ಲೋಕದರ್ಶನ
ವರದಿ
ಬೆಳಗಾವಿ 24: ದೇಶದ ಇತಿಹಾಸದಲ್ಲೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ
ಪಂಗಡದ ಜನಾಂಗ ಜನತೆಯ ಅಭಿವೃದ್ಧಿಗಾಗಿ ಅತಿ ಹೆಚ್ಚು ಅನುದಾನ
ನೀಡಿದ ಕೀತರ್ಿ ಸಿದ್ದರಾಮಯ್ಯ ಸಕರ್ಾರಕ್ಕೆ ಸಲ್ಲುತ್ತದೆ
ಎಂದು ಶಾಸಕ ಸತೀಶ ಜಾರಕಿಹೊಳಿ
ಹೇಳಿದರು.
ಬುಧವಾರ
ನಗರದ ಕುಮಾರ ಗಂದರ್ವ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಮಹಷರ್ಿ ವಾಲ್ಮೀಕಿ
ಜಯಂತಿ ಕಾರ್ಯಕ್ರಮ ಉದ್ಘಟಿಸಿ ಅವರು ಮಾತನಾಡಿ ಕೇಂದ್ರ
ಸಕರ್ಾರ ದೇಶಕ್ಕೆ ಕೇವಲ 50 ಸಾವಿರ ಕೋಟಿ ಅನುದಾನ ನೀಡಿದರೆ
ಸಿದ್ದರಾಮಯ್ಯಾ ಸಾಕರ್ಾರ ರಾಜ್ಯದಲ್ಲಿ ಸುಮಾರು 28 ಸಾವಿರ ಕೋಟಿ ಅನುದಾನವನ್ನು ಪರಿಶಿಷ್ಟ
ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದ ಅಭಿವೃದ್ಧಿಗೆ ನೀಡಿದೆ. ಈ ಅನುದಾನವನ್ನು ಸೂಕ್ತ
ರೀತಿಯಲ್ಲಿ ಸದುಪಯೋಗ ಪಡಿಸಿಕೊಂಡು ಸಮುದಾಯದ ಯುವ ಜನತೆ ಉನ್ನತ
ಮಟ್ಟಕ್ಕೆರಬೇಕು. ಪೈಲೆಟ್,ಇಂಜಿನಿಯರ್, ಡಾಕ್ಟರ್ ನಂತಹ ಹುದ್ದೆಗಳನ್ನು ತಮ್ಮದಾಗಿಸಿಕೊಳ್ಳುವ
ಆಸಕ್ತಿ ಹೊಂದಬೇಕು. ಅಷ್ಟೇ ಅಲ್ಲದೆ ವಿದೇಶದಲ್ಲಿ ಜೀವನ ಸಾಗಿಸುವ ಮಟ್ಟಕ್ಕೆ
ಬೆಳೆಯಬೇಕು ಎಂದು ಸಲಹೆಯನ್ನು ನೀಡಿದರು.
ಸರಕಾರಿ
ಸೈವಲತ್ತುಗಳನ್ನು ಪಡೆದುಕೊಂಡು ಉನ್ನತ ಹುದ್ದೆಗಳನ್ನು ತಮ್ಮದಾಗಿಸಿಕೊಳ್ಳಿ:
ವಾಲ್ಮೀಕಿ ಜಯಂತಿ
ಆಚರಣೆ ಮೂಲ ಉದ್ದೇಶವೇ ಈ
ಜನಾಂಗವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವದಾಗಿದೆ. ಮಹಾನ ಪುರುಷರ ಜಯಂತಿಯಿಂದ
ಹೊಸ ಹೊಸ ವಿಚಾರಗಳು ತಿಳಿದು
ಬರುತ್ತವೆ. ಮಹಾನ ಪುರುಷರ ಆದರ್ಶವನ್ನು
ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಮಹಷರ್ಿ
ವಾಲ್ಮೀಕಿಯ ಬಗ್ಗೆ ಸುಮಾರು 50 ಕ್ಕೂ ಹೆಚ್ಚು ಪುಸ್ತಕಗಳು
ದೊರೆಯುತ್ತವೆ. ವಾಲ್ಮೀಕಿ ಬರೆದ ಮೂಲ ರಾಮಾಯಣದಲ್ಲಿ
ಸುಮಾರು ಎರಡು ಸಾವಿರ ಶ್ಲೋಕಗಳಿವೆ.
ವಾಲ್ಮೀಕಿ ಬರೆದ ರಾಮಾಯಣದಲ್ಲಿನ ಕೆಲವು
ಅಂಶಗಳನ್ನು ಡಾ, ಬಿಆರ್ ಅಂಬೇಡ್ಕರ್
ಅವರು ಸಂವಿಧಾನದಲ್ಲಿ ಅಳವಡಿಸಸಿದ್ದಾರೆ. ನಾವೆಲ್ಲ ಮಾನವೀಯತೆಯಿಂದ ಬದುಕು ಸಾಗಿಸಲು ಇದು ಸಹಾಯಕಾರಿಯಾಗಿದೆ.
ಬೆಳಗಾವಿಯಲ್ಲಿ
ಸದ್ಯದಲ್ಲಿಯೇ ಶಾಹು ಮಹರಾಜ ಪ್ರತಿಮೆ
ಪ್ರತಿಷ್ಟಾಪನೆ:
ಬುದ್ಧ,ಬಸವ,ಅಂಬೇಡ್ಕರ್,ಶಾಹು
ಮಹಾರಾಜ,ಪೆರಿಯಾರ್ ಸೇರಿದಂತೆ ಹಲವು ಮಹಾನ ಪುರುಷರು
ನಮಗೆ ಆದರ್ಶ, ಮಿಸಲಾತಿ ಪರಿಕಲ್ಪನೆಯನ್ನು ಜಾರಿಗೆ ತಂದಿರುವ ಶಾಹು ಮಹಾರಾಜರ ಪ್ರತಿಮೆಯನ್ನು
ಶಿಘ್ರ ಬೆಳಗಾವಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗುವದು.
ಅನಿಷ್ಠ
ಪದ್ದತ್ತಿಯ ವಿರುದ್ದ ಹೋರಾಟ ಮಾಡುವ ನಿಟ್ಟಿನಲ್ಲಿ ಬಸವ ಪಂಚಮಿ , ಸ್ಮಶಾನ
ಕಾರ್ಯಕ್ರಮ ಮಾಡಲಾಗುತ್ತಿದೆ. ಮೂಢನಂಬಿಕೆಯಿಂದ ಹೊರ ಬಂದು ಸಕರ್ಾರ
ನೀಡುವ ಸವಲತ್ತುಗಳನ್ನು ಸದುಪಯೋಗ ಪಡೆಸಿಕೊಳ್ಳಬೇಕು. ರಾಜ್ಯದಲ್ಲಿ ಯಾವುದೇ ಸಕರ್ಾರ ಆಡಳಿತದಲ್ಲಿದ್ದರು ಸಹ ಪರಿಶಿಷ್ಟ ಜಾತಿ
ಮತ್ತು ಪರಿಶಿಷ್ಟ ಪಂಗಡದ ಜನಾಂಗ ಜನತೆಯ ಅಭಿವೃದ್ಧಿಗೆ ಶ್ರಮಿಸುತ್ತದೆ ಎಂದು ಹೇಳಿದರು.
ಶಾಸಕ
ಅನೀಲ ಬೆನಕೆ ಮಾತನಾಡಿ ಸಂಸ್ಕೃತದಲ್ಲಿ ರಾಮಾಯಣ ಬರೆದ ಮಹಷರ್ಿ ವಾಲ್ಮೀಕಿ
ಹೆಸರಿನಲ್ಲಿ ಬೆಳಗಾವಿಯಲ್ಲಿ ಭವನ ನಿಮರ್ಾಣ ಮಾಡಬೇಕಾಗಿದೆ
ಕೆಎಲ್ಇ ಬಳಿ ಇರುವ ವಾಲ್ಮೀಕಿವೃತ್ತವನ್ನು
ಅಭಿವೃದ್ಧಿ ಪಡೆಸಬೇಕು ಆದ್ದರಿಂದ ಎಲ್ಲರು ಒಗ್ಗಟ್ಟಾಗಿ ಕಾರ್ಯನಿರ್ವಹಿಸೋನ ಎಂದು ಹೇಳಿದರು. ಈ
ಸಂದರ್ಭದಲ್ಲಿ ಕುವೆಂಪು
ಕಂಡ ವಾಲ್ಮೀಕಿ ಪುಸ್ತಕವನ್ನು ಶಾಸಕ ಸತೀಶ, ಸಂಸದ
ಸುರೇಶ ಅಂಗಡಿ ಲೋಕಾರ್ಪಣೆಗೊಳಿಸಿದರು.
ಬೆಂಗಳುರು
ಸಿಂಡಿಕೇಟ್ ಸದಸ್ಯ ಶಿವಣ್ಣ ಬಿ ಅವರು ಮಹಷರ್ಿ
ವಾಲ್ಮೀಕಿ ಬಗ್ಗೆ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಸಂಸದ
ಸುರೇಶ ಅಂಗಡಿ, ಜಿಲ್ಲಾಧಿಕಾರಿ ಎಸ್
ಬಿ ಬೊಮ್ಮನಹಳ್ಳಿ, ಮೇಯರ್ ಬಸಪ್ಪ ಚಿಕ್ಕಲದಿನ್ನಿ,ಉಪಮೇಯರ್ ಮಧಶ್ರೀ ಪೂಜಾರಿ, ಪೊಲೀಸ್ ಆಯುಕ್ತ ಡಿಸಿ ರಾಜಪ್ಪ, ಎಸ್ಪಿ
ಸುಧೀರ ಕೂಮಾರ ರೆಡ್ಡಿ, ಪಾಲಿಕೆ ಆಯುಕ್ತ ಶಶಿಧರ ಕುರೇರ,ಜಿಪಂ ಅದ್ಯಕ್ಷೆ ಆಶಾ
ಊಹೊಳೆ, ಜಿಪಂ ಅರುಣ ಕಟಾಂಬ್ಳೆ,
ಜಿಪಂ ಸಿಇಒ ಆರ್ ರಾಮಚಂದ್ರನ್,
ಅಪರ ಜಿಲ್ಲಾಧಿಕಾರಿ ಬುದೇಪ್ಪ, ಮಾನವ ಬಂದುತ್ವ ವೇದಿಕೆ ರಾಜ್ಯ
ಸಂಚಾಲಕ ರವೀಂದ್ರ ನಾಯ್ಕರ್, ಮುಂತಾದವರು ಉಪಸ್ಥಿತರಿದ್ದರು.