ಸಹಕಾರಿ ಸಂಘದಿಂದ ರೈತರಿಗೆ ಅನುಕೂಲ: ಆಚಾರ

ಲೋಕದರ್ಶನ ವರದಿ

ಯಲಬುರ್ಗಾ  08: ಸಹಕಾರಿ ಸಂಘಗಳು ರೈತರ ಪಾಲಿಗೆ ಸಂಜೀವಿನಿಯಾಗಿ ಕಾರ್ಯನಿರ್ವಹಿಸುತ್ತಿವೆ ಅದರಂತೆ ರೈತರು ಇದರ ಲಾಭ ಪಡೆಯಬೇಕು ಎಂದು ಶಾಸಕ ಹಾಲಪ್ಪ ಆಚಾರ ಹೇಳಿದರು.

ತಾಲೂಕಿನ ಕಲ್ಲಭಾವಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ ನೇರವೇರಿಸಿ ಅವರು ಮಾತನಾಡಿದರು.

ರೈತರು ಹೆಚ್ಚಿನ ಸಂಖ್ಯೆಯಲ್ಲಿ ಹಸುಗಳನ್ನು ಸಾಕಬೇಕು ಅದರಿಂದ ನಿಮಗೆ ದಿನನಿತ್ಯದ ಆದಾಯ ಬರುತ್ತದೆ ದೇಶೀಯ ತಳಿಯ ಗೋವುಗಳನ್ನು ಸಂರಕ್ಷಿಸುವ ಅವಶ್ಯಕತೆ ಇದೆ, ಹಾಗೂ ಸಹಕಾರಿ ಸಂಘದಿಂದ ರೈತರಿಗೆ ಹಲವಾರು ಉತ್ತಮ ಯೋಜನೆಗಳಿದ್ದು ಅವುಗಳು ನೀಜವಾದ ರೈತರಿಗೆ ತಲುಪುವಂತೆ ಆಡಳಿತ ಮಂಡಳಿಯವರು ನೋಡಿಕೊಳ್ಳಬೇಕು ಹೆಚ್ಚು ಹೆಚ್ಚು ಸದಸ್ಯರನ್ನು ನೊಂದಣಿ ಮಾಡಿಕೊಂಡು ಸಂಘವನ್ನು ಉನ್ನತ ಮಟ್ಟದಲ್ಲಿ ಬೆಳೆಸಬೇಕು ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕಾಮರ್ಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು ಅವರೆಲ್ಲರಿಗೂ ಸಹಕಾರಿ ಸಂಘಗಳ ಮಾಹಿತಿ ದೊರಕಬೇಕು ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಶಿವಕುಮಾರ ನಾಗಲಾಪೂರಮಠ, ಶರಣಪ್ಪ ಬಣ್ಣದಭಾವಿ, ವಿಜಯಕುಮಾರ ತಾಳಕೇರಿ,  ಕೆಎಂಎಪ್ ಉಪಾಧ್ಯಕ್ಷ ಶಿವಪ್ಪ ವಾದಿ, ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.