ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದುವರಿದ ಮಳೆ
Continued rain in Uttara Kannada district
ಕಾರವಾರ, 26 :ಉತ್ತರ ಕನ್ನಡ ಜಿಲ್ಲೆಯಲ್ಲಿ ಗಾಳಿ ಮಳೆ ಮುಂದುವರಿದಿದೆ. ಜನಜೀವನ ಕರಾವಳಿಯಲ್ಲಿ ಸ್ತಬ್ಧವಾಗಿದೆ . ಹೊನ್ನಾವರ ಕುಮಟಾ ತಾಲ್ಲೂಕಿನಾದ್ಯಂತ ಭಾರೀ ಮಳೆ ಸುರಿಯುತ್ತಿದೆ. ಹೆರಂಗಡಿ, ನಗರ ಬಸ್ತಿಕೇರಿ, ಇಡಗುಂಜಿಯಲ್ಲಿ ಕ್ರಮವಾಗಿ 19 ಸೆಂಮೀ,17 ಸೆಂಮೀ,15 ಸೆಂಮೀ ಮಳೆ ಸುರಿದಿದೆ. ವಾಲಗಳ್ಳಿ ಗ್ರಾ.ಪಂ ವ್ಯಾಪ್ತಿಯ ಕಲ್ಕೇರಿ, ಊರಕೇರಿ, ಕೆಳಗಿನಕೇರಿ ಹಾಗೂ ಹರಿಜನಕೇರಿ ಭಾಗಗಳಲ್ಲಿ ಪ್ರವಾಹ ಸ್ಥಿತಿಯ ಭೀತಿ ಮುಂದುವರಿದಿದೆ.
ದೇವಿಮನೆ ಘಟ್ಟದಲ್ಲಿ 50 ಅಡಿ ಧರೆ ರಸ್ತೆ ಬದಿ ಕುಸಿದಿದ್ದು, ಆತಂಕ ಬೇಡ ಎಂದು ಜಿಲ್ಲಾಡಳಿತ ಹೇಳಿದೆ. ಕುಸಿತ ಹೆಚ್ಚಾದಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಚಿಂತನೆ ಮಾಡಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ನಿರಂತರವಾಗಿ ಸುರಿಯುತ್ತಿರುವ ಮಳೆಗೆ ನದಿಗಳು ಉಕ್ಕಿಹರಿಯುತ್ತಿದ್ದು, ನೂರಾರು ಎಕರೆ ಕೃಷಿ ಭೂಮಿಗಳು ಸಂಪೂರ್ಣ ಜಲಾವೃತಗೊಂಡಿವೆ. ಶುಕ್ರವಾರದ ಸನ್ನಿವೇಶ, ಪರಿಸ್ಥಿತಿ ಶನಿವಾರ ಮುಂದುವರಿದಿದೆ.
ಅಘನಾಶಿನಿ ಉಪ ನದಿಗಳು ಉಕ್ಕಿಹರಿಯುತ್ತಿದ್ದು ಗ್ರಾಮಸ್ಥರಲ್ಲಿ ಆತಂಕವನ್ನು ಹುಟ್ಟಿಸಿದೆ. ಪ್ರವಾಹದಿಂದಾಗಿ ಊರಕೇರಿಯ 27, ಕೊನಳ್ಳಿಯ 8 ಕುಟುಂಬಗಳನ್ನು ಸ್ಥಳಾಂತರಿಸಿ, ಕಡುವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾದ ಕಾಳಜಿ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ. ಸ್ಥಳಾಂತರ ಕಾರ್ಯವನ್ನು ಕಂದಾಯ ಇಲಾಖೆಯ ಅಧಿಕಾರಿಗಳುಮುಗಿಸಿ, ಇದೀಗ ಕಾಳಜಿ ಕೇಂದ್ರಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.ಕಳೆದ 24 ಗಂಟೆಗಳ ಅವಧಿಯಲ್ಲಿ ಹೊನ್ನಾವರದ ಹೆರಂಗಡಿಯಲ್ಲಿ 193, ಹಡಿನಬೈಲ್ 171,ಕುಮಟಾದಲ್ಲಿ 114.4ಮಿ.ಮೀ ಮಳೆಯಾದ ಹಿನ್ನೆಲೆ, ತಾಲೂಕಿನ ಕೆಲವಡೆ ಗುಡ್ಡದ ಬುಡದಲ್ಲಿರುವ ಮನೆಗಳಿಗೂ ನೀರು ನುಗ್ಗಿದ್ದು ಶನಿವಾರ ಸಂಜೆ ಮಳೆ ಕಡಿಮೆಯಾದ ಕಾರಣ ನೆರೆ ಇಳಿಮುಖವಾಗಿದೆ. ಜಲಾವೃತಗೊಂಡ ಪ್ರದೇಶಗಳಲ್ಲಿ ಜಾನುವಾರುಗಳೂ ಸಂಕಷ್ಟಕ್ಕೆ ಸಿಲುಕಿದ್ದು, ಸಂತ್ರಸ್ತರಿಗೆ ಅಗತ್ಯ ನೆರವು ನೀಡಲು ತಾಲೂಕು ಆಡಳಿತ, ಕಂದಾಯ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ.ಕೃಷಿಭೂಮಿ, ತೋಟಗಳು, ಗದ್ದೆಗಳು ನೀರಿನಿಂದ ಆವೃತ್ತಗೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಎದುರಾಗಿದೆ.
ಅಲ್ಲಲ್ಲಿ ಕಾಳಜಿ ಕೇಂದ್ರಗಳು :ಹೊನ್ನಾವರ ತಾಲೂಕಿನ ಹೆರಂಗಡಿ, ಮುಗ್ವಾ, ಹೊಸಕುಳಿ ಗುಡ್ಡೆಬಾಳದಲ್ಲಿ ತೆರದಿರುವ ಕಾಳಜಿ ಕೇಂದ್ರದಲ್ಲಿ 11 ಮಂದಿ, ಚಿಕ್ಕನಕೋಡು ಗುಂಡಿಬೈಲು-1 ರಲ್ಲಿ 43 ಮಂದಿ, ಗುಂಡಿಬೈಲು-2 ರಲ್ಲಿ 2 ಮಂದಿ ಮುಗ್ವಾ ದಲ್ಲಿ 56 ಮಂದಿ, ಭಾಸ್ಕೇರಿಯಲ್ಲಿ 45 ಮಂದಿ,ಕಲ್ಕಟ್ಟೆಯಲ್ಲಿ 10 ಮಂದಿ, ಗುಂಡಬಾಳ -2 ರಲ್ಲಿ 10 ಮಂದಿ, ಕುಮಟಾ ತಾಲೂಕಿನ ಕೊನಳ್ಳಿಯಲ್ಲಿ 43 ಮಂದಿ, ಕಡವು ನಲ್ಲಿ 42 ಮಂದಿಗೆ ಆಶ್ರಯ ಒದಗಿಸಲಾಗಿದೆ.
ಜಿಲ್ಲೆಯಲ್ಲಿ ಬುದ್ದ ಮಳೆ ವಿವರ :ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಅಂಕೋಲಾದಲ್ಲಿ 72.4, ಮಿಮೀ, ಭಟ್ಕಳದಲ್ಲಿ 57, ಹಳಿಯಾಳ 33.4, ಹೊನ್ನಾವರ 143.1, ಹೆರಂಗಡಿಯಲ್ಲಿ 193 ,ಕಾರವಾರ 56.3, ಕುಮಟಾ 114.4, ಮುಂಡಗೋಡ 24.5, ಸಿದ್ದಾಪುರ 106.3, ಶಿರಸಿ 77.8, ಸೂಪಾ 68.8, ಯಲ್ಲಾಪುರ 39.4, ದಾಂಡೇಲಿಯಲ್ಲಿ 43.9, ಸಾಲ್ಕೋಡು 158, ಇಡಗುಂಜಿ 154, ಹಡಿನ ಬೈಲ್ 171, ನಗರಬಸ್ತಿ ಕೇರಿ 170, ಖರ್ವಾ 147.5, ಮುಗ್ವಾ 148, ಶಿವಳ್ಳಿ 129.5, ಮಾಜಾಳಿ 32, ಮಾವಿನ ಖುರ್ವಾ 48.5 ಮಿಲಿ ಮೀಟರ್ ಮಳೆ ಸುರಿದಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 