ಶುಚಿತ್ವ, ಶೌಚಾಲಯಗಳ ಬಳಕೆ ಬಗ್ಗೆ ನಿರಂತರ ಅರಿವು ಅತ್ಯವಶ್ಯಕ: ಶರಣಯ್ಯ

ಕೊಪ್ಪಳ 04: ಶಾಲಾ ಮಕ್ಕಳಿಗೆ ಶುಚಿತ್ವ, ಕೈ ತೊಳೆಯುವ, ಶೌಚಾಲಯಗಳ ಬಳಕೆಯ ಕುರಿತು ನಿರಂತರವಾಗಿ ಅರಿವು ಮೂಡಿಸುವುದು ಅತ್ಯವಶ್ಯಕವಾಗಿದೆ ಎಂದು ಕೊಪ್ಪಳ ತಾಲೂಕಾ ಪಂಚಾಯತಿಯ ಯೋಜನಾಧಿಕಾರಿ ಶರಣಯ್ಯ ಸಸಿಮಠ ಅವರು ಹೇಳಿದರು.  

ಯುನಿಸೆಫ್ ಸಹಯೋಗದೊಂದಿಗೆ, ವಾಷ್ ಕಾರ್ಯಕ್ರಮದಡಿ ಗ್ರಾಮೀಣ ಪ್ರದೇಶಗಳ ಸಾರ್ವಜನಕರಿಗೆ ಶೌಚಾಲಯಗಳ ಬಳಕೆ ಮತ್ತು ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸಂಸ್ಥೆಗಳಲ್ಲಿ ನೀರು ನೈರ್ಮಲ್ಯ ಮತ್ತು ಸ್ವಚ್ಛತೆ, ಋತುಚಕ್ರ ನಿರ್ವಹಣೆ ಮತ್ತು ವೈಯಕ್ತಿಕ ಸ್ವಚ್ಛತೆಯ ಹಾಗೂ ಸುಸ್ಥಿರತೆ ಮತ್ತು ನಿರಂತರತೆ ಕುರಿತು ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ/ ಸಿಬ್ಬಂದಿಗಳಿಗೆ ತಾ.ಪಂ. ಸಭಾಂಗಣದಲ್ಲಿ ಮಂಗಳವಾರದಂದು ಆಯೋಜಿಸಲಾದ ತಾಲೂಕಾ ಮಟ್ಟದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ನೀರು ನೈರ್ಮಲ್ಯ ಹಾಗೂ ಸ್ವಚ್ಛತೆ ಒಂದಕ್ಕೊಂದು ಪೂರಕವಾಗಿದ್ದು, ಬಾಲ್ಯದಿಂದಲೇ ಭಾರತದ ಸಂಸ್ಕೃತಿ ಬಿಂಬಿಸುವಂತೆ ಇಂತಹ ವಿಷಯಗಳ ಬಗ್ಗೆ ಎಲ್ಲಾ ಇಲಾಖೆಯವರು ಒಗ್ಗೂಡಿ ಸಾರ್ವಜನಿಕರಿಗೆ ತಿಳಿಯಪಡಿಸುವ ಕಾರ್ಯಕ್ರಮ ನಿರ್ವಹಿಸಬೇಕಾಗಿದೆ ಇಂದಿನ ತರಬೇತಿಯಲ್ಲಿ ನೀಡುವ ಎಲ್ಲಾ ಅಂಶಗಳನ್ನು ತರಬೇತಿದಾರರು ಮನನ ಮಾಡಿಕೊಂಡು ಗ್ರಾಮೀಣ ಮಟ್ಟದಲ್ಲಿ ಎಲ್ಲರಿಗೂ ಅರಿವು ಮೂಡಿಸಬೇಕು.  ಶಾಲಾ ಮಕ್ಕಳಿಗೆ ಶುಚಿತ್ವ, ಕೈ ತೊಳೆಯುವ, ಶೌಚಾಲಯಗಳ ಬಳಕೆಯ ಕುರಿತು ನಿರಂತರವಾಗಿ ಅರಿವು ಮೂಡಿಸುವುದು ಅವಶ್ಯಕವಾಗಿರುತ್ತದೆ ಎಂದು ತಾ.ಪಂ. ಯೋಜನಾಧಿಕಾರಿ ಶರಣಯ್ಯ ಸಸಿಮಠ ಅವರು ಹೇಳಿದರು.  

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧು ಎಲಿಗಾರ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, "ಮಕ್ಕಳಿಗೆ ಅಂಗನವಾಡಿ ಕೇಂದ್ರದಿಂದಲೇ ಸ್ವಚ್ಛತೆಯ, ಪರಿಸರದ ಹಾಗೂ ನೀರಿನ ಬಳಕೆಯ ಬಗ್ಗೆ ಅರಿವು ಮೂಡಿಸುವುದು ಸೂಕ್ತವಿದ್ದು, ನಾವೆಲ್ಲೂರು ಸೇರಿ ಕಾರ್ಯಕ್ರಮವನ್ನು ಯಶಸ್ವೀಗೊಳಿಸೋಣ" ಎಂದು ಕರೆ ನೀಡಿದರು.  

ತಾ.ಪಂ. ಅಕ್ಷರ ದಾಸೋಹ ಸಹಾಯಕ ನಿದರ್ೇಶಕ ಹನುಮಂತಪ್ಪ ಹೆಚ್. ಮಾತನಾಡಿ, "ನೈರ್ಮಲ್ಯ ಕುರಿತು ಶುಚ್ಛಿತ್ವದ ಬಗ್ಗೆ, ಕೈ ತೊಳೆಯುವ ಬಗ್ಗೆ ಮತ್ತು ಸಾಂಕ್ರಮಿಕ ರೋಗಗಳ ಬಗ್ಗೆ ಮಕ್ಕಳಲ್ಲಿ ನಿರಂತರವಾಗಿ ಶಾಲೆಗಳಲ್ಲಿ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡು ಯಶಸ್ವಿಗೊಳಿಸಬೇಕು" ಎಂದರು. 

ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ ಕಿನ್ನಾಳ ಮತ್ತು ಶಿಕ್ಷಣ ಇಲಾಖೆಯ ಬಿ.ಆರ್.ಸಿ ಹಾಗೂ ಯುನಿಸೆಫ್ನ ಜಿಲ್ಲಾ ಸಂಯೋಜಕ ಬಸವರಾಜ ಸೂಡಿ, ತಾಲೂಕಾ ಸಂಯೋಜಕರಾದ ಗಾಯಿತ್ರಿ ಮತ್ತು ಮಂಜುನಾಥ ಬೊಮ್ಮಸಮುದ್ರ, ತಾಲೂಕಾ ಎಸ್.ಬಿ.ಎಮ್ ಸಂಕಲನಾಧಿಕಾರಿ ಸಂಗಪ್ಪ ಕೊಪ್ಪದ್ ಸೇರಿದಂತೆ ತಾಲೂಕ ಯುನಿಸೆಫ್ ಸಂಯೋಜಕರು ಮತ್ತು ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳು ಉಪಸ್ಥಿತರಿದ್ದರು.