ಡೆಂಘೆ ನಿಯಂತ್ರಣಕ್ಕೆ ಸಹಕರಿಸಿ,ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ

ಬಳ್ಳಾರಿ,ಮೇ 19: ಡೆಂಘೆ ನಿಯಂತ್ರಣದಲ್ಲಿ ಸಮುದಾಯದ ಪಾತ್ರ ಪ್ರಮುಖವಾಗಿದೆ. ಸಾರ್ವಜನಿಕರು ರೋಗ ನಿಯಂತ್ರಣಕ್ಕೆ ಸಹಕರಿಸುವುದರ ಮೂಲಕ ಉತ್ತಮ ಸಮಾಜ ನಿಮರ್ಾಣಕ್ಕೆ ಕೈಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಲ್.ಜನಾರ್ಧನ ಅವರು ಹೇಳಿದರು.  

        ನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾ ಮತ್ತು ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಇವರ ಸಹಯೋಗದಲ್ಲ್ಲಿ ರಾಷ್ಟ್ರೀಯ ಡೆಂಘೆ ದಿನಾಚರಣೆ-2020ರ ನಿಮಿತ್ತ ಏರ್ಪಡಿಸಿದ್ದ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.

   ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ನೀರಿನ ಸಿಮೆಂಟ್ ತೊಟ್ಟಿ (ಸಂಪ್), ಬ್ಯಾರಲ್, ಡ್ರಮ್, ಮಡಿಕೆ, ಮನೆ ಮೇಲಿನ ಟ್ಯಾಂಕ್ಗಳಲ್ಲಿ ಸೊಳ್ಳೆಗಳು ನುಸುಳದಂತೆ ಭದ್ರವಾಗಿ ಮುಚ್ಚಿ ಹಾಗೂ ಲಾರ್ವಗಳು ಕಂಡು ಬಂದಲ್ಲಿ ನೀರನ್ನು ಖಾಲಿ ಮಾಡಬೇಕು. ನೀರಿನ ಪರಿಕರಣಗಳನ್ನು ಚೆನ್ನಾಗಿ ಉಜ್ಜಿ ಬಳಸಬೇಕು, ನಿಮ್ಮ ಕುಟುಂಬದವರಿಗೆ ಸೊಳ್ಳೆ ಕಚ್ಚದಂತೆ ಸೊಳ್ಳೆ ಪರದೆ, ಸೊಳ್ಳೆಬತ್ತಿ, ಬಾಡಿ ಲೋಷನ್ ಕ್ರೀಂ ತರಹದ ಇತ್ಯಾದಿಗಳನ್ನು ಉಪಯೋಗಿಸಿ ಎಂದು ಸಲಹೆ ನೀಡಿದ ಡಿಎಚ್ಒ ಜನಾರ್ಧನ್ ಅವರು ಮನೆಯ ಮೇಲೆ ಮತ್ತು ಸುತ್ತ-ಮುತ್ತ ಬಿಸಾಡಿದ ಟೈರು, ತೆಂಗಿನಚಿಪ್ಪು, ಡಬ್ಬಿ, ಪ್ಲಾಸ್ಟಿಕ್ಗ್ಲಾಸ್ ಅಥವಾ ಕಪ್ ಇತ್ಯಾದಿಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿ ಎಂದರು.

    ಸಮುದಾಯದ ಸಹಕಾರದಿಂದ ಡೆಂಘೆ ರೋಗವನ್ನು ತಡೆಗಟ್ಟಬಹುದು. ಯಾವುದೇ ಜ್ವರ ಇರಲಿ ನಿರ್ಲಕ್ಷಿಸಬೇಡಿ. ಆಶಾ ಹಾಗೂ ಆರೋಗ್ಯ ಸಹಾಯಕರು ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಲಾರ್ವ ಉತ್ಪತ್ತಿ ತಾಣಗಳ ನಾಶ ಕಾರ್ಯದಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕು. ಡೆಂಘೆ ಜ್ವರದ ಬಗ್ಗೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು ಎಂದು ಅವರು ತಿಳಿಸಿದರು. 

   ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳಾದ ಡಾ.ಆರ್.ಅಬ್ದುಲ್ಲಾ ಅವರು ಮಾತನಾಡಿ ಡೆಂಘೆ ಜ್ವರವು ಈಡೀಸ್ ಸೊಳ್ಳೆಯ ಮೂಲಕ ಒಬ್ಬರಿಂದ ಒಬ್ಬರಿಗೆ ಕಚ್ಚುವುದರಿಂದ ಹರಡುತ್ತದೆ. ಈ ಸೊಳ್ಳೆಯು ಮಳೆ ನೀರಿನಲ್ಲ್ಲಿ ಬೆಳೆದು ತನ್ನ ಸಂತಾನ ಅಭಿವೃದ್ಧಿ ಮಾಡುತ್ತದೆ. ಡೆಂಘೆ ಜ್ವರದ ಲಕ್ಷಣಗಳಾದ ಮೂರಕ್ಕಿಂತ ಹೆಚ್ಚು ದಿನಗಳಿಂದ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗ ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳತ್ತದೆ. ಈ ರೋಗದ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು, ಇದಕ್ಕೆ ಚಿಕಿತ್ಸೆಯು ಉಚಿತವಾಗಿ ಲಭಿಸುತ್ತದೆ ಎಂದರು.  

   ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್, ವಿ.ಬಿ.ಡಿ.ಸಿ ಕನ್ಸಲ್ಟೆಂಟ್, ಹಿರಿಯ ಮತ್ತು ಕಿರಿಯ ಆರೋಗ್ಯ ಸಹಾಯಕರು, ಪ್ರಯೋಗಶಾಲಾ ತಂತ್ರಜ್ಞರು, ತಾಲೂಕು ಆರೋಗ್ಯ ಸಿಬ್ಬಂದಿಗಳು ಸೇರಿದಂತೆ ಡಿ.ವಿ.ಬಿ.ಡಿ.ಸಿ.ಪಿ ಕಚೇರಿಯ ಸಿಬ್ಬಂದಿಗಳು ಇದ್ದರು.

ಮಾನವ ಸಂತತಿ ಉಳಿಸುತ್ತಿರುವ ವಾರಿಯಸರ್್ ಗೌರವಿಸಿ