ಗೋಶಾಲೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರಿಂದ ನಿರಂತರ ಸ್ವಚ್ಛತೆ
Continuous cleanliness by Hindu organization activists at the cowshed
ಮಹಾಲಿಂಗಪುರ 23: ನಗರದ ಆರಾಧ್ಯ ದೈವ ಮಹಾಲಿಂಗೇಶ್ವರ ದೇವಸ್ಥಾನದ ಗೋಶಾಲೆಯನ್ನು ಬೆನಕನ ಅಮಾವಾಸ್ಯೆ ಮತ್ತು ಜಾತ್ರಾ ಮಹೋತ್ಸವದ ನಿಮಿತ್ಯ ಶನಿವಾರ ಮಹಾಲಿಂಗಪುರ ಹಿಂದೂ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಸ್ವಚ್ಛಗೊಳಿಸಿದರು.
ಮಹಾಲಿಂಗೇಶ್ವರ ಗೋಶಾಲೆಯಲ್ಲಿ 150ಕ್ಕೂ ಹೆಚ್ಚು ಗೋವುಗಳಿವೆ. ಇಲ್ಲಿನ ಹಿಂದೂ ಸಂಘಟನೆ ಕಾರ್ಯಕರ್ತರು ವಾರಕ್ಕೆ ಒಂದು ಅಥವಾ ಎರಡು ದಿನ ಗೋಶಾಲೆ ಸ್ವಚ್ಛತೆಯಲ್ಲಿ ಪಾಲ್ಗೊಳ್ಳುತ್ತಾರೆ. ಜೊತೆಗೆ ಯಾವುದೇ ಕಾರ್ಯಕರ್ತರ ಜನ್ಮ ದಿನದವನ್ನು ಗೋಶಾಲೆಯಲ್ಲಿ ಗೋಪೂಜೆ, ಹಣ್ಣು, ಮೇವು, ಹಿಂಡಿ ಹೀಗೆ ನಾನಾ ತರಹದ ಪದಾರ್ಥಗಳನ್ನು ನೀಡಿ ಗೋಶಾಲೆಯಲ್ಲಿ ಆಚರಿಸಿಕೊಂಡು ಗೋಮಾತೆ ಮತ್ತು ಗುರು ಮಹಾಲಿಂಗೇಶ್ವರರ ಆಶೀರ್ವಾದ ಪಡೆಯುತ್ತಾರೆ.
ಕಾರ್ಯಕರ್ತರಾದ ಬೈರೇಶ ಆದೆಪ್ಪನವರ, ಅರ್ಜುನ ಪವಾರ, ಮಂಜುನಾಥ ಭಾವಿಕಟ್ಟಿ, ಅಭಿಷೇಕ ಲಮಾಣಿ, ಶ್ರೀನಿಧಿ ಕುಲಕರ್ಣಿ, ಮಂಜು ಗೊಂಬಿ, ಮಹಾಲಿಂಗ ದೇಸಾಯಿ, ಅನಿಲ ಖವಾಸಿ, ಆನಂದ ಮಾಳವಾದೆ, ಶಶಿ ನಕಾತಿ, ರಾಘವೇಂದ್ರ ಪವಾರ, ರಾಘವೇಂದ್ರ ಶಿರೋಳ, ರಾಘು ಕಪರಟ್ಟಿ, ಬಸವರಾಜ ಮುರಾರಿ, ಕಿರಣ ದಲಾಲ, ಅಜೀತ ಮನ್ನಿಕೇರಿ ಸೇರಿದಂತೆ ಪತ್ರಕರ್ತರಾದ ಚಂದ್ರಶೇಖರ ಮೋರೆ, ಹನಮಂತ ನಾವಿ, ರಾಜೇಂದ್ರ ನಾವಿ ಸ್ವಚ್ಛತೆಯಲ್ಲಿ ಪಾಲ್ಗೊಂಡಿದ್ದರು.
ಗೋಶಾಲೆ ಅಷ್ಟೇ ಅಲ್ಲದೆ ಕೆರೆ, ದೇವಸ್ಥಾನ, ಹಿಂದೂ ರುದ್ರಭೂಮಿಯ ಸ್ವಚ್ಛತೆಯ ಜೊತೆಗೆ ಸಮಾಜ ಸೇವೆಯಲ್ಲಿಯೂ ಪಾಲ್ಗೋಳ್ಳುತ್ತೇವೆ.ನಮ್ಮ ಜೊತೆಗೆ ಪತ್ರಕರ್ತರು ಕೂಡ ಭಾಗಿಯಾಗುತ್ತಿರುವುದು ಪ್ರೇರಣೆಯ ಸಂಗತಿ.
ರವಿ ಜವಳಗಿ. ಹಿಂದೂ ಸಂಘಟನೆ ಮುಖಂಡ, ಮಹಾಲಿಂಗಪುರ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 