ಸಂವಿಧಾನದ ಹಕ್ಕು,ಕರ್ತವ್ಯ ಪಾಲಿಸಿ

ಹಾವೇರಿ: ಇಂದಿನ ವಿದ್ಯಾಥರ್ಿಗಳೆ ದೇಶವನ್ನು ಆಳುವ ಭಾವಿ ನಾಯಕರು. ಉತ್ತಮ ಸಮಾಜ ಕಟ್ಟುವಲ್ಲಿ ಇವರ ಪಾತ್ರ ಪ್ರಮುಖವಾಗಿದೆ.  ಭಾರತ ಸಂವಿಧಾನದಲ್ಲಿ ಅಳವಡಿಸಲಾಗಿರುವ ಹಕ್ಕುಗಳು ಮತ್ತು ಕರ್ತವ್ಯಗಳನ್ನು ವಿದ್ಯಾರ್ಥಿಗಳು ಜವಾಬ್ದಾರಿಗಳನ್ನು ಅರಿತು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ರಮೇಶ್ ದೇಸಾಯಿ ಅವರು ಹೇಳಿದರು.

 ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾವೇರಿ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಗರದ ಗುರುಭವನದಲ್ಲಿ ರಾಷ್ಟ್ರೀಯ ಸಂವಿಧಾನ ದಿನದ ಅಂಗವಾಗಿ ಆಯೋಜಿಸಿದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

 ಸ್ವಾತಂತ್ರ್ಯ ಪೂರ್ವ ನಮ್ಮ ದೇಶದಲ್ಲಿ ಬ್ರಿಟಿಷ ಆಡಳಿತ ವ್ಯವಸ್ಥೆ ಜಾರಿಯಲ್ಲಿತ್ತು. ಸ್ವಾತಂತ್ರ್ಯದ ಬಳಿಕ ವಿವಿಧತೆಯಲ್ಲಿ ಏಕತೆಯನ್ನೊಳಗೊಂಡ ಭಾರತ ರಾಷ್ಟ್ರದಲ್ಲಿ  ನಾಗರೀಕರ ಹಕ್ಕು ಬಾದ್ಯತೆ ಕರ್ತವ್ಯಗಳು ಹಾಗೂ ರಾಜನಿದರ್ೇಶಕ ತತ್ವಗಳನ್ನೊಳಗೊಂಡ ಬೃಹತ್ ಸಂವಿಧಾನವನ್ನು 1949 ನವಂಬರ್ 26 ರಂದು ಅಂಗೀಕರಿಸಲಾಯಿತು. ಅದರ ಸವಿ ನೆನಪಿಗಾಗಿ ಆ ದಿನವನ್ನು ರಾಷ್ಟ್ರೀಯ ಸಂವಿಧಾನ ದಿನಾಚರಣೆಯಾಗಿ ಆಚರಣೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.

 ಬೃಹತ್ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆ ಇರುವ ಭಾರತದಲ್ಲಿ ಕೇಂದ್ರ, ರಾಜ್ಯ ಹಾಗೂ ಸ್ಥಳೀಯ ಎಂಬಂತೆ ಒಟ್ಟು ಮೂರು ಹಂತದಲ್ಲಿ ಆಡಳೀತ ವ್ಯವಸ್ಥೆ ರಚನೆ ಮಾಡಿ ಅಧಿಕಾರ ವಿಕೇಂದ್ರಿಕರಣ ಮಾಡಲಾಗಿದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಚುನಾವಣೆ ಅತೀ ಮುಖ್ಯವಾದ ಘಟ್ಟವಾಗಿದೆ. ಈ ಎಲ್ಲ ಹಂತಗಳಲ್ಲೂ ಚುನಾವಣೆಗಳ ಮೂಲಕ ಪ್ರತಿನಿಧಿಗಳನ್ನು ಆಯ್ಕೆಮಾಡಲಾಗುತ್ತದೆ.  18 ವರ್ಷ ಮೆಲ್ಪಟ್ಟ ಎಲ್ಲರೂ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಉದ್ದೇಶದಿಂದ ಮತದಾನದ ಮಹತ್ವ, ಮತದಾನದಲ್ಲಿ ಪಾಲ್ಗೊಳ್ಳುವಿಕೆ ಮತ್ತು ಹೇಗೆ ಮತದಾನ ಮಾಡಬೇಕು ಎಂಬ ಪ್ರಕ್ರಿಯೆಗಳ ಕುರಿತಂತೆ ಶಾಲಾ ಹಂತದಲ್ಲೇ  ಜಾಗೃತಿ ಮೂಡಿಸಲು ಎಎಲ್ಸಿ ತಂಡಗಳನ್ನ ರಚನೆ ಮಾಡಲಾಗಿದೆ. ಆ ಮೂಲಕ ಭವಿಷ್ಯದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ  ಎಂದು ಅವರು ಹೇಳಿದರು.

ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಅಂತರ್ಜಲ ಹೆಚ್ಚಳ, ಅರಣ್ಯ ಸಂರಕ್ಷಣಾ ಚಟುವಟಿಕೆ, ಭೂ ರಕ್ಷಣೆ ಚಟುವಟಿಕೆ, ಸ್ವಚ್ಛತೆ ಹಾಗೂ ಆರೋಗ್ಯ ಸೇರಿದಂತೆ ವಿವಿಧ ವಿಷಯಗಳ ಕುರಿತು  ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಯೋಜಿಸಲಾಗುವುದು. ಪ್ರತಿ ಹಳ್ಳಿಗಳಲ್ಲಿ ಇಂತಹ ಚುಟವಟಿಕೆಗಳನ್ನು ನಡೆಸುವ ಮೂಲಕ ಉತ್ತಮ ಸಮಾಜದ ನಿಮರ್ಾಣ ಮಾಡುವ ಸ್ಫೂತರ್ಿಯನ್ನು ಮಕ್ಕಳಲ್ಲಿ ಬೆಳೆಸಲಾಗುವುದು ಎಂದು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿದರ್ೇಶಕ ಅಂದಾನೆಪ್ಪ ವಡಗೇರಿ ಅವರು ಮಾತನಾಡಿ, ಚುನಾವಣಾ ಪ್ರಕ್ರಿಯೆ, ಮತದಾನದ ಜಾಗೃತಿಗಾಗಿ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ  ಇಎಲ್ಸಿ ಕ್ಲಬ್ಗಳನ್ನು ಆರಂಭಿಸಲಾಗಿದೆ. 411 ಇ.ಎಲ್.ಸಿ. ಕ್ಲಬ್ಗಳು ಕಾರ್ಯನಿರ್ವಹಿಸುತ್ತಿವೆ. ನಿರಂತರವಾಗಿ ಈ ತಂಡಗಳ ಮೂಲಕ ಚಟುವಟಿಕೆ ನಡೆಸಲಾಗುತ್ತದೆ ಎಂದು  ಹೇಳಿದರು.

 ಕಾರ್ಯಕ್ರಮದಲ್ಲಿ  ವಾತರ್ಾಧಿಕಾರಿ ಬಿ.ಆರ್.ರಂಗನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಎಂ.ಪಾಟೀಲ್, ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕ ಇಚ್ಚಂಗಿ, ವಿಷಯ ಪರಿವೀಕ್ಷಕರಾದ ಈರಪ್ಪ ಲಮಾಣಿ, ಉದರ್ು ಶಿಕ್ಷಣ ಶಾಲೆಯ ಸಂಯೋಜಕ ಸಿಖಂದರ್ ಮುಲ್ಲಾ, ಚುನಾವಣಾ ಸಾಕ್ಷರತಾ ಸಂಘಗಗಳ ಸಂಯೋಜಕರು, ವಿವಿಧ ಶಾಲೆಯ ವಿದ್ಯಾಥರ್ಿಗಳು ಭಾಗವಹಿಸಿದ್ದರು. ಸಂವಿಧಾನ ದಿನದ ಅಂಗವಾಗಿ ವಿಷಯ ಪರಿವೀಕ್ಷಕರಾದ ಮಂಜಪ್ಪ ಅವರು ಸಂವಿಧಾನದ ಪೀಠಿಕೆ ಪ್ರತಿಜ್ಞಾವಿಧಿ ಬೋಧಿಸಿದರು.

 ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಪ್ರಬಂಧ ಸ್ಪಧರ್ೆ, ಚಿತ್ರಕಲಾ ಸ್ಪಧರ್ೆ, ರಸಪ್ರಶ್ನೆ,  ನಾಟಕ  ಹಾಗೂ ಇತರ ಸ್ಪಧರ್ೆಗಳು ಜರುಗಿದವು. ಜಿಲ್ಲೆಯ ಏಳು ತಾಲೂಕಿನ ವಿದ್ಯಾಥರ್ಿಗಳು ಸ್ಪಧರ್ೆಯಲ್ಲಿ ಪಾಲ್ಗೊಂಡಿದ್ದರು