ನವದೆಹಲಿ, ಜ 25 ಭಾರತದ ಸಂವಿಧಾನವನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಹೇಳಿದ್ದಾರೆ. ದೆಹಲಿಯ ಛತ್ರಾಸಲ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 71 ನೇ ಗಣರಾಜ್ಯೋತ್ಸವದ ಮುನ್ನಾದಿನದ ಕಾರ್ಯಕ್ರಮವೊಂದರಲ್ಲಿ ಕೇಜ್ರಿವಾಲ್ ಜನರನ್ನು ಉದ್ದೇಶಿಸಿ ಪಮಾತನಾಡಿದರು.
“ಗಣರಾಜ್ಯೋತ್ಸವದ ಸಂದರ್ಭದಲ್ಲಿ ದೆಹಲಿಯ ಎರಡು ಕೋಟಿ ಜನರನ್ನು ಮತ್ತು ಇಡೀ ರಾಷ್ಟ್ರವನ್ನು ಅಭಿನಂದಿಸಲು ನಾನು ಬಯಸುತ್ತೇನೆ. ಭಾರತೀಯ ಸಂವಿಧಾನವನ್ನು 70 ವರ್ಷಗಳ ಹಿಂದೆ ಜನವರಿ 26 ರಂದು ಜಾರಿಗೆ ತರಲಾಯಿತು. ನಮ್ಮ ಸಂವಿಧಾನವನ್ನು ನಮ್ಮ ಪೂಜ್ಯ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸ್ವಾತಂತ್ರ್ಯದ ಆಸೆಗಾಗಿ ಅನೇಕ ತ್ಯಾಗಗಳನ್ನು ಮಾಡಿದ ಜನರು ರೂಪಿಸಿದರು. ಅವರು ಸ್ವತಂತ್ರ ಭಾರತದ ದೃಷ್ಟಿ ಮತ್ತು ಕನಸನ್ನು ಹೊಂದಿದ್ದರು, ಇದನ್ನು ಭಾರತೀಯ ಸಂವಿಧಾನದಲ್ಲಿ ಸಂರಕ್ಷಿಸಲಾಗಿದೆ, ”ಎಂದು ಅವರು ಹೇಳಿದರು.
ಮುನ್ನುಡಿಯನ್ನು ಓದುವ ಮುನ್ನ, “ಮುನ್ನುಡಿ ನಮ್ಮ ಸಂವಿಧಾನದ ಆತ್ಮ, ಇದು ಭಾರತೀಯ ಸಂವಿಧಾನದ ತಿರುಳಾಗಿ ಕಾರ್ಯನಿರ್ವಹಿಸುತ್ತದೆ. ನಿಮ್ಮೆಲ್ಲರ ಮುಂದೆ ಇಲ್ಲಿ ಮುನ್ನುಡಿಯನ್ನು ಓದಲು ನಾನು ಬಯಸುತ್ತೇನೆ. ”
ಭಾರತೀಯ ಸಂವಿಧಾನವನ್ನು ರಕ್ಷಿಸುವುದು ಭಾರತದ 130 ಕೋಟಿ ಜನರ ಕರ್ತವ್ಯ ಎಂದು ಹೇಳಿದರು.
“ನಾವು ಸಂವಿಧಾನವನ್ನು ರಕ್ಷಿಸಿದರೆ, ನಮ್ಮ ರಾಷ್ಟ್ರ ಅಪಾಯದಲ್ಲಿದ್ದಾಗ ಸಂವಿಧಾನವು ನಮ್ಮನ್ನು ರಕ್ಷಿಸುತ್ತದೆ. ನಾವು ಭಾರತವನ್ನು ಶ್ರೇಷ್ಠನ್ನಾಗಿ ಮಾಡಬೇಕು, ಎಲ್ಲ ಕ್ಷೇತ್ರಗಳಲ್ಲೂ ಶ್ರೇಷ್ಠತೆಯನ್ನು ಸಾಧಿಸಬೇಕು, ಭಾರತವನ್ನು ವಿಶ್ವದ ಗ್ರಗಣ್ಯ ರಾಷ್ಟ್ರವನ್ನಾಗಿ ಮಾಡಬೇಕು ಎಂದರು.
ನಾವು ಫೆಬ್ರವರಿ 8 ರಂದು ದೆಹಲಿ ವಿಧಾನಸಭಾ ಚುನಾವಣೆಯನ್ನು ಹೊಂದಿದ್ದೇವೆ. ಪ್ರತಿ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ, ಸಾರ್ವಜನಿಕ ಪ್ರಾಮುಖ್ಯತೆಯ ಬಹಳಷ್ಟು ವಿಷಯಗಳ ಕುರಿತು ನಾನು ನಿಮ್ಮೊಂದಿಗೆ ಸಂವಹನ ನಡೆಸುತ್ತಿದ್ದೆ. ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ನಾನು ಉತ್ತರಿಸುತ್ತಿದ್ದೆ. ಆದರೆ ದುರದೃಷ್ಟವಶಾತ್, ಮಾದರಿ ನೀತಿ ಸಂಹಿತೆ ಜಾರಿಗೊಂಡಿರುವ ಹಿನ್ನೆಲೆಯಲ್ಲಿ ಇಂದು ನಿಮ್ಮೊಂದಿಗೆ ಹೆಚ್ಚು ಸಂವಹನ ನಡೆಸಲು ಸಾಧ್ಯವಾಗುವುದಿಲ್ಲ, ”ಎಂದು ಅವರು ಹೇಳಿದರು. ಕೇಜ್ರಿವಾಲ್ ಅವರು ತಮ್ಮ ಭಾಷಣವನ್ನು ‘ಹಮ್ ಹೊಂಗೆ ಕಾಮ್ಯಾಬ್ ..’ ಎಂಬ ಗೀತೆಯೊಂದಿಗೆ ಮುಕ್ತಾಯಗೊಳಿಸಿದರು, ಇದು ಭಾರತದ ಸ್ವಾತಂತ್ರ್ಯ ಚಳವಳಿ ಅವಧಿಯ ಪ್ರಮುಖ ಗೀತೆಯಾಗಿದೆ.