ನ.24 ರಿಂದ ಧಾರವಾಡದಲ್ಲಿ ಸಂವಿಧಾನ ಹಬ್ಬ-2019
ಧಾರವಾಡ: ಪ್ರಬುದ್ಧ ಭಾರತ ನಿಮರ್ಾಣ ಫೌಂಡೇಷನ್, ಡಾ.ಬಾಬಾಸಾಹೇಬ ಅಂಬೇಡ್ಕರ್ ಸ್ಮಾರಕ ಅಭಿವೃದ್ಧಿ ಅಕಾಡೆಮಿ, ಕನರ್ಾಟಕ ಬೌದ್ಧ ಸಾಹಿತ್ಯ ಪರಿಷತ್ತು, ಚಿತ್ತಾರ ಕಲಾಬಳಗ ಹಾಗೂ ಗಣಕರಂಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನ.24 ರಿಂದ 3 ದಿನಗಳ ಕಾಲ ನಗರದ ವಿವಿಧ ಕಡೆಗಳಲ್ಲಿ 'ಎಲ್ಲರಿಗಾಗಿ ಸಂವಿಧಾನ' ಎಂಬ ಪ್ರಧಾನ ಶೀಷರ್ಿಕೆಯಡಿ ಭಾರತೀಯ ಸಂವಿಧಾನದ ಆಶಯಗಳನ್ನು ಕೇಂದ್ರೀಕರಿಸಿ ವಿಧಾಯಕ ಚಟುವಟಿಕೆಗಳೊಂದಿಗೆ 'ಸಂವಿಧಾನ ಹಬ್ಬ-2019' ಹಮ್ಮಿಕೊಳ್ಳಲಾಗಿದೆ.
ನ. 24 ರಂದು (ರವಿವಾರ) 'ಸಂವಿಧಾನಕ್ಕಾಗಿ ಯುವ ಕಲಾವಿದರು' ಶೀಷರ್ಿಕೆಯಡಿ ಚಿತ್ರಕಲಾ ಶಿಬಿರ ಇಲ್ಲಿಯ ಸರಕಾರಿ ಆರ್ಟ ಗ್ಯಾಲರಿಯಲ್ಲಿ ನಡೆಯಲಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿದರ್ೆಶಕ ಸದಾಶಿವ ಮಜರ್ಿ ಶಿಬಿರ ಉದ್ಘಾಟಿಸಲಿದ್ದು, ಹಿರಿಯ ಕಲಾವಿದ ಬಿ.ಮಾರುತಿ ಅಧ್ಯಕ್ಷತೆ ವಹಿಸುವರು. ಕ.ವಿ.ವಿ. ಡಾ.ಅಂಬೇಡ್ಕರ್ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಸುಭಾಸಚಂದ್ರ ನಾಟೀಕಾರ, ಸರಕಾರಿ ಚಿತ್ರಕಲಾ ಮಹಾವಿದ್ಯಾಲಯದ ಮುಖ್ಯಸ್ಥ ಬಸವರಾಜ ಕುರಿಯವರ ಹಾಗೂ ಹಿರಿಯ ಸಾರಿಗೆ ಅಧಿಕಾರಿ ಭರತ ಕಾಳೆಸಿಂಗ್ ಅತಿಥಿಗಳಾಗಿ ಪಾಲ್ಗೊಳ್ಳುವರು. ಉತ್ತರ ಕನರ್ಾಟಕದ 25 ಯುವ ಕಲಾವಿದರು 2 ದಿನಗಳ ಕಾಲ ಈ ಶಿಬಿರದಲ್ಲಿ ತಮ್ಮ ಕಲಾಕೃತಿಗಳನ್ನು ಚಿತ್ರಿಸಲಿದ್ದಾರೆ.
ನ. 25ರಂದು (ಸೋಮವಾರ) ಮುಂಜಾನೆ 10.30 ಗಂಟೆಗೆ 'ನಾವು ಮತ್ತು ನಮ್ಮ ಸಂವಿಧಾನ' ಕುರಿತು ಜಿಲ್ಲೆಯ ವಿದ್ಯಾಥರ್ಿಗಳಿಗಾಗಿ ಪ್ರಬಂಧ ಸ್ಪಧರ್ೆ ಹಾಗೂ 'ಭಾರತದ ಸಂವಿಧಾನ' ಕುರಿತು ರಸಪ್ರಶ್ನೆ ಸ್ಪಧರ್ೆ ನಗರದ ಸರಕಾರಿ ಶಿಕ್ಷಕಿಯರ ತರಬೇತಿ ವಿದ್ಯಾಲಯ(ಟಿಸಿಡಬ್ಲ್ಯು)ದಲ್ಲಿ ಜರುಗಲಿದೆ. ಆಕಾಶವಾಣಿಯ ಕಾರ್ಯಕ್ರಮ ಅಧಿಕಾರಿ ಡಾ. ಬಸು ಬೇವಿನಗಿಡದ ಸ್ಪಧರ್ೆಗಳನ್ನು ಉದ್ಘಾಟಿಸಲಿದ್ದು, ಡಿಡಿಪಿಐ ಗಜಾನನ ಮನ್ನಿಕೇರಿ ಅಧ್ಯಕ್ಷತೆವಹಿಸುವರು. ಪ್ರಾಧ್ಯಾಪಕ ಡಾ.ವಿ.ಪಿ.ಸುಣಗಾರ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ.ಖಾಜಿ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸ್ಪಧರ್ೆಗಳಲ್ಲಿ ಪ್ರಥಮ, ದ್ವೀತಿಯ ಮತ್ತು ತೃತೀಯ ಸ್ಥಾನ ಪಡೆದವರಿಗೆ ಕ್ರಮವಾಗಿ 4 ಸಾವಿರ, 2 ಸಾವಿರ, 1 ಸಾವಿರ ರೂ.ಗಳ ನಗದು ಪುರಸ್ಕಾರ ಜೊತೆಗೆ ಪ್ರಮಾಣ ಪತ್ರ ನೀಡಲಾಗುವುದು. ಸ್ಪಧರ್ೆಗಳಲ್ಲಿ ಭಾಗವಹಿಸಲು ಆಸಕ್ತ ವಿದ್ಯಾಥರ್ಿಗಳು ಜಿಲ್ಲೆಯ ಎಲ್ಲ 7 ತಾಲೂಕುಗಳ ಬಿಇಓ ಅವರನ್ನು ಸಂಪಕರ್ಿಸಲು ಕೋರಲಾಗಿದೆ.
ನ.26 ರಂದು (ಮಂಗಳವಾರ) ಮುಂಜಾನೆ 10.30 ಗಂಟೆಗೆ ಇಲ್ಲಿಯ ಕ.ವಿ.ವ. ಸಂಘದ ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ 'ಸಂವಿಧಾನ ದಿನಾಚರಣೆ' ಹಮ್ಮಿಕೊಳ್ಳಲಾಗಿದ್ದು, ಹುಬ್ಬಳ್ಳಿಯ ಕನರ್ಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ. ಈಶ್ವರ ಭಟ್ ಉದ್ಘಾಟಿಸುವರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಮುಖ್ಯ ಅತಿಥಿಯಾಗಿ ಆಗಮಿಸುವರು. ಶಿಕ್ಷಣ ಇಲಾಖೆಯ ಜಂಟಿ ನಿದರ್ೇಶಕ ಡಾ.ಬಿ.ಕೆ.ಎಸ್.ವರ್ಧನ್ ಅಧ್ಯಕ್ಷತೆವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕಿ ಮಂಜುಳಾ ಯಲಿಗಾರ ಪಾಲ್ಗೊಳ್ಳುವರು. ಇದೇ ಸಂದರ್ಭದಲ್ಲಿ ಪ್ರಬಂಧ ಸ್ಪಧರ್ೆ ಮತ್ತು ರಸಪ್ರಶ್ನೆ ಸ್ಪಧರ್ೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಗುವುದು.
ಮಂಗಳವಾರ ಮಧ್ಯಾಹ್ನ 2.30 ರಿಂದ 4.30 ರವರೆಗೆ ಕ.ವಿ.ವ. ಸಂಘದ ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಶಿಕ್ಷಕರಿಗಾಗಿ 'ಸಂವಿಧಾನ ಸಂವೇದನಾಶೀಲತಾ' ಕಾಯರ್ಾಗಾರ ಜರುಗುವುದು. ಕನರ್ಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಡೀನ್ ಪ್ರೊ.ಸಿ.ಎಸ್.ಪಾಟೀಲ ಕಾಯರ್ಾಗಾರದ ಅಧ್ಯಕ್ಷತೆ ವಹಿಸಲಿದ್ದು, ಕೆಎಸ್ಎಪ್ಸಿಯ ವ್ಯವಸ್ಥಾಪಕ ತಮ್ಮಣ್ಣ ಮಾದರ ಆಶಯ ನುಡಿ ಹಂಚಿಕೊಳ್ಳುವರು. ವಿಷಯತಜ್ಞರಾಗಿ ಡಾ.ಸುರೇಶ ಹುಲ್ಲಣ್ಣವರ್ ಹಾಗೂ ಸದಾಶಿವ ಮಜರ್ಿ ಆಗಮಿಸುವರು.
ಜಾಗೃತಿ ಜಾಥಾ : ಮಂಗಳವಾರ ಸಂಜೆ 5.30 ಗಂಟೆಗೆ ಕನರ್ಾಟಕ ವಿದ್ಯಾವರ್ಧಕ ಸಂಘದಿಂದ ವಿವೇಕಾನಂದ ವೃತ್ತ, ಕೆಸಿಸಿ ಬ್ಯಾಂಕ್ ಸರ್ಕಲ್ ಮಾರ್ಗವಾಗಿ ಜುಬಲಿ ಸರ್ಕಲ್ದಲ್ಲಿರುವ ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿವರೆಗೆ 'ಸಂವಿಧಾನದೆಡೆಗೆ ನಮ್ಮ ನಡಿಗೆ : ಜಾಗೃತಿ ಜಾಥಾ' ಜರುಗಲಿದೆ. ಕಲಾವಿದ ಬಸವರಾಜ ಶಿಗ್ಗಾಂವ, ವಿರೇಶ ಬಡಿಗೇರ ಅವರಿಂದ ಸಂವಿಧಾನ ಜಾಗೃತಿ ಗೀತೆಗಳ ಗಾಯನ, ಪ್ರೊ. ವಿ.ಬಿ.ಬಿಜಾಪೂರ ಅವರಿಂದ ದೇಶಭಕ್ತಿ ಗೀತ ಗಾಯನ, ಅನಿಲ ಮೇತ್ರಿ, ಹೇಮಂತಕುಮಾರ ಲಮಾಣಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಗಣಕರಂಗ ಕಲಾವಿದರಿಂದ ಸಂವಿಧಾನದ ಆಶಯಗಳ ಕುರಿತಾದ 'ಆಯುಧ' ನಾಟಕ ಯೋಗೇಶ ಪಾಟೀಲ ನಿದರ್ೇಶನದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಪ್ರಬುದ್ಧ ಭಾರತ ನಿಮರ್ಾಣ ಫೌಂಡೇಷನ್, ಡಾ.ಬಾಬಾಸಾಹೇಬ ಅಂಬೇಡ್ಕರ್ ಸ್ಮಾರಕ ಅಭಿವೃದ್ಧಿ ಅಕಾಡೆಮಿ, ಕನರ್ಾಟಕ ಬೌದ್ಧ ಸಾಹಿತ್ಯ ಪರಿಷತ್ತು ಮತ್ತು ಚಿತ್ತಾರ ಕಲಾಬಳಗದ ಪದಾಧಿಕಾರಿಗಳು ಜಂಟಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.