರು, ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿ ಕೂಡಲೇ ಜಿಎಸ್ಟಿ-ಟಿಡಿಎಸ್ ರದ್ಧುಗೊಳಿಸಿ ಸಹಕಾರಿ ಕ್ಷೇತ್ರಗಳ ಉಳಿವಿಗೆ ಮತ್ತು ಬೆಳವಣಿಗೆಗೆ ಸಹಕರಿಸಬೇಕೆಂದು ಶಿವಶರಣೇ ಹೇಮರೆಡ್ಡಿ ಮಲ್ಲಮ್ಮ ಬ್ಯಾಂಕಿನ ಅಧ್ಯಕ್ಷ ಚಂದ್ರಕಾಂತ ಸಿಂಗಟಾಲೂರು ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸರಕಾರಕ್ಕೆ ಒತ್ತಾಯಿಸಿದ್ದಾರೆ. ವ್ಯವಸ್ಥಾಪಕ ಬಸವರಾಜ ರಾಮದುರ್ಗ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.