ಕಾರ್ಮಿಕ ವರ್ಗದ ಆರ್ಥಿಕ ಸುಧಾರಣೆ ಗೆ ಸಹಕಾರ ಅಗತ್ಯ: ಪಟೇಲ್

Cooperation is necessary for economic improvement of the working class: Patel

ಕೊಪ್ಪಳ 02: ಬೆವರು ಸುರಿಸಿ ದುಡಿಯುವ ವರ್ಗ ಕಾರ್ಮಿಕರ ಆರ್ಥಿಕ ಸುಧಾರಣೆಯಾಗಲು ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದು ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು. ಅವರು ಕೊಪ್ಪಳದಲ್ಲಿ ಕರ್ನಾಟಕ ಟೈಲರ್ ಕಾರ್ಮಿಕರ ಅಸೋಸಿಯೇಷನ್ ವತಿಯಿಂದ ಏರಿ​‍್ಡಸಿದ ಟೈಲರ್ ಕಾರ್ಮಿಕರ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಕಾರ್ಮಿಕರು ಸತತ ಪರಿಶ್ರಮ ಪಟ್ಟು ದುಡಿಯುತ್ತಾರೆ ಅವರಿಗೆ ಸರಿಯಾದ ಸಮಯದಲ್ಲಿ ಸರಿಯಾದ ಕೂಲಿ ಸಿಗಬೇಕು, ಅವರ ಆರ್ಥಿಕ ಸಬಲೀಕರಣಕ್ಕಾಗಿ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳ ಬಗ್ಗೆ ಸಂಬಂಧಪಟ್ಟ ಕಾರ್ಮಿಕ ಇಲಾಖೆ ಅಧಿಕಾರಿಗಳು ಮನವರಿಕೆ ಮಾಡಿ ಕೊಡಬೇಕು ಕಾರ್ಮಿಕ ವರ್ಗದಲ್ಲಿ ಜಾಗೃತಿ ಮೂಡಿಸಬೇಕು ಎಂದು ಕೊಪ್ಪಳ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು. 

ಸಮಾರಂಭದ ಉದ್ಘಾಟನೆಯನ್ನು ಡಾ. ಸಂಗಮೇಶ್ ಕಲಯಾಳ ರವರು ನೆರವೇರಿಸಿದರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ ಶ್ರೀನಿವಾಸ ಗುಪ್ತ, ಕಾರ್ಮಿಕ ಇಲಾಖೆಯ ಅಧಿಕಾರಿ ಮಂಜುಳಾ, ಅರ್ಚನಾ ಶಶಿಮಠ ಮತ್ತು ಟೈಲರ್ ಕಾರ್ಮಿಕರ ಅಸೋಸಿಯೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ್ ಹಾಗೂ ಕೊಪ್ಪಳ ಘಟಕದ ಅಧ್ಯಕ್ಷ ಮಹೇಶ್ ರವರು ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು,