ಶೀಘ್ರದಲ್ಲೇ ಜಿಲ್ಲಾ ಕೇಂದ್ರದಲ್ಲಿ ಸರ್ವಜ್ಞ ಸಭಾಭವನ ನಿರ್ಮಾಣ

ಹಾವೇರಿ: ಫೆ.20: ಜಿಲ್ಲಾ ಕೇಂದ್ರದಲ್ಲಿ ಶೀಘ್ರದಲ್ಲೇ ಸರ್ವಜ್ಞ ಸಭಾಭವನವನ್ನು ನಿಮರ್ಿಸಲಾಗುವುದೆಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶಿವಕುಮಾರ ಸಂಗೂರ ಅವರು ಹೇಳಿದರು. 

        ನಗರದ ದೇವರಾಜ ಅರಸು ಭವನದಲ್ಲಿ  ಜಿಲ್ಲಾಡಳಿತ ಜಿಲ್ಲಾ ಪಂಚಾಯತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕುಂಬಾರ ಸಂಘದ ಸಹಯೋಗದಲ್ಲಿ ಗುರುವಾರ ಜರುಗಿದ ತ್ರಿಪದಿ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

     ಸರ್ವಜ್ಞರ  ತ್ರಿಪದಿ ಪದ್ಯಗಳು ಸಮಾಜದಲ್ಲಿನ ಜಾತಿ ಭೇದ, ಮೇಲು ಕೀಳು ಭಾವನೆಯನ್ನು ತೋಡೆದು ಹಾಕುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿವೆ ಎಂದು ಹೇಳಿದರು.

     ಉಪನ್ಯಾಸಕರಾಗಿ ಭಾಗವಹಿಸಿದ  ಧಾರವಾಡ ತಾಲೂಕಿನ ಕರಡಿಗುಡ್ಡ ಸಕರ್ಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ನಂದೀಶ ಕಾಖಂಡಿ ಅವರು  ಸರ್ವಜ್ಞರ ತ್ರಿಪದಿಗಳು ಕನ್ನಡದಲ್ಲಿ ದಾಖಲಾಗಿರುವುದು ಕೇವಲ 1000 ತ್ರಿಪದಿಗಳು ಮಾತ್ರ. ಆದರೆ ಸರ್ವಜ್ಞರು ರಚಿಸಿರುವ ಒಟ್ಟು ತ್ರಿಪದಿಗಳ ಸಂಖ್ಯೆ 7070. ಇವುಗಳನ್ನು ಕನ್ನಡದಲ್ಲಿ ದಾಖಲಿಸುವಂತ ಕಾರ್ಯ ಆಗಬೇಕಾಗಿದೆ. ಸರ್ವಜ್ಞರು ಗುರುವಿನ ಶ್ರೇಷ್ಠೆತೆಯನ್ನು ಜಗತ್ತಿಗೆ ತಿಳಿಸುವಲ್ಲಿ ಮಹತ್ತರ ಕಾರ್ಯವನ್ನು ಮಾಡಿದ್ದಾರೆ. 

 ಆಡು ಮುಟ್ಟದ ಸೊಪ್ಪಿಲ್ಲ ಸರ್ವಜ್ಞ ಹೇಳದ ವಿಷಯವಿಲ್ಲ. ಪ್ರತಿಯೊಂದು ವಿಷಯದಲ್ಲೂ ಅವರ ತ್ರಿಪದಿಗಳು ಅನ್ವಯವಾಗುತ್ತವೆ ಎಂದರು.

  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕಿ ಶಶಿಕಲಾ ಹುಡೇದ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು, ಉಪ ತಹಶೀಲ್ದಾರರಾದ ಪಿ.ಎಸ್. ಕುಂಬಾರ, ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ರೇವಣ್ಣಾ ಚಕ್ರಸಾಲಿ, ಜಿಲ್ಲೆಯ ಸಮುದಾಯದ ಹಿರಿಯರು ಉಪಸ್ಥತರಿದ್ದರು.