ಬಾಗಲಕೋಟೆ06: ಮಕ್ಕಳ ಸಾಗಾಣಿಕೆ ಒಂದು ದುರಂತವಾಗಿ ಪರಿಣಮಿಸಿದ್ದು, ಸಾಗಾಣಿಕೆ ಮುಕ್ತ ಭಾರತವನ್ನಾಗಿಸಲು ಎಲ್ಲ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ನ್ಯಾ.ಹೇಮಲತಾ ಹುಲ್ಲೂರ ತಿಳಿಸಿದರು.
ಜಿಲ್ಲಾಡಳಿತ ಭವನದ ನೂತನ ಆಡಿಟೋರಿಯಂ ಹಾಲ್ನಲ್ಲಿಂದು ಜಿಲ್ಲಾಡಳಿತ, ರೀಚ್ ಸಂಸ್ಥೆ, ಸ್ಪಂದನಾ ಬೆಳಗಾವಿ, ಕೈಲಾಸ ಸತ್ಯಾಥರ್ಿ ಚಿಲ್ಡ್ರನ್ ಪೌಂಡೇಶನ್ ನವದೆಹಲಿ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಹಮ್ಮಿಕೊಂಡ ಮಕ್ಕಳ ಸಾಗಾಣಿಕೆ ಹಾಗೂ ಲೈಂಗಿಕ ಶೋಷಣೆ ಕುರಿತ ಜಿಲ್ಲಾ ಮಟ್ಟದ ಸಾರ್ವಜನಿಕ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿರುವ ಆಥರ್ಿಕವಾಗಿ ದುರ್ಬಲವಾಗಿರುವ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡು ಮಾನವ ಸಾಗಾಣಿಕೆ ಚಟುವಟಿಕೆಗಳು ನಡೆಯುತ್ತಿವೆ. ಬಡವರಿಗೆ ದಿಲಗೂಲಿಗೆಂದು ಕರೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದಾರೆ. ಇದನ್ನು ತಪ್ಪಿಸಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಈ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಜೊತೆ ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ ಎಂದು ತಿಳಿಸಿದರು. ದೇಶದ ಅಭಿವೃದ್ದಿಗೆ ಕಾನೂನಿನ ಅರಿವು ಸಹ ಅಗತ್ಯವಾಗಿದೆ ಎಂದರು.
ಅತಿಥಿಗಳಾಗಿ ಆಗಮಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿದರ್ೇಶಕ ಮಲ್ಲಿಕಾಜರ್ುನ ರೆಡ್ಡಿ ಮಾತನಾಡಿ ಮಕ್ಕಳ ರಕ್ಷಣೆಗಾಗಿ ರೂಪಿಸಿದ ಕಾಯ್ದೆಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಬೇರೆಯವರು ಸಂಬಂಧ ಬೆಳೆಸಿಕೊಂಡು ಮಕ್ಕಳನ್ನು ಕರೆದುಕೊಂಡು ಹೋಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತಡೆಗಟ್ಟುವ ಕೆಲಸವಾಗಬೇಕು. ಅದಕ್ಕಾಗಿ ಮುಕ್ತ ಚಚರ್ೆಗೆ ವೇದಿಕೆ ಕಲ್ಪಿಸಿದೆ ಎಂದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಎಸ್.ಎಸ್.ಬಿರಾದಾರ ಮಾತನಾಡಿ ಮಕ್ಕಳ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿ ಎಂದು ತಿಳಿಸಿದರು. ಜಿಲ್ಲಾ ಪಂಚಾಯತಿಯ ಉಪಕಾರ್ಯದಶರ್ಿ ಎ.ಜಿ.ತೋಟದ ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸ್ಪಂದನಾ ಸಂಸ್ಥೆಯ ನಿದರ್ೇಶಕರಿ ವಿ.ಸುಶಿಲಾ ಅವರು ಮಕ್ಕಳ ಸಾಗಿಣಿಕೆ ತಡೆಗಟ್ಟುವ ನಿಟ್ಟಿನಲ್ಲಿ ದೇಶದ 200 ಜಿಲ್ಲೆಗಳಲ್ಲಿ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಬೆಳಗಾವಿಯ ಸ್ಪಂದನಾ ಸಂಸ್ಥೆ ನೋಡಲ್ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕನರ್ಾಟಕದಲ್ಲಿ 10 ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈಗಾಗಲೇ 9 ಜಿಲ್ಲೆಗಳಲ್ಲಿ ಮಕ್ಕಳ ಸಾಗಾಣಿಕೆ ಕುರಿತಂತೆ ಸಂವಾದ ಕಾರ್ಯಕ್ರಮ ನಡೆಸಲಾಗಿದ್ದು, 10ನೇ ಜಿಲ್ಲೆಯಾಗಿ ಬಾಗಲಕೋಟೆಯಲ್ಲಿ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಇದೇ ದೇಶದಲ್ಲಿ ಅನೈತಿಕವಾಗಿ ಮಕ್ಕಳ ಸಾಗಾಣಿಕೆಗಳಾಗುತ್ತಿವೆ. ಪ್ರತಿ 8 ನಿಮಿಷಕ್ಕೆ ಒಂದು ಮಗು ಕಾಣೆಯಾಗುತ್ತಿರುವುದು ದುರಂತದ ವಿಷಯ. ಸಾಗಾಣಿಕೆ ಕಾರ್ಯದಲ್ಲಿ 8 ಲಕ್ಷ ಜನ ತೊಡಗಿರುವುದಾಗಿ ತಿಳಿಸಿದರು. 100ಕ್ಕೆ ಶೇ.70 ರಷ್ಟು ಸಾಗಾಣಿಕೆ ದೇಶದಲ್ಲಿಯಾದರೆ, ಶೇ.30 ರಷ್ಟು ಬೇರೆ ಬೇರೆ ದೇಶಗಳಿಗೆ ಸಾಗಾಣಿಕೆಗಳಾಗುತ್ತಿವೆ. ಶೇ.46 ರಷ್ಟು ಲೈಂಗಿಕ ವೃತ್ತಿಗೆ ಬಳಸಲಾಗುತ್ತಿದ್ದರೆ, ಉಳಿದ ಶೇ.24 ರಷ್ಟು ಬೀಕ್ಷಾಟಣೆ, ಬಾಲ ಕಾಮರ್ಿಕ, ಅಂಗಾಂಗಗಳ ಮಾರಾಟಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂದರು. ಇದನ್ನು ತಡೆಗಟ್ಟು ಕೆಲಸ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ನಂತರ ಸಂವಾದ ಕಾರ್ಯಕ್ರಮದಲ್ಲಿ ಬಾಲ್ಯವಿವಾಹ, ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ, ಬಾಲ ಕಾಮರ್ಿಕ ಪದ್ದತಿ ಪರಿಸ್ಥಿತಿ ಹಾಗೂ ಜೀತ ಪದ್ದತಿಗಳ ಬಗ್ಗೆ ಚಚರ್ೆ ನಡೆಯಿತು.
ಜಾತ್ರೆಗಳಲ್ಲಿ ಬಾಲ್ಯವಿವಾಹ ಹಾಗೂ ಮಕ್ಕಳ ಕಳ್ಳತನವಾಗುತ್ತಿರುವ ಬಗ್ಗೆ ತಿಳಿಸಿದಾಗ ತಕ್ಷಣ ಮಾಹಿತಿ ತಿಳಿಸುವ ಕೆಲಸವಾಗಬೇಕು ಅಂದಾಗ ಮಾತ್ರ ಕ್ರಮಕೈಗೊಳ್ಳಲು ಸಾದ್ಯವಾಗುತ್ತದೆ ಎಂದು ತಿಳಿಸಲಾಯಿತು. ಅಲ್ಲದೇ ಬಾಲ್ಯವಿವಾಹ ತಡೆಯಲು ಹೋದಾಗ ಅಂಗನವಾಡಿ ಮೇಲ್ವಿಚಾರಕರಿಗೆ ರಕ್ಷಣೆ ಇಲ್ಲದಿರುವ ಬಗ್ಗೆ ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪಿ.ಎನ್.ಪಾಟೀಲ, ರೀಚ್ ಸಂಸ್ಥೆಯ ನಿದರ್ೇಶಕ ಜಿ.ಎನ್.ಸಿಂಹ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ ಸಿಬ್ಬಂದಿ ಹಾಗೂ ಆಶಾ, ಅಂಗನವಾಡಿ ಮೇಲ್ವಿಚಾರಕರು ಹಾಗೂ ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು.