ಲೋಕದರ್ಶನ ವರದಿ
ಬೆಳಗಾವಿ 14: ಸಿಂಡ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಬೆಳಗಾವಿ ಜಿಲ್ಲೆಯ ಆಸಕ್ತ ನಿರುದ್ಯೋಗ ಯುವತಿಯರಿಗೆ ಹಮ್ಮಿಕೊಂಡಂತಹ 30 ದಿನದ ಉಚಿತ ಬ್ಯೂಟಿ ಪಾರ್ಲರ್ ತರಬೇತಿಯನ್ನು ಹಮ್ಮಿಕೊಂಡಿದ್ದು ಅದರ ಸಮಾರೋಪ ಸಮಾರಂಭ ದಿ.08ರಂದು ಜರುಗಿತು.
ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನವನ್ನು ಅಲಂಕರಿಸಿದಂತಹ ರಾಜೇಂದ್ರ ಕಗ್ಗೋಡಿ ನಿದರ್ೇಶಕರು ರುಡ್ಸೆಟ್ ಸಂಸ್ಥೆ ಧಾರವಾಡ ಮಾತನಾಡಿ ಸಿಂಡ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯು ನಿಮಗೆ ಒಂದು ತಿಂಗಳ ಉತ್ತಮ ರೀತಿಯ ತರಬೇತಿಯನ್ನು ನೀಡಿದೆ ಇಲ್ಲಿ ಪಡೆದ ವಿದ್ಯೆಯನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸ್ವಾವಲಂಬಿಗಳಾಗಿ ಉತ್ತಮ ರೀತಿಯಲ್ಲಿ ಸ್ವ-ಉದ್ಯೋಗಿಯಾಗಿ ಮುಂದುವರೆಯಿರಿ ಮತ್ತು ಸ್ವ ಉದ್ಯೋಗ ಮಾಡುವಾಗ ಅತೀ ಕಡಿಮೆ ಬಂಡವಾಳದಲ್ಲಿ ಮೊದಲು ಉದ್ಯೋಗವನ್ನು ಪ್ರಾರಂಭಿಸಿ ನಂತರದ ದಿನಗಳಲ್ಲಿ ಅದನ್ನು ದೊಡ್ಡಮಟ್ಟಕ್ಕೆ ಕೊಂಡೊಯ್ಯಿರಿ ಮತ್ತು ಒಳ್ಳೆಯ ಮಾರ್ಗದಲ್ಲಿ ಸಾಗಿ ಯಶಸ್ವಿ ಉದ್ಯಮಿಯಾಗಿ ಇತರರಿಗೆ ಮಾರ್ಗದರ್ಶಕರಾಗಿರಿ ಎಂದು ಶುಭಕೋರಿದರು.
ತರಬೇತಿಯ ಸಂಪನ್ಮೂಲ ವ್ಯಕ್ತಿ ಮಮತಾ ನಾಯಿಕ ಅವರು ಮಾತನಾಡಿ ತರಬೇತಿಯನ್ನು ತಾವೇಲ್ಲರೂ ಅತೀ ಉತ್ಸಾಹದಿಂದ ಪಡೆದಿದ್ದೀರಿ ಆದರೆ ನಿಮ್ಮ ನಿಜವಾದ ಕೆಲಸ ಇನ್ನೂ ಮುಂದೆ ಪ್ರಾರಂಭವಾಗುತ್ತದೆ. ತಾವೆಲ್ಲರೂ ಈ ಸಂಸ್ಥೆಯಿಂದ ಉತ್ತಮವಾದ ವಿದ್ಯೆಯನ್ನು ಕಲಿತಿದ್ದೀರಿ ಅದನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಿ ಹಾಗೂ ಕಲಿತದನ್ನು ಇನ್ನಿತರರಿಗೂ ಕಲಿಸಿಕೊಡಿ ಇದರಿಂದ ನಿಮ್ಮ ಜ್ಞಾನ ಇನ್ನೂ ಹೆಚ್ಚಾಗುತ್ತದೆ ಮತ್ತು ಜೀವನದಲ್ಲಿ ತಾಳ್ಮೆಯಿಂದ ಇದ್ದರೆ ಎಲ್ಲವನ್ನು ಪಡೆಯಲು ಮತ್ತು ಸಾಧನೆ ಮಾಡಲು ಸಾದ್ಯ ಎಂದು ತಿಳಿಸಿದರು.
ಸಂಸ್ಥೆಯ ನಿದರ್ೇಶಕರಾದಂತಹ ಲಕ್ಷ್ಮೀಕಾಂತ ಪಾಟೀಲ ರವರು ಮಾತನಾಡಿ ಇವತ್ತಿನ ದಿನದಲ್ಲಿ ನಿರುದ್ಯೋಗ ನಿವಾರಣೆಗೆ ಸ್ವ-ಉದ್ಯೋಗವೆ ಮದ್ದು ಅದಕ್ಕಾಗಿ ಸಕರ್ಾರ ಹಲವಾರು ಯೋಜನೆಗಳ ಮೂಲಕ ಸಾಲ-ಸೌಲಭ್ಯ ಒದಗಿಸುತ್ತಿದೆ ಅವುಗಳ ಸಂಪೂರ್ಣ ಉಪಯೋಗವನ್ನು ಪಡೆದುಕೊಂಡು ದೊಡ್ಡಮಟ್ಟದ ಉದ್ಯಮಿಗಳಾಗಿ ಉತ್ತಮ ಜೀವನ ನಡೆಸಿರಿ, ತರಬೇತಿಯಲ್ಲಿ ಪಡೆದ ಜ್ಞಾನವನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ನೀವೂ ಇನ್ನೊಬ್ಬರಿಗೆ ಉದ್ಯೋಗವನ್ನು ಕೊಡುವಷ್ಟರ ಮಟ್ಟಿಗೆ ಬೆಳೆಯಬೇಕು, ಇವತ್ತಿನ ದಿನ ಆಥರ್ಿಕ ಕ್ಷೇತ್ರದಲ್ಲಿ, ಸ್ವ-ಉದ್ಯೋಗ ವಲಯದ ಕೊಡುಗೆ ಮಹತ್ತರವಾಗಿದ್ದು ಇದಕ್ಕೆ ಎಲ್ಲಾ ಕಡೆಗಳಲ್ಲಿಯೂ ಮಹತ್ವ ಇದೆ ಅದರ ಕಡೆಗೆ ಹೆಚ್ಚಿನ ಮಟ್ಟದಲ್ಲಿ ಕಾರ್ಯ ಪ್ರವೃತ್ತರಾಗಿ ದೇಶದ ಅಭಿವೃದ್ದಿಗೆ ಕೈ-ಜೋಡಿಸಿರಿ ಎಂದು ತಿಳಿಹೇಳಿ, ಶಿಬಿರಾಥರ್ಿಗಳಿಗೆ ಹಾರೈಸಿದರು.
ಕೊನೆಯದಾಗಿ ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾಥರ್ಿಗಳು ತಮ್ಮ ತರಬೇತಿ ದಿನಗಳ ಅನುಭವ ಮತ್ತು ಅನಿಸಿಕೆಗಳನ್ನು ಅತೀ ಉತ್ಸಾಹದಿಂದ ಹಂಚಿಕೊಂಡರು ನಂತರ ಮುಖ್ಯ ಅತಿಥಿಗಳು ಶಿಬಿರಾಥರ್ಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಸಂಸ್ಥೆಯ ಉಪನ್ಯಾಸಕ ಚಂದ್ರಕಾಂತ ಹಿರೇಮಠ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಸಂಸ್ಥೆಯ ಸಿಬ್ಬಂದಿ ಅಬ್ಬುಲ ರಜಾಕ್ ಮತ್ತು ಬಸವರಾಜ ಕುಬಸದ್ ಉಪಸ್ಥಿತರಿದ್ದರು.