ಬೆಳಗಾವಿ 19 - ನಗರದ ರಂಗಸಂಪದ ಬೆಳಗಾವಿ ಮತ್ತು ಕೆ.ಲ್.ಸ್. ಗೋಗಟೇ ವಾಣಿಜ್ಯ ಮಹಾವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಗುರುವಾರ ದಿ.17 ಎಪ್ರಿಲ ಬೆಳಿಗ್ಗೆ 10.30 ಕ್ಕೆ ಹನಿಗವಿ ಎಚ್.ಡುಂಡಿರಾಜ ಅವರೊಂದಿಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರಾಸಬದ್ದ ಹಾಸ್ಯ ಹನಿಗವನಗಳಿಂದ ಕೂಡಿದ್ದ ಡುಂಡಿರಾಜ್ ರ ಭಾಷಣ ವಿದ್ಯಾರ್ಥಿಗಳನ್ನು ಸೆರೆಹಿಡಿದು ಕೂಡಿಸಿತ್ತು. ಸಂವಾದದಲ್ಲಿ ನಾಟಕ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸುತ್ತ ಡುಂಡಿರಾಜ್ ಅವರು ಹಲವಾರು ವಿಷಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ವರ್ಷಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪ್ರೊ. ಸ್ನೇಹಾ ಜೋಶಿ ಸ್ವಾಗತಿಸಿದರು. ಡಾ. ಅರವಿಂದ ಕುಲಕರ್ಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಾಚಾರ್ಯರಾದ ವೇಣುಗೋಪಾಲ ಜಾಲಿಹಾಳ ಅತಿಥಿ ಎಚ್ ಡುಂಡಿರಾಜ ಅವರನ್ನು ಸನ್ಮಾನಿಸಿದರು. ಪ್ರಸಾದ ಕಾರಜೋಳ ವಂದಿಸಿದರು. ಸವಿತಾ ನಿಡಸೋಸಿ ನಿರುಪಿಸಿದರು. ಮಹಾವಿದ್ಯಾಲಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಸಿಬ್ಬಂದಿ ಮತ್ತು ರಂಗಸಂಪದ ಸದಸ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.