ಬ್ಯಾಂಕಿನ ಶ್ರೇಯೊಭಿವೃದ್ಧಿಗೆ ಶ್ರಮಿಸಲು ಕ್ಷೇತ್ರದ ಸಹಕಾರ ಮುಖ್ಯ: ಬೊಮ್ಮಾಯಿ

ಶಿಗ್ಗಾವಿ 24ಃ ತಾಲೂಕಾ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಬಾಡ ಸಾಲಗಾರರ ಕ್ಷೇತ್ರದಿಂದ ನಾರಾಯಣಪೂರ ಗ್ರಾಮದ ಬಸವಣ್ಣೆಪ್ಪ ಎಮ್ ಕ್ಷೌರದ ಇವರು ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನು ಬಾಡ ಕ್ಷೇತ್ರದ ಆಡಳಿತ ಮಂಡಳಿಗೆ ಸದಸ್ಯರನ್ನಾಗಿ ಕ್ಷೇತ್ರದ ಜನತೆಯ ಸಹಕಾರದಿಂದ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಆಯ್ಕೆಯಾದ ಬಸವಣ್ಣೆಪ್ಪ ಎಮ್ ಕ್ಷೌರದ ಅವರನ್ನು ಪಟ್ಟಣದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅಭಿನಂದಿಸಿ ಮಾತನಾಡಿ ಹಿರಿಯರಾದ ಕ್ಷೌರದ ಅವರ ಸೇವೆ ಸಹಕಾರಿ ಕ್ಷೇತ್ರಕ್ಕೆ ಅವಶ್ಯವಿದ್ದು ಬ್ಯಾಂಕಿನ ಶ್ರೇಯೊಭಿವೃದ್ಧಿಗೆ ಶ್ರಮಿಸಲು ಕ್ಷೇತ್ರದ ಎಲ್ಲರ ಸಹಕಾರ ಭಾವನೆ ಮುಖ್ಯವಾಗಿದೆ ಎಂದು ತಿಳಿಸಿ ಹಾರೈಸಿದರು.

ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಶಶಿಧರ ಹೊನ್ನಣ್ಣವರ, ವಿವಿಧ ಮುಖಂಡರಾದ ಮನೋಹರ ಹಿಂಡಿ, ನಿಂಗಣ್ಣ ಹರಿಜನ, ದುಂಡಪ್ಪ ರಾಯಣ್ಣನವರ, ಪುಟ್ಟಪ್ಪ ಬಾಗಣ್ಣವರ, ಕರಿವೀರಪ್ಪ ಮೇಟಿ, ಶಣ್ಮುಕಪ್ಪ ಬಂಕಾಪೂರ, ಬಸವರಾಜ ಕಲಿವಾಳ, ಫಕ್ಕಿರಪ್ಪ ಹರಿಜನ, ಕುಮಾರಸ್ವಾಮಿ ಕಡ್ಲಿಮಠ ಸೇರಿದಂತೆ ಇತರರು ಇದ್ದರು.