ಕೊಪ್ಪಳ 24: ದುರ್ಬಲ ವರ್ಗದ ಶೋಷಣೆ, ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಮುಂತಾದ ಸಾಮಾಜಿಕ ಪಿಡುಗುಗಳನ್ನು ತಡೆಗಟ್ಟಿ ಸಮಾಜದ ಕೊನೆಯ ವ್ಯಕ್ತಿಗೂ ಕಾನೂನಿನ ನೆರವು ನೀಡಲು ನಮ್ಮ ಸಂವಿಧಾನ ಭದ್ರ ಅಡಿಪಾಯ ನಿಮರ್ಿಸಿದೆ ಎಂದು ಕನರ್ಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂತರ್ಿಗಳು ಹಾಗೂ ಕೊಪ್ಪಳ ಜಿಲ್ಲೆ ಆಡಳಿತಾತ್ಮಕ ನ್ಯಾಯಮೂತರ್ಿಗಳಾದ ಪಿ.ಜಿ.ಎಂ. ಪಾಟೀಲ್ ಅವರು ಹೇಳಿದರು.
ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ವಕೀಲರ ಸಂಘ, ಪೊಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸಹಯಾನ ಕೆರೆಕೋಣ, ಸಮುದಾಯ ಕನರ್ಾಟಕ ಸಂಸ್ಥೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಶನಿವಾರದಂದು ಆಯೋಜಿಸಲಾದ ``ಸಂವಿಧಾನ ಓದು'' ವಿಷಯ ಕುರಿತ ಐದು ದಿನಗಳ ಕಾಯರ್ಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯಯುತ ವ್ಯಕ್ತಿತ್ವ, ಉತ್ತಮ ಸಮಾಜ ನಿಮರ್ಾಣ, ದೇಶದಲ್ಲಿನ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣಕ್ಕೆ ಅಗತ್ಯವಾದ ಕಾನೂನುಗಳನ್ನು ರಚಿಸಲು ಭಾರತದ ಸಂವಿಂಧಾನ ಮಾರ್ಗದರ್ಶಿ ಯಾಗಿದೆ. ಪ್ರಪಂಚದಲ್ಲಿಯೇ ಗಾತ್ರದಲ್ಲಿ ಮಾತ್ರವಲ್ಲದೆ ಅದರಲ್ಲಿ ಅಳವಡಿಸಿಕೊಂಡ ವಿಷಯಗಳಿಂದಲೂ ಬೃಹತ್ತಾಗಿರುವ ನಮ್ಮ ಸಂವಿಧಾನ ಇತರ ರಾಷ್ಟ್ರಗಳಿಂದಲೂ ಮೆಚ್ಚುಗೆ ಪಡೆದಿದೆ. ಕಾನೂನಿನ ಪರವಾಗಿ ಕರ್ತವ್ಯ ನಿರ್ವಹಿಸುವ ಎಲ್ಲಾ ನ್ಯಾಯಾಧೀಶರು, ಕಾನೂನು ಅಧಿಕಾರಿಗಳು, ವಕೀಲರು, ಕಾನೂನು ವೃತ್ತಿಪರರಿಗೆ ಕಾನೂನಿನ ಕುರಿತು ಇರುವ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಹಾಗೂ ಕಾಪರ್ೋರೇಟ್ ಕಾನೂನು ಜ್ಞಾನವನ್ನು ಅರಿಯಲು ಈ ಕಾಯರ್ಾಗಾರ ಹೆಚ್ಚು ಸಹಕಾರಿಯಾಗಲಿದೆ. ಪ್ರಸ್ತುತ ಕಾನೂನು ವೃತ್ತಿಪರರು ತಮ್ಮ ಕಾನೂನು ಜ್ಞಾನದ ಜೊತೆಗೆ ಕಂಪ್ಯೂಟರ್, ಸೈಬರ್ ಜ್ಞಾನವನ್ನು ಅರಿವುದು ಅಷ್ಟೇ ಮುಖ್ಯ. ಆಗಿಂದಾಗ್ಗೆ ಕಾನೂನುಗಳಲ್ಲಾಗುವ ತಿದ್ದುಪಡಿಗಳು, ಬದಲಾವಣೆಗಳು ಹಾಗೂ ಅಭಿವೃದ್ಧಿಗಳ ಕುರಿತು ತಿಳಿದಿರಬೆಕು. ಆ ಎಲ್ಲಾ ಜ್ಞಾನಗಳನ್ನು ಕಾನೂನುಗಳ ತಾಯಿ ಎಂದೆನಿಸಿದ ಭಾರತದ ಸಂವಿಧಾನ ನಮಗೆ ತಿಳಿಸಿಕೊಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಕನರ್ಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂತರ್ಿಗಳಾದ ಎಚ್.ಎನ್. ನಾಗಮೋಹನ್ದಾಸ್ ಅವರು ಮಾತನಾಡಿ, ಕಾನೂನು ರಚಿಸುವ, ಜಾರಿಗೊಳಿಸುವ ಮತ್ತು ಕಾನೂನು ಉಲ್ಲಂಘನೆಯಾದ ಸಂದರ್ಭ ಶಿಕ್ಷೆ ನೀಡುವ ಒಟ್ಟಾರೆ ಅಂಶಗಳನ್ನು ಭಾರತದ ಸಂವಿಧಾನ ಒಳಗೊಂಡಿದೆ. ದೇಶದ ಉತ್ತಮ ಆಡಳಿತಕ್ಕೆಂದು ನಿಮರ್ಿಸಲಾದ ಶಾಸಕಾಂಗ, ಕಾಯರ್ಾಂಗ, ನ್ಯಾಯಾಂಗ ಇವುಗಳು ತಮ್ಮ ಅಧಿಕಾರವ್ಯಾಪ್ತಿ ಮೀರಿ ವತರ್ಿಸಿದಾಗ ಅವುಗಳನ್ನು ನಿಯಂತ್ರಿಸಲು ರಚಿಸಿದ ನಿಯಮಗಳು ಕಾನೂನುಗಳಾಗಿ ಜಾರಿಯಲ್ಲಿವೆ. ಪ್ರಪಂಚದ 190 ರಾಷ್ಟ್ರಗಳು ತಮ್ಮದೇಯಾದ ಸ್ವತಂತ್ರ ಸಂವಿಧಾನವನ್ನು ಹೊಂದಿವೆ. ನಮ್ಮ ದೇಶದ 130 ಕೋಟಿ ಜನರು ಹುಟ್ಟಿನಿಂದ ಸಾವಿನವರೆಗೂ ಪ್ರತೀ ಹಂತದಲ್ಲೂ ಸಂವಿಧಾನದ ವಿವಿಧ ನಿಯಮಗಳಡಿ ಜೀವನ ನಡೆಸುತ್ತಾರೆ. ಮೂಲಭೂತ ಅಗತ್ಯಗಳೊಂದಿಗೆ ವಿವಿಧ ರೀತಿಯ ಮೂಲ ಸೌಕರ್ಯಗಳನ್ನು, ಸಮಾನತೆ, ಸಾಮಾಜಿಕ ನ್ಯಾಯ, ಮಹಿಳೆಯರ ಅಭಿವೃದ್ಧಿ, ಸಮಾನ ಅವಕಾಶ, ಸಮಾನ ವೇತನ, ಸಾಮಾಜಿಕ ಭದ್ರತೆ ಸೇರಿದಂತೆ ದೇಶದ ಹಾಗೂ ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ಅಭಿವೃದ್ಧಿಗೆ ಹಾಗೂ ಸಮಾಜ ಸುಧಾರಣೆಗೆ ಭಾರತದ ಸಂವಿಧಾನ ಮಾರ್ಗಸೂಚಿಯಾಗಿದೆ ಎಂದರು.
ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಸಂಜೀವ್ ವಿ. ಕುಲಕಣರ್ಿ ಅವರು ಮಾತನಾಡಿ, ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಿರುವ ಸಂವಿಧಾನದ ಕುರಿತಾದ ಜ್ಞಾನ ಎಲ್ಲರಿಗೂ ಅವಶ್ಯಕ. ಸಂವಿಧಾನವನ್ನು ಅಥರ್ೈಸಿಕೊಂಡು ಹಾಗೂ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ನಡೆಸೋಣ. ಈ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾದ ``ಸಂವಿಧಾನ ಓದು'' ಕಾರ್ಯಾಗಾರ ಐದು ದಿನಗಳ ಕಾಲ ನಡೆಯಲಿದ್ದು, ಯುವ ನ್ಯಾಯಾವಾಧಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಹೆಚ್.ಹೆಚ್. ಮುರಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಸೈಯಿದಾ ಅಯಿಷಾ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಅಮಿತಾ ಯರಗೋಳ್ಕರ್, ಸಮುದಾಯ ಕನರ್ಾಟಕ ಬೆಂಗಳೂರು, ರಾಜ್ಯ ಕಾರ್ಯದರ್ಶಿ ಎಸ್. ದೇವೇಂದ್ರಗೌಡ, ಜಿಲ್ಲಾ ಸರ್ಕಾರಿ ವಕೀಲ ಆಸೀಪ್ ಅಲಿ, ವಕೀಲರಾದ ಕಾಮರೆಡ್ಡಿ, ಎ.ವಿ. ಕಣವಿ, ಸಂಧ್ಯಾ ಮಾದಿನೂರ, ಎಚ್.ಎಚ್. ಮಿಟ್ಟಲಕೋಡ, ಬಿ.ವಿ. ಸಜ್ಜನ, ಡಿ.ವೈ.ಎಸ್.ಪಿ ರಾಜವೆಂಕಟಪ್ಪ ನಾಯಕ, ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ತಾಲೂಕುಗಳ ನ್ಯಾಯಾಧೀಶರು ಮತ್ತು ವಕೀಲರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಕಾನೂನು ವಿದ್ಯಾಲಯದ ವಿದ್ಯಾಥರ್ಿಗಳುಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ರಾಘವೇಂದ್ರ ಪಾನಘಂಟಿ ಸರ್ವರನ್ನು ಸ್ವಾಗತಿಸಿದರು ಹಾಗೂ ಸಿ.ವಿ ಜಡಿಯವರ ಕಾರ್ಯಕ್ರಮ ನಿರೂಪಿಸಿದರು. ಕನರ್ಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಗಳಾದ ಎಚ್.ಎನ್. ನಾಗಮೋಹನ್ದಾಸ್ ಅವರು ರಚಿಸಿದ ``ಸಂವಿಧಾನ ಓದು'' ಪುಸ್ತಕವನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.