ಗದಗ 19: ಗದಗ ಜಿಲ್ಲೆಯನ್ನು ತಂಬಾಕು ಮುಕ್ತ ಜಿಲ್ಲೆಯನ್ನಾಗಿಸಲು ಆರೋಗ್ಯ ಇಲಾಖೆಯೊಂದಿಗೆ ವಿವಿಧ ಇಲಾಖೆಗಳ ಸಹಕಾರ ಅಗತ್ಯವಾಗಿದೆ ಎಂದು ಗದಗ ಅಪರ ಜಿಲ್ಲಾಧಿಕಾರಿ ಸತೀಶಕುಮಾರ್ ಎಂ ತಿಳಿಸಿದರು.
ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ತಂಬಾಕು ನಿಷೇಧ ಕೋಶ ಗದಗದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಹಶೀಲ್ದಾರರ ನೇತೃತ್ವದ ತಾಲೂಕಾ ಮಟ್ಟದ ತನಿಖಾದಳದ ಮೂಲಕ ಇನ್ನೂ ಹೆಚ್ಚಿನ ಕಾರ್ಯಾಚರಣೆ ನಡೆಸುವುದರ ಮೂಲಕ ಕೋಟ್ಪಾ ಕಾಯ್ದೆ ಪರಿಣಾಮಕಾರಿ ಅನುಷ್ಟಾನ ಮಾಡಬೇಕು. ನಗರಸಭೆಯವರು ಅಂಗಡಿಗಳಿಗೆ ಲೈಸನ್ಸ ನೀಡುವಾಗ ಅಂತಹ ಅಂಗಡಿಯವರಿಗೆ ಕಡ್ಡಾಯವಾಗಿ ಧೂಮಪಾನ ನಿಷೇಧದ ನಾಮಫಲಕವನ್ನು ಅಳವಡಿಸಲು ಕಟ್ಟುನಿಟ್ಟಾಗಿ ಸೂಚಿಸಬೇಕು. ಅಬಕಾರಿ ಹಾಗೂ ಕೆ.ಎಸ್.ಆರ್.ಟಿ.ಸಿ ಯವರು ತಮ್ಮ ಅಧೀನದ ಕಾರ್ಯಕ್ಷೇತ್ರದಲ್ಲಿ ತಂಬಾಕು ನಿಷೇಧದ ಕುರಿತು ಕ್ರಮ ಕೈಗೊಳ್ಳಬೇಕು. ಪೊಲೀಸ ಇಲಾಖೆಯವರು ಆರೋಗ್ಯ ಇಲಾಖೆಯವರೊಂದಿಗೆ ತಂಬಾಕು ನಿಯಂತ್ರಣ ದಾಳಿ ಮಾಡುವಾಗ ಸಹಕರಿಸಬೇಕು. ತಂಬಾಕು ನಿಷೇಧದ ಕುರಿತು ಜಾಗೃತಿ ಹಾಗೂ ಅನುಷ್ಟಾನ ಕಾರ್ಯಕ್ರಮಗಳು ಯಶಸ್ವಿಯಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಸತೀಶಕುಮಾರ ಎಂ. ತಿಳಿಸಿದರು.
ಗದಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ ಸಿ.ಬಸರೀಗಿಡದ ಇವರು ಮಾತನಾಡಿ ಜಿಲ್ಲೆಯಲ್ಲಿ ಕಾರ್ಯಕ್ರಮದ ಪ್ರಗತಿ ಕುರಿತು ವಿವರವಾದ ಮಾಹಿತಿ ನೀಡಿದರು. ಈಗಾಗಲೇ ಕೆ.ಎಸ್.ಆರ್.ಟಿ.ಸಿ. ಡಿಪೋದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಪೊಲೀಸ ಅಧಿಕಾರಿಗಳಿಗೆ ತಂಬಾಕು ನಿಷೇಧದ ಕುರಿತು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರಸ್ತುತ ವರ್ಷದಲ್ಲಿ 100 ಶಾಲಾ ಕಾಲೇಜುಗಳಿಗೆ ಎಲ್ಲೋ ಲೈನ್ ಹಾಗೂ ವಾಲ್ ಪೇಟಿಂಗ್ ಬರೆಸುವುದರ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಎಲ್ಲಾ ತಾಲೂಕುಗಳಲ್ಲಿ ರೋಜ್ಕ್ಯಾಂಪೇನ್ ಮಾಡಿ ಶಾಲಾ/ಕಾಲೇಜು ವಿದ್ಯಾಥರ್ಿಗಳು ತಮ್ಮ ಮನೆಯಿಂದ ಪಾಲಕರಿಂದ ಗುಲಾಬಿ ಹೂಗಳನ್ನು ಸಂಗ್ರಹಿಸಿ ತರುವ ಮೂಲಕ ಮನೆಯಲ್ಲಿ ತಂಬಾಕು ಮಾರಾಟಗಾರರಲ್ಲಿ, ತಂಬಾಕು ವ್ಯಸನಿಗಳಲ್ಲಿ, ಸಾರ್ವಜನಿಕರಲ್ಲಿ ತಂಬಾಕು ನಿಯಂತ್ರಣ ಕುರಿತು ಜಾಗೃತಿ ಮೂಡಿಸಲಾಗಿದೆ. ಜಿಲ್ಲೆಯಲ್ಲಿ 47 ಕಡೆಗಳಲ್ಲಿ ದಾಳಿ ನಡೆಸಿ 84,600 ರೂ. ದಂಡ ವಿಧಿಸಲಾಗಿದೆ. ಎಂದು ಡಾ. ಸತೀಶ ಬಸರಿಗಿಡದ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಬಿ. ಕಲ್ಲೇಶ, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ. ಬಿ.ಎಂ. ಗೊಜನೂರ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ರಾಜೇಂದ್ರ ಸಿ ಬಸರಿಗಿಡದ, ಜಿಲ್ಲಾ ಕಾರ್ಮಿಕ ಅಧಿಕಾರಿ ಸುಧಾ ಗರಗ, ಪೊಲೀಸ ಇಲಾಖೆಯ ಕಿರಣ ಕಾಂಬ್ಳೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರರಾದ ಗೋಪಾಲ ಸುರಪುರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಅನುಷ್ಟಾನ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು