ಸಸಿ ನೆಡುವ ಮೂಲಕ ಸಹಕಾರಿ ವಾರಕ್ಕೆ ಚಾಲನೆ
Cooperative Week kicked off with a sapling plantation drive
ಲೋಕದರ್ಶನ ವರದಿ
ಮುಂಡಗೋಡ 07 : ಕೇಂದ್ರ ಸರ್ಕಾರದ ಸಹಕಾರಿ ಸಚಿವಾಲಯ ಸ್ಥಾಪನೆಯಾಗಿ ಐದು ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಆಚರಿಸಲಾಗುತ್ತಿರುವ ‘ಸಹಕಾರಿ ವಾರ’ ಅಂಗವಾಗಿ ತಾಲೂಕಿನ ಪಿ.ಎಲ್.ಡಿ. ಬ್ಯಾಂಕ್ ವತಿಯಿಂದ ಸೋಮವಾರ ಬ್ಯಾಂಕ್ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಬ್ಯಾಂಕಿನ ಅಧ್ಯಕ್ಷ ವೈ.ಪಿ. ಭುಜಂಗಿ, ನಿರ್ದೇಶಕರಾದ ಮಂಜುನಾಥ ಶೆಟ್, ಪಕೀರ್ಪ ಒಣಿಕೇರಿ ಹಾಗೂ ರಮೇಶ್ ಜೀವಣ್ಣನವರ್ ಅವರು ಸಸಿ ನೆಟ್ಟು ಸಹಕಾರಿ ವಾರಕ್ಕೆ ಚಾಲನೆ ನೀಡಿದರು. ಬ್ಯಾಂಕಿನ ವ್ಯವಸ್ಥಾಪಕ ರಮೇಶ್ ದಾಂಡೇಕರ್, ಸಹ ವ್ಯವಸ್ಥಾಪಕ ಕಲ್ಯಾಣ್ ಕುಮಾರ್ ಚೌಶೆಟ್ಟಿ, ಸಿಬ್ಬಂದಿಗಳಾದ ಮಲ್ಲಿಕಾರ್ಜುನ್ ಹುಬ್ಬಳ್ಳಿ, ಸುಧೀರ್ ಪಾಯಣ್ಣನವರ್, ಸಂದೀಪ ರಾಯ್ಕರ್, ವಿನಯ, ಸೇರಿದಂತೆ ಬ್ಯಾಂಕಿನ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 