ಸಂವಾದ ಕಾರ್ಯಕ್ರಮ

ಹುನಗುಂದ05: ಆರ್ಥಿಕ  ಕುಸಿತ, ರೈತರ ಆತ್ಮಹತ್ಯೆ, ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಇದಕ್ಕೆ ಪರಿಹಾರ ಕಲ್ಪಿಸಬೇಕಾದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಕರ್ಾರ ಧರ್ಮದ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುವ ಕಾರ್ಯದಲ್ಲಿ ತೊಡಗಿದೆ ಎಂದು ಸಮಾಜ ಪರಿವರ್ತನ ಸಮುದಾಯದ ಮುಖಂಡ ಎಸ್.ಆರ್. ಹಿರೇಮಠ ಆರೋಪಿಸಿದರು.                                                                  ಜನತಂತ್ರ ಸಮಾಜ, ಜನ ಸಂಗ್ರಾಮ ಪರಿಷತ್ತು ಹಾಗೂ  ಜನಾಂದೋಲನಗಳ  ಮಹಾ  ಮೈತ್ರಿ  ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ  ಶನಿವಾರ ಪಟ್ಟಣದ ಬಡ್ರ್ಸ ಸಂಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದೇಶದಲ್ಲಿ ಧರ್ಮದ ಹೆಸರಿನಲ್ಲಿ ಅಧರ್ಮದ ವ್ಯಾಪಾರ ನಡೆಯುತ್ತಿದೆ. ಪ್ರೀತಿ ಪ್ರೇಮದ ಸಂದೇಶ ಸಾರುವ ಧರ್ಮದ ಬದಲು ದ್ವೇಷ ಬಿತ್ತುವವರ ಕರ್ಕಶ ಕೂಗು ಮೊಳಗುತ್ತಿದೆ. ಯುವ ಜನರ ನಿರುದ್ಯೋಗ, ರೈತರ ಆತ್ಮಹತ್ಯೆ, ದಲಿತರು ಹಾಗೂ ಮಹಿಳೆಯರ ಮೇಲೆ ಹೆಚ್ಚುತ್ತಿರುವ ಹಿಂಸೆ, ಹಾಳಾಗುತ್ತಿರುವ ನಿಸರ್ಗ ಸಂಪತ್ತು, ಶಿಕ್ಷಣದ ವ್ಯಾಪಾರಿಕರಣ, ನೀತಿ ಮೌಲ್ಯಗಳ ಅವಮೂಲ್ಯನ, ಬಹುರಾಷ್ಟ್ರೀಯ ಕಂಪನಿಗಳ ಎಲ್ಲ ಕ್ಷೇತ್ರಗಳಲ್ಲಿನ ಅಕ್ರಮಣ, ರಾಜಕಾರಣಿಗಳ ಸ್ವಂತ ಹರಾಜು  ಅಕಾಂಡ ತಾಂಡವಾಡುತ್ತಿರುವಾಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಭುಗಳಾದ ಪ್ರಜೆಗಳು ಕರ್ತವ್ಯ ಮೂಡರಾಗಿ ತೆಪ್ಪನೆ ಮಲಗಿದಂತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಕಾರ್ಮಿಕ  ಮುಖಂಡ ದಿಲೀಪ ಕಾಮತ್ ಮಾತನಾಡಿ, ದೇಶದಲ್ಲಿ ಆರ್ಥಿಕ ಅಸಮಾನತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಬಡವರು ಬಡವರಾಗಿ, ಶ್ರೀಮಮತರು ಶ್ರೀಮಂತರಾಗಿಯೇ ಮುಂದುವರೆದಿದ್ದಾರೆ. ದೇಶ ವೇಗವಾಗಿ ಅಭಿವೃದ್ದಿ ಹೊಂದುತ್ತಿದೆ ಎಂದು ಜಂಬಕೊಚ್ಚಿಕೊಳ್ಳುತ್ತಿರುವ ವ್ಯಕ್ತಿಗಳು ಜನರ ನೋವು ನಲಿಹುಗಳಿಗೆ ಸ್ಪಂದಿಸುತ್ತಿಲ್ಲ ಜೊತೆಗೆ ಸಾಮಾನ್ಯ ಜನರಿಗೆ ಕನಿಷ್ಠ ಸೌಲಭ್ಯ ಕಲ್ಪಿಸುವಲ್ಲೂ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.  ರೈತರ ಆತ್ಮಹತ್ಯೆ, ಮತದಾರರ ಜಾಗೃತಿ, ಸಮಾಜದಲ್ಲಿ ಬದಲವಣೆ, ಪೌರತ್ವ ಕಾಯ್ದೆ ಹೀಗೆ ಹಲವು ಪ್ರಶ್ನೆಗಳು ಸಂವಾದದಲ್ಲಿ ಕೇಳಿ ಬಂದವು. ಸಾಮಾಜಿಕ ಹೋರಾಟಗಾರ ನಾಗರಜ ಹೊಂಗಲ್, ಸಿ.ಜಿ. ಹವಲ್ದಾರ, ಮಹಾಂತೇಶ ಅಗಸಿಮುಂದಿನ, ರಾಮಯ್ಯ, ಅಮರೇಶ ನಾಗೂರ, ಕೃಷ್ಣಾ ಜಾಲಿಹಾಳ, ಜಿ.ಎಸ್. ಸಿಂಹ ಇತರರು ಇದ್ದರು.