ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ

ಲೋಕದರ್ಶನವರದಿ

ಹಾವೇರಿ; ನಗರದ ಶಿವಬಸವೇಶ್ವರ ಕಲ್ಯಾಣಮಂಟಪದಲ್ಲಿ 'ಮತ್ತೆ ಕಲ್ಯಾಣ' ಕಾರ್ಯಕ್ರಮದ ನಿಮಿತ್ತ ಏರ್ಪಡಿಸಿದ್ದ ವಿದ್ಯಾಥರ್ಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಪ್ರಶ್ನೆಗಳಿಗೆ ಉತ್ತರಿಸುತ್ತಾ ಭಾವಚಿತ್ರಗಳಿಗೆ ಪುಷ್ಪಾಣರ್ೆ ಮಾಡುವುದು ಒಂದು ಸಂಕೇತವಾಗಬೇಕೇ ಹೊರತು; ಅಂತಿಮ ಗುರಿಯಾಗಬಾರದು. ಮಹತ್ಮರ, ಹಿರಿಯರ ಫೋಟೋಗಳನ್ನು ಪೂಜೆ ಮಾಡುವುದರ ಬದಲಾಗಿ ಅವರ ಆದರ್ಶ ಆಚಾರ-ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಮುಖ್ಯವಾಗಬೇಕು. ಇಂದು ಅಸಿ-ಮಸಿ-ಕೃಷಿಗಳಲ್ಲಿ ಮಸಿಗಿಂತ ಕೃಷಿ ಮುಖ್ಯವಾಗಬೇಕು.

       ನೆಮ್ಮದಿಗೆ ದೇವರ ಸ್ಮರಣೆಯೊಂದೇ ಸಾಲದು; ಕಾಯಕ ಶ್ರದ್ಧೆಯೂಬೇಕು. ಜಾತಿ, ಧರ್ಮ, ವರ್ಣ, ಪಂಥದ ಗೋಡೆಗಳನ್ನು ಕೆಡವಿ ಸಮ ಸಮಾಜ ನಿಮರ್ಾಣ ಮಾಡುವುದು ಇಂದು ಅತ್ಯಗತ್ಯ. ಕಲ್ಯಾಣ ಎಂದರೆ ಬೆಳಕು, ಅಭ್ಯುದಯ, ಲೇಸು. ಕತ್ತಲೆಯಿಂದ ಬೆಳಕಿನಡೆಗೆ ಹೋಗಬೇಕಾದುದೇ ಮತ್ತೆ ಕಲ್ಯಾಣ. 

ಪ್ರತಿಯೊಬ್ಬರ ಅಂತರಂಗದಲ್ಲಿ ಜ್ಞಾನದಜ್ಯೋತಿ ಅಡಕವಾಗಿರುತ್ತದೆ.

        ಮಂಕುಕವಿದ ಆ ಜ್ಯೋತಿಯ ಮಂಕು ತೆಗೆಯುವ ಕೆಲಸ ಮತ್ತೆ  ಕಲ್ಯಾಣದ್ದು. ವಿದ್ಯಾಥರ್ಿಗಳಿಗೆ ಲೌಕಿಕ, ವ್ಯಾವಹಾರಿಕ ಜ್ಞಾನದ ಜೊತೆಗೆ ಆಧ್ಯಾತ್ಮಿಕ ಜ್ಞಾನವೂಬೇಕು. ಅಂತರಂಗ ಮತ್ತು ಬಹಿರಂಗವನ್ನು ಒಂದು ಮಾಡಿಕೊಳ್ಳುವುದೇ ಪರಿಪೂರ್ಣ ಬದುಕಿನತ್ತ ಹೆಜ್ಜೆಯಿಡುವ ಮಾರ್ಗ.  ಈ ಮಾರ್ಗಕ್ಕೆ ಶರಣರ ವಚನಗಳು ದಾರಿ ತೋರಬಲ್ಲವು. ವಚನಗಳ ಓದು, ಅರ್ಥದ ಜೊತೆಗೆ ಆಚರಣೆಗೆ ತರಬೇಕು. ಅಂತರಂಗಕ್ಕೆ ಬೆಳಕನ್ನು ನೀಡುವುದೇ ಶಿಕ್ಷಣದ ಮೂಲ ಉದ್ದೇಶವಾಗಬೇಕು. 

 ಸದಾಶಿವ ಶ್ರೀಗಳು ಮಾತನಾಡಿ ವಚನ ಸಾಹಿತ್ಯದ ಅಧ್ಯಯನ, ಮನನ, ಅನುಷ್ಠಾನದ ಕೊರತೆಯೇ ಇಂದಿನ ನೈತಿಕತೆಯ ಅಧಃಪತನಕ್ಕೆ ಕಾರಣ. ಇತಿಹಾಸವಿಲ್ಲದವನಿಗೆ ಭವಿಷ್ಯವೂ ಇಲ್ಲ ಎನ್ನುವಂತೆ ನಮ್ಮ ಹಿರಿಯರ ಬದುಕು-ಬರಹಗಳ ಅಧ್ಯಯನದ ಅಗತ್ಯವಿದೆ.ಎಲ್ಲಧರ್ಮಗಳೂದಯೆಯನ್ನೇ ಹೇಳುತ್ತವೆ. ಅವುಗಳ ಆಳ-ಅಗಲ ಅರಿಯದೆ ಅರೆಬೆಂದ ತಿಳಿವಳಿಕಸ್ಥರಿಂದ  ಏಕತೆಗೆಧಕ್ಕೆಯುಂಟಾಗುತ್ತಿರುವುದು ವಿಷಾದದ ಸಂಗತಿ. ಕಾವಿ ಬೆಂಕಿಯ ಸಂಕೇತ, ತ್ಯಾಗದ ಸಂಕೇತ. ಮನುಷ್ಯನ ದುರ್ಗಣಗಳನ್ನು ಸುಟ್ಟು ತ್ಯಾಗದ ಗುಣಗಳನ್ನು ಬೆಳೆಸಿಕೊಳ್ಳುವುದು. ಮನುಷ್ಯನ ಮನಸ್ಸು ಶುದ್ಧವಾಗಿದ್ದರೆ ಮನೆ-ಮನ ಎರಡೂ ಶುದ್ಧವಾಗಿರುತ್ತವೆ ಎಂದರು. 

        ಸಂವಾದಕ ಹೆಚ್ಎಸ್ದ್ಯಾಮೇಶ್ಮಾತನಾಡಿ ತಾಂತ್ರಿಕ, ಆಥರ್ಿಕ ಜ್ಞಾನದ ಜೊತೆಗೆ ಆಧ್ಯಾತ್ಮಿಕ ಜ್ಞಾನವೂ ಅಷ್ಟೇ ಮುಖ್ಯ. ಆಧ್ಯಾತ್ಮಿ ಕನೆಲೆಗಟ್ಟುಗಟ್ಟಿಯಾದರೆ ಜೀವನದಲ್ಲಿ ಎಂತಹ ಕಷ್ಟಗಳೂಬಂದರೂ ಸಮರ್ಥವಾಗಿ ಎದುರಿಸಬಹುದು. ಅಧ್ಯಯನಕ್ಕಿಂತ ಅನುಭವದಿಂದಲೇ ಹೆಚ್ಚಿನ ಜ್ಞಾನ ಬರುತ್ತದೆ. ವ್ಯಕ್ತಿ ಹಾಕುವ ಬಟ್ಟೆ ಮುಖ್ಯವಲ್ಲ. 

        ಅವನಲ್ಲಿರುವ ವ್ಯಕ್ತಿತ್ವ ಮುಖ್ಯ. ಜಾತಿ ಹುಟ್ಟಿನಿಂದ ಬಂದದ್ದಲ್ಲ. ಮಾಡುವ ಕಾಯಕದಿಂದ ಬಂದದ್ದು.ಯಶಸ್ಸಿಗೆ ಯಾವ ಅಡ್ಡದಾರಿಗಳೂ ಇಲ್ಲ. ಪರಿಶ್ರಮವೊಂದೇ ನಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯಬಹುದು ಎಂದರು