ಗ್ರಾಹಕರ ಕಾಯ್ದೆ ಜಾಗೃತಿ ಅಗತ್ಯವಾಗಿದೆ: ಎಸ್.ಎಚ್.ಮಜೀದ

ಹಾವೇರಿ.01: ಹುಟ್ಟಿದ ಮಗುವಿನಿಂದ ಹಿಡಿದು ಸಾಯುವ ವ್ಯಕ್ತಿಯವರೆಗೆ ಎಲ್ಲರೂ ಗ್ರಾಹಕರೆ.  ಗ್ರಾಹಕರ ಹಕ್ಕು ಕಾಯ್ದೆ ಕುರಿತು ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು  ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಎಸ್.ಎಚ್.ಮಜೀದ ಹೇಳಿದರು.

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಚೈತನ್ಯ ಗ್ರಾಮೀಣ ಅಭಿವೃದ್ದಿ ಸಂಸ್ಧೆ (ರಿ) ಸಹಯೋಗದಲ್ಲಿ ನಗರದ ಭಗತ್ ಪದವಿ ಪೂರ್ವ ಕಾಲೇಜ್ ಶನಿವಾರ ಜರುಗಿದ "ಗ್ರಾಹಕರ ಹಕ್ಕು ಮತ್ತು ಕಾಯ್ದೆ ಕುರಿತು ಕಾರ್ಯಗಾರ" ಉದ್ಘಾಟಸಿ ಅವರು ಮಾತನಾಡಿದರು.

ಗ್ರಾಹಕ ಹಕ್ಕು ಕಾಯ್ದೆ 1986 ರಲ್ಲಿ ಜಾರಿಗೆ ಬದಂದಿದ್ದು,  ಈ ಕಾಯ್ದೆ ಕುರಿತು  ವ್ಯಾಪಕ ಪ್ರಚಾರ ಮಾಡುವುದು ಅವಶ್ಯಕವಾಗಿದೆ. ಇಂದು ಗ್ರಾಹಕರು ಜಾಗೃತರಾಗುವುದರ ಮೂಲಕ ತಾವು ಖರೀದಿಸಿದ ವಸ್ತುಗಳಿಗೆ ರಶೀದಿ ಪಡೆದಾಗ ಮಾತ್ರ ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಗ್ರಾಹಕ ಜಾಗೃತನಾಗಿದ್ದರೆ ಆತ ಎಂದಿಗೂ ಮೋಸ ಹೋಗಲು ಸಾಧ್ಯವಿಲ್ಲ. ಗ್ರಾಹಕರ ಹಕ್ಕಿನ ಕುರಿತು ತಿಳಿದು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಅಡಳಿತ ಮಂಡಳಿಯ ಅಧ್ಯಕ್ಷರಾದ ಶ್ವೇತಾ ಎಂ. ಬಿ. ಅವರು ಮಾತನಾಡಿ, ಗ್ರಾಹಕರು ಜಾಗೃತರಾಗುವುದು ತುಂಬಾ ಅವಶ್ಯವಾಗಿದ.ೆ ಕೇವಲ ಪ್ರಚಾರಗಳಿಂದ ವಸ್ತುಗಳನ್ನು ಖರೀದಿಸದೆ ಅವುಗಳ ಗುಣಮಟ್ಟದ ಬಗ್ಗೆ ತಿಳಿದುಕೊಳ್ಳಬೇಕು. ಖರೀದಿಸುವ ವಸ್ತುವಿನಲ್ಲಿ ಕಂಡುಬರುವ ಕಳಪೆ ಗುಣಮಟ್ಟ, ಕಡಿಮೆ ಪ್ರಮಾಣ, ಲೋಪ ಹಾಗೂ ಇತರೆ ದೋಷ ಕಂಡುಬಂದಲ್ಲಿ ಅದಕ್ಕೆ ಕಾರಣವಾದ ವ್ಯಕ್ತಿ ಮತ್ತು ಸಂಸ್ಥೆಯ ವಿರುದ್ದ ಕಾನೂನು ಕ್ರಮ ಜರುಗಿಸಿ ಪರಿಹಾರ ಪಡೆಯುವ ಹಕ್ಕು ಗ್ರಾಹಕರಿಗಿದೆ. ವಿದ್ಯಾಥರ್ಿ ದಿಶೆಯಲ್ಲಿ ಕಲಿತ ವಿಷಯಗಳು ಮಕ್ಕಳ ಮನದಾಳದಲ್ಲಿ ಉಳಿಯುತ್ತವೆ. ಆದ್ದರಿಂದ ಇಂತಹ ಕಾರ್ಯಕ್ರಮದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಹೇಳಿದರು.

  ಸಂಪನ್ಮೂಲ ವ್ಯಕ್ತಿ ಮಾರುತಿ.ನಾ.ಹರಿಜನ ಉಪನ್ಯಾಸ ನೀಡಿದರು. ಮಕ್ಕಳ ಸಹಾಯವಾಣಿಯ ಸಂಯೋಜಕರಾದ ಮಂಜುನಾಥ ರಾಯದುರ್ಗದ. ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಿಬ್ಬಂದಿಗಳಾದ ಶಿವಾನಂದ ಗದಿಗೆರ, ಕಾಲೇಜು ಬೋದಕ ಸಿಬ್ಬಂದಿ ವರ್ಗ ಹಾಗೂ ಉಪಸ್ಥಿತರಿದ್ದರು.