ಲೋಕದರ್ಶನ ವರದಿ
ಬೆಳಗಾವಿ 07: ಶಿಕ್ಷಣ ಸಂಸ್ಥೆಯ ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢಶಾಲೆಯಲ್ಲಿ ವಾಷರ್ಿಕ ಸ್ನೇಹ ಸಮ್ಮೇಳನ ಎರಡು ದಿನ ಆಯೋಜಿಸಲಾಗಿತ್ತು. ಮೊದಲನೆಯ ದಿನದಂದು ಮಾರವಾಡಿ ಯುವ ಮಂಚದ ಮಾಜಿ ಪದಾಧಿಕಾರಿಗಳಾದ ಅಜಯ ಹೆಡಾ ಮತ್ತು ಗೋಪಾಲ ಉಪಾಧ್ಯ ಉಪಸ್ಥಿತರಿದ್ದು ಸಾಂಸ್ಕೃತಿಕ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವುದರೊಂದಿಗೆ ಉದ್ಘಾಟಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸುಮಾರು 70 ಕ್ಕಿಂತ ಹೆಚ್ಚು ನೃತ್ಯ ಹಾಗೂ ನಾಟಕ ಸ್ಪಧರ್ೆಗಳನ್ನು ಆಯೋಜಿಸಲಾಗಿತ್ತು.
ಎರಡನೆಯ ದಿನದಂದು ಸ್ಪಧರ್ೆಯ ವಿಜೆತರಿಗೆ ಬಹುಮಾನ ನೀಡುವುದು ಹಾಗೂ 45 ಪ್ರಾಥಮಿಕ ಶಾಲೆಗಳ ಮುಖ್ಯಸ್ಥರಿಗೆ ಫಲ ಪುಷ್ಪ ಹಾಗೂ ಶಾಲ ಹೊದಿಕೆಯೊಂದಿಗೆ ಸತ್ಕರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ. ಮಲ್ಲನಗೌಡಾ ಪಾಟೀಲ ಹಾಗೂ ಡಾ. ನಮ್ರತಾ ಪಾಟೀಲ ಉಪಸ್ಥಿತರಿದ್ದು ಬಹುಮಾನವನ್ನು ವಿತರಿಸಿದರು. ಎಲ್ಲ ವಿದ್ಯಾಥರ್ಿನಿಯರಿಗೆ ಹಾಗೂ ಆಮಂತ್ರಿತ ಅತಿಥಿಗಳಿಗೆ ಸ್ನೇಹ ಭೋಜನ ಕೂಟವನ್ನು ಏರ್ಪಡಿಸಲಾಗಿತ್ತು. ಶಾಲೆಯ ಸುಧಾರಣಾ ಸಮಿತಿಯ ಅಧ್ಯಕ್ಷರಾದ ಸುಧೀರ ಕುಲಕಣರ್ಿಯವರು ಉಪಸ್ಥಿತರಿದ್ದ ಪ್ರಾಥಮಿಕ ಶಾಲೆಗಳ ಮುಖ್ಯಸ್ಥರ ಸತ್ಕಾರ ಸಮಾರಂಭವನ್ನು ನೆರವೆರಿಸಿದರು. ಕಾರ್ಯಕ್ರಮದ ಅದ್ಯಕ್ಷರಾಗಿ ಬೆಳಗಾವಿ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದಶರ್ಿಗಳಾದ ಶ್ರೀನಿವಾಸ ಶಿವಣಗಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಾಲೆಯ ಮುಖ್ಯೋಪಾದ್ಯಾಯರಾದ ಎಮ್. ಕೆ. ಮಾದಾರ ಸ್ವಾಗತಿಸಿ, ಶ್ರಿದೇವಿ ಇಟಗಿಕರ ನಿರೂಪಿಸಿ, ಸರಸ್ವತಿ ದೇಸಾಯಿ ವಂದಿಸಿದರು. ಕುಮಾರಿ ಶ್ರಿದೇವಿ ಇಟಗಿಕರ ಇವಳನ್ನು ಶಾಲೆಯ ಅತ್ಯುತ್ತಮ ವಿದ್ಯಾಥರ್ಿನಿಯಾಗಿ ಹಾಗೂ ಸೃಷ್ಟಿ ಪಾಟೀಲ, ಪ್ರಗತಿ ಮೆನಸೆ, ದಾನೇಶ್ವರಿ ಪೂಜಾರಿ, ನಿರೂಪಮಾ ತಾಳೂಕರ, ಸಂಪೂಣರ್ಾ ಹುಕ್ಕೇರಿಕರ, ದೀಪಾ ಪಾಟೀಲ ಮತ್ತು ಶೀತಲ ಸುಂಟಕರ ಈ ಆದರ್ಶ ವಿದ್ಯಾಥಿನಿಯರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.