ಉತ್ತಮವಾದ ಆಹಾರವನ್ನು ಸೇವಿಸಿ ಕಾಲಕಾಲಕ್ಕೆ ವೈದ್ಯರ ಸಲಹೆ ಪಡೆಯುವುದು ಅಗತ್ಯ: ಎಸ್.ಜಿ.ನ್ಯಾಮಗೌಡ
ಬೀಳಗಿ : ಕಣ್ಣುಗಳು ಇಲ್ಲದಿದ್ದರೆ ಜಗತ್ತೆ ಶೂನ್ಯ, ಅರೋಗ್ಯಕರ ಕಣ್ಣುಗಳು ಇದ್ದರೆ ಮಾತ್ರ ಜಗತ್ತನ್ನೂ ನೋಡಲ ಸಾಧ್ಯ. ಉತ್ತಮವಾದ ಆಹಾರವನ್ನು ಸೇವಿಸಿ ಕಾಲಕಾಲಕ್ಕೆ ವೈದ್ಯರ ಸಲಹೆ ಪಡೆಯುವುದು ಅಗತ್ಯ ಎಂದು ಜಿಲ್ಲಾ ನೋಂದಣಿ ಅಧಿಕಾರಿ ಎಸ್.ಜಿ.ನ್ಯಾಮಗೌಡ ಹೇಳಿದರು.
ತಾಲೂಕಿನ ಬಾಡಗಂಡಿಯ ಎಸ್.ಆರ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಸೋಮವಾರ ರಾಷ್ಟೀಯ ರೈತರ ದಿನಾಚಾರಣೆ ಪ್ರಯುಕ್ತ ಉಚಿತವಾಗಿ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಮತ್ತು ಮನೋರೋಗ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂಧತ್ವ ಮುಕ್ತ ಹಾಗೂ ಸುಂದರ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಎಸ್.ಆರ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಂಸ್ಥಾಪಕ ಅಧ್ಯಕರಾದ ಎಸ್.ಆರ್.ಪಾಟೀಲ ಸಂಸ್ಥೆಯು ಮುಂಚೂಣಿಯಲ್ಲಿ ನಿಂತಿರುವುದು ಇವರ ಕಾರ್ಯ ಶ್ಲಾಘನೀಯ ಎಂದರು.
ಸಂಸ್ಥೆಯ ಕಾರ್ಯದರ್ಶಿಗಳಾದ ಎಂ.ಎನ್.ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಎಸ್.ಆರ್.ಪಾಟೀಲರ ತಮ್ಮ ಜೀವನೋದಕ್ಕೂ ಸಾಮಾಜಿ ಚಂತನೆ ಮತ್ತು ರಾಜಕೀಯ, ಸಹಕಾರಿ, ಓದ್ಯೋಗಿಕಿಕ ಕ್ಷೇತ್ರದಲ್ಲಿ ತೊಡಗಿಕೊಂಡು ಉತ್ತರ ಕರ್ನಾಟಕ ಭಾಗದ ಜನರು ಆರೋಗ್ಯವಾಗಿ ಇರಬೇಕು ಯಾವುದೇ ಸಮಸ್ಯೆಯಿಂದ ಆನಾರೋಗ್ಯದಿಂದ ಬಳಬಾರದೆಂದು ಮನಗಂಡು ಹಾಟೈಕ್ ಆಸ್ಪತ್ರೆ ತೆರಯುವ ಮೂಲಕ ಈ ಭಾಗದ ಜನರಿಗೆ ಆರೋಗ್ಯ ಸಂಜೀವಿನಿಯಾಗಿದ್ದಾರೆ. ಅನೇಕ ವಯೋವೃದ್ದರು ಕಣ್ಣಿನ ಪೋರೆ ಹಾಗೂ ಕಣ್ಣಿನ ಇತರೆ ಕಾಯ್ಲೆಯಿಂದ ಬಳ್ಳುತ್ತಿರುವುದನ್ನು ಮನಗಂಡು ಈಭಾಗದಲ್ಲಿ ಅಂಧತ್ವ ನಿರ್ವಾಣ ಮಾಡಲು ಅವಳಿಗೆಯಲ್ಲಿ ಕಣ್ಣಿನ ತೊಂದರೆ ಇದ್ದರಿವರಿಗೆ ಕಣ್ಣಿನ ಪರೀಕ್ಷೆ ಮತ್ತು ಶಸ್ತ್ರಚಿಕಿತ್ಸೆ ಮೂಲಕ ಅವರಿಗೆ ಆರೈಕೆ ಮಾಡುವ ಕೆಲಸ ಮುಂದಾಗಿದ್ದು ಇದು ಸಾಮಾನ್ಯದ ಕೆಲಸವಲ್ಲ ಸಾರ್ವಜಿಕರು ಇದರ ಸದ್ಬಳಿಕೆ ಮಾಡಿಕೊಂಡು ಆರೋವಂತರಾಗಬೇಕು ಎಂದರು.
ಕಣ್ಣಿನ ಉಚಿತ ತಪಾಸಣಾ ಶಿಬಿರದಲ್ಲಿ 4 ನೂರಕ್ಕೂ ಅಧಿಕ ಜನರು ತಮ್ಮ ಕಣ್ಣಿನ ಪರೀಕ್ಷೆ ಮಾಡಿಕೊಂಡರು ಇದರಲ್ಲಿ 110 ಜನರು ಕಣ್ಣಿನ ಶಸ್ತ್ರಚಿಕಿತ್ಸೆ ಪಡೆದುಕೊಳ್ಳಲಿದ್ದಾರೆ. ಪರೀಕ್ಷೆಗೆ ಒಳಪಟ್ಟ ಶಿಬಿರಾರ್ಥಿಗಳಿಗೆ ಉಚಿತವಾಗಿ ವೈದ್ಯರ ಸಲಹೆದಂತೆ ಓಷದೋಪಚಾರ ನೀಡಲಾಯಿತು. ಕಾರ್ಯಕ್ರಮದಲ್ಲಿ ಎಸ್.ಆರ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಡೀನ್ ಡಾ.ಧರ್ಮರಾಯ ಇಂಗಳೆ, ವೈದ್ಯಕೀಯ ಅಧಿಕ್ಷಕರು ವಿಜಯಾನಂದ ಹಳ್ಳಿ, ಆಡಳಿತಾಧಿಕಾರಿ ಡಾ. ರಾಘವೇಂದ್ರ ಪಾಟೀಲ, ವೈದ್ಯಕೀಯ ಉಪಅಧಿಕ್ಷಕಿ ಜಯಶ್ರೀ ಎಮ್ಮಿ, ಅಶೋಕ ದಾಮ್ಮಿ, ನಿರ್ದೇಶಕರಾದ ಅನುಷಾ ಪಾಟೀಲ, ಡಾ. ಮಹಾಂತೇಶ ಹಲ್ಲಿ, ಡಾ. ಪೂರ್ಣಿಮಾ ಚಿಮ್ಮನಕಟ್ಟಿ, ನರಸಿಂಗ್ ಶುಶುಕರ ಅಧಿಕ್ಷಕರು ಮಲ್ಲಪ್ಪ ಸಂತೋಷಜಿ ಇತರರು ಇದ್ದರು.
ಪೋಟೋ: 23 ಬಿಎಲ್ ಜಿ 4
ರಾಷ್ಟೀಯ ರೈತರ ದಿನಾಚಾರಣೆ ಪ್ರಯುಕ್ತ ಉಚಿತವಾಗಿ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಮತ್ತು ಮನೋರೋಗ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಜಿಲ್ಲಾ ನೋಂದಣಿ ಅಧಿಕಾರಿ ಎಸ್.ಜಿ.ನ್ಯಾಮಗೌಡ ಉದ್ಘಾಟಿಸಿದರು.