ಬೆಂಗಳೂರು, ಜ.13: ಜೆ.ಎನ್.ಯು ವಿ.ವಿ ವಿಚಾರದಲ್ಲಿ ವಿವಾದಾತ್ಮಕ ವರ್ತನೆ ತೋರಿರುವ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಮುಂಬರುವ ಚಪಾಕ್ ಚಿತ್ರವನ್ನು ಬಹಿಷ್ಕಾರಿಸುವಂತೆ ಅಖಿಲ ಭಾರತ ಹಿಂದೂ ಮಹಾಸಭಾ (ಕರ್ನಾಟಕ) ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ರಾಜ್ಯಧ್ಯಾಕ್ಷ ಎಲ್.ಕೆ. ಸುವರ್ಣ ಮಾತನಾಡಿ, ಇತ್ತೀಚೆಗೆ ದೆಹಲಿಯ ಜೆಎನ್ ಯು ಸಂಸ್ಥೆಯಲ್ಲಿ ಭಾರತ ದೇಶದ ಏಕತೆಗೆ ಮತ್ತು ಸಾರ್ವಭೌಮತೆಗೆ ಹಾಗೂ ಸಂವಿಧಾನದ ಆಶಯಕ್ಕೆ ಧಕ್ಕೆ ತರುವಂತಹ ಹೇಳಿಕೆ ನೀಡಿ ರಾಷ್ಟ್ರ ಭಕ್ತಿಯುಳ್ಳವರಿಗೆ ನೋವನ್ನೊಂಟು ಮಾಡಿದ್ದಾರೆ. ಅದ್ದರಿಂದ ಇವರ ಚಿತ್ರವನ್ನು ರಾಜ್ಯದಲ್ಲಿ ಬಹಿಷ್ಕರಿಸುವಂತೆ ಒತ್ತಾಯಿಸಿದರು.
ಅಲ್ಲದೆ ದೇಶದ ಎಲ್ಲಾ ಆಕ್ಸಿಸ್ ಬ್ಯಾಂಕ್ ನಲ್ಲಿ ರೂಪದರ್ಶಿಯಾಗಿರುವ ದೀಪಿಕಾ ಪಡುಕೋಣೆ ಅವರ ಪೋಟೋ ಹಾಕಲಾಗಿದ್ದು, ಅದನ್ನು ಈ ಕೂಡಲೇ ತೆರವುಗೊಳಿಸಬೇಕು ಎಂದರು.