ಮುಗಳಖೋಡದಲ್ಲಿ ಅಶುದ್ಧ ನೀರಿನ ಘಟಕ

ಮುಗಳಖೋಡದಲ್ಲಿ ಅಶುದ್ಧ ನೀರಿನ ಘಟಕ

 -ಪ್ರೊ.  ಪ್ರಕಾಶ ಕಂಬಾರ.

ಮುಗಳಖೋಡ 25: ಶ್ರೀ ಯಲ್ಲಾಲಿಂಗೇಶ್ವರ ಬೃಹನ್ಮಠಕ್ಕೆ ಹಾಗೂ ಮಹಾಲಿಂಗಪೂರ ಮುಖ್ಯ ರಸ್ತೆಯ ಪಕ್ಕದಲ್ಲಿ ನಿಮರ್ಿಸಿರುವ ಶುದ್ಧ ಕುಡಿಯುವ ನೀರಿನ ಘಟಕವು ಅವೈಜ್ಞಾನಿಕ ಹಾಗೂ ಚರಂಡಿ ಕಲುಷಿತ ನೀರಿನ ತಾಣದಲ್ಲಿ ನಿಮರ್ಾಣ ಮಾಡಿದ್ಧರಿಂದ ಘಟಕಕ್ಕೆ ಜನರು ನೀರು ಒಯ್ಯಲು ಬರುತಿಲ್ಲ.

ಪಟ್ಟಣದ ಮಧ್ಯಭಾಗದಲ್ಲಿರುವ ಘಟಕ ಕೆಳಗೆ ಒಂದು ಪುರಾತನ ಬಾಂವಿ ಇದ್ದು ಅದಕ್ಕೆ ಹುಳು ತೆಗೆದು ಆ ಬಾಂವಿಯನ್ನು ದುರಸ್ತಿ ಮಾಡಿದ್ದಾರೆ. ನಂತರ ಬಾಂವಿ ಪಕ್ಕ ಚರಂಡಿಯ ನೀರು ಹರಿದು ಹೋಗುತ್ತದೆ. 

ಇದರ ಕಲುಷಿತ ನೀರು ಬಾಂವಿಗೆ ಸೇರಿಕೊಳ್ಳುವುದರಿಂದ ಬಾಂವಿಯ ನೀರು ಕಲುಷಿತಗೊಂಡು ಗಬ್ಬೆದ್ಧು ನಾರುತ್ತಿದೆ. ಅಂತಹ ನೀರು ಶುದ್ಧ ಘಟಕದಿಂದ ಪರಿಶುದ್ಧವಾಗುತ್ತಿದೆ. ಇದನ್ನು ಅರಿತ ಪಟ್ಟಣದ ಜನರು ನೀರು ಒಯ್ಯಲು ಹಿಂದೇಟು ಹಾಕುತ್ತಿದ್ಧಾರೆ. 

ಈ ಘಟಕಕ್ಕೆ ಲಕ್ಷಾಂತರ ರೂಪಾಯಿ ಖಚರ್ು ಮಾಡಿ  ಅದು ಜನರಿಗೆ ಉಪಯೋಗವಾಗುತಿಲ್ಲ. ಈ ಘಟಕದ ಸುತ್ತಲೂ ಪಾರಥರ್ೇನಿಯಂ ಕಸ್, ಹುಲ್ಲು ಹಾಗೂ ಬಹಿದರ್ೆಸೆಯ ತಾಣವಾಗಿರುವದರಿಂದ ಈ ನೀರಿನ ಘಟಕವನ್ನು ಸ್ಥಳಾಂತರಗೊಳಿಸಿ ಕೊಳವೆಬಾಂವಿಯ ನೀರನ್ನು ಬಳಸಿ ಜನರಿಗೆ ಶುದ್ಧ ನೀರನ್ನು ಪೂರೈಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. 

ಪಟ್ಟಣ 45 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು ವಾರದಲ್ಲಿ ಬುಧವಾರ, ಶನಿವಾರ ಎರಡು ದಿನ ಸಂತೆ ನಡೆಯುತ್ತದೆ ಈ ಪ್ರದೇಶ ಜನದಟ್ಟಣೆಯಿಂದ ಕೂಡಿದ್ದು ಹತ್ತಾರೂ ಹಳ್ಳಿಗಳ ಜನರು ಈ ಮಾರ್ಗದ ಮೂಲಖ ಪ್ರತಿನಿತ್ಯ ಸಂಚರಿಸುತ್ತಾರೆ ಪ್ರತಿ ಅಮವಾಸ್ಯಗೆ 4 ರಾಜ್ಯಗಳ ಭಕ್ತರು ಶ್ರೀ ಮಠಕ್ಕೆ ಆಗಮಿಸುವರು ಅವರಿಗೆ ಅಶುದ್ಧ ಕುಡಿಯುವ ನೀರಿನಿಂದ ಹಲವು ರೋಗಗಳು ಬರುವ ಸಾಧ್ಯತೆ ಇದೆ. 

ಪಟ್ಟಣ ಹೆಚ್ಚು ವಿಸ್ತಾರವಾಗಿದ್ದು, ಈ ಎಲ್ಲಾ ಜನರಿಗೆ ಸೇರಿ ಸಕರ್ಾರದಿಂದ ಕೇವಲ ಒಂದು ನೀರಿನ ಘಟಕವಿರುವದರಿಂದ ದೂರದ ಪ್ರದೇಶದಿಂದ ಇಲ್ಲಿಗೆ ಬಂದು ನೀರು ಒಯ್ಯಲು ಬರುತಿಲ್ಲ. ಜನವಸತಿ ಹಾಗೂ ಸುತ್ತಮುತ್ತಲಿರುವ ಸ್ವಚ್ಚ ಇರುವ ಸ್ಥಳದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು  ಸ್ಥಳಾಂತರಿಸಬೇಕೆಂದು ಜನರು ಆಗ್ರಹಿಸಿದ್ದಾರೆ.