ಲೋಕದರ್ಶನ ವರದಿ
ಕೊಪ್ಪಳ 22: ಇಂದಿನ ವಿದ್ಯಾರ್ಥಿಗಳು ಸರಕಾರ ಒದಗಿಸಿರುವ ಅಂತರಜಾಲದ ಸದುಪಯೋಗವನ್ನು ಪಡೆದುಕೊಳ್ಳಬೇಕು. ಅಂತರಜಾಲದಲ್ಲಿ ಅನೇಕ ನಮ್ಮ ವಯಕ್ತಿಕ ಸವಲತ್ತುಗಳಿಗೆ ಸಂಬಂಧಿಸಿದ ಡಿಜಿಟಲ್ ಇಂಡಿಯಾದ ಮೂಲಕ ಸೇವೆಗಳನ್ನು ಒದಗಿಸಲು ಮುಂದಾಗಿದೆ. ಅದರ ಸದುಪಯೋಗದ ಮೂಲಕ ಕಾಗದ ರಹಿತದ ಆಡಳಿತಕ್ಕೆ ನಾವೆಲ್ಲಾರೂ ಸರಕಾರಕ್ಕೆ ಸಹಕರಿಸಬೇಕಾಗಿದೆ ಎಂದು ಕಿಯೋನಿಕ್ಸ್ ಮುಖ್ಯಸ್ಥರಾದ ಮತ್ತು ಸಂಪನ್ಮೂಲ ವ್ಯಕ್ತಿಗಳಾದ ಮಂಜುನಾಥ ಉಲ್ಲತ್ತಿ ಸಲಹೆ ನೀಡಿದರು.
ನಗರದ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಗಣಕಯಂತ್ರ ವಿಭಾಗದಿಂದ ಹಮ್ಮಿಕೊಂಡ "ಡಿಜಿಟಲ್ ಗವರನನ್ಸ್" ಎಂಬ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ನೀಡಿದ ಅವರು ಸರಕಾರವು ಅಂತರಜಾಲದಲ್ಲಿ ನಮ್ಮ ವಯಕ್ತಿಕ ಜೀವನಕ್ಕೆ ಬೇಕಾಗಿರುವ ಅನೇಕ ಸೇವೆಗಳಿಗಾಗಿ ಭೂಮಿ(ಪಹಣಿ ಪಡೆಯುದಕ್ಕಾಗಿ), ನಾಡಕಛೇರಿ (ಜಾತಿ ಆದಾಯ ಪ್ರಮಾಣ ಪತ್ರ), ದಿಶಾಂಕ (ಸ್ಥಳದ ಮಾಹಿತಿ ಪಡೆಯಲು), ಡಿಲಿಲಾಕ್ (ಸುರಕ್ಷಿತ ಡಾಕುಮೆಂಟ್), ಪಂಚಮಿತ್ರ(ಗ್ರಾಮ ಪಂಚಾಯತಿ ಸದಸ್ಯರೊಳಗೊಂಡ ಆಯವ್ಯಯಪಟ್ಟಿ ಮಾಹಿತಿ) ಮುಂತಾದ ಆ್ಯಪಗಳನ್ನು ಸರಕಾರ ಸಾರ್ವಜನಿಕ ಸೇವೆಗಾಗಿ ಒದಗಿಸಲಾಗಿದೆ. ಅದರ ಸದುಪಯೋಗ ಪಡೆದು ನಿಮ್ಮ ನಿಮ್ಮ ಗ್ರಾಮದ ಎಲ್ಲಾರಿಗೂ ಅದರ ಮಾಹಿತಿ ನೀಡುವುದರ ಮೂಲಕ ಡಿಜಿಟಲ್ ಇಂಡಿಯಾದ ಉದ್ದೇಶವನ್ನು ಈಡೇರಿಸುವ ನಿಟ್ಟಿನಲ್ಲಿ ತಾವೆಲ್ಲರೂ ಕಾರ್ಯಪ್ರವೃತ್ತರಾಗಬೇಕೆಂದು ಹೇಳಿದರು.
ಪ್ರಾಸ್ತವಿಕವಾಗಿ ಮಾತನಾಡಿದ ಗಣಕಯಂತ್ರ ವಿಭಾಗದ ಪ್ರಾಧ್ಯಾಪಕರಾದ ಮಹಮ್ಮದ ಶಫಿ ಸರದಾರ ವಿದ್ಯಾರ್ಥಿಗಳು ಅಂತರ್ಜಾಲವನ್ನು ಕೇವಲ ಮನೋರಂಜನೆಗಾಗಿ ಬಳಸದೇ ಇಂತಹ ಸಾರ್ವಜನಿಕ ಸೇವೆಗಳನ್ನು ಬಳಸುವುದರ ಮೂಲಕ ವಿದ್ಯಾರ್ಥಿಗಳು ಪ್ರಗತಿಪರ ಭಾರತದ ಅಭಿವೃದ್ಧಿಯಲ್ಲಿ ತಾವೆಲ್ಲರೂ ಭಾಗವಹಿಸಬೇಕು.
ಇಂತಹ ಕಾರ್ಯಕ್ರಮಗಳು ಉತ್ತಮ ಸಂಪನ್ಮೂಲ ವಿಷಯಗಳಾಗಿದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ.ಎಸ್.ದಾದ್ಮಿಯವರು ಮಾತನಾಡುತ್ತ ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಬಹಳ ಮುಖ್ಯವಾಗಿದೆ. ಆದ್ದರಿಂದ ತಾವು ಬರೀ ಪುಸ್ತಕಕ್ಕೆ ಸೀಮಿತವಾಗಿರದೇ ಕೃಷಿ, ಶಿಕ್ಷಣ, ನಗರ, ಇನಿತರ ಸಾರ್ವಜನಿಕ ಸೇವೆಗಳನ್ನು ಗುರುತಿಸಿ ತಮ್ಮ ಕುಟುಂಬಗಳಿಗೆ ಸಹಾಯ ಮಾಡುವದರ ಮೂಲಕ ಜವಾಬ್ದಾರಿಯುತ ನಾಗರಿಕರಾಗಬೇಕು ಎಂದು ಕಿತಿಮಾತು ಹೇಳಿದರು. ಪ್ರಾಧ್ಯಾಪಕರಾದ ಆಶಾ, ಐಶ್ವರ್ಯ, ಡಾ ನಾಗರಾಜ ದಂಡೋತಿ, ಶರಣಬಸಪ್ಪ ಬಿಳೆಯಲಿ, ಡಾ ದಯಾನಂದ ಸಾಳುಂಕೆ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾಥರ್ಿ ಯಮನೂರಪ್ಪ ಸ್ವಾಗತಿಸಿದರು. ಕು. ರುಕ್ಮಿಣಿ ಪ್ರಾಥರ್ಿಸಿದರು. ಪೂಣರ್ಿಮಾ ಕಾರ್ಯಕ್ರಮವನ್ನು ನಿರೂಪಿಸಿದರು. ವೀಣಾ ವಂದಿಸಿದರು.