ರಾಯಬಾಗ 26: ಭಾರತ ದೇಶದ ಸಂವಿಧಾನ ವಿಶ್ವದಲ್ಲಿಯೇ ಅತ್ಯುತ್ತಮ ಸಂವಿಧಾನ ಎನ್ನಿಸಿಕೊಂಡಿದೆ ಎಂದು ಹಿರಿಯ ವಕೀಲರಾದ ಎಲ್.ಬಿ.ಚೌಗುಲೆ ಹೇಳಿದರು.
ಮಂಗಳವಾರ ಪಟ್ಟಣದ ಭರಮಾ ಅಣ್ಣಪ್ಪ ಚೌಗಲೆ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಎಸ್.ಪಿ.ಎಮ್ ಕಾನೂನು ಮಹಾವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನದ ಶಿಲ್ಪಿಗಳು ವಿಶ್ವದ ಎಲ್ಲ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಅಚ್ಚುಕಟ್ಟಾಗಿ ನಮ್ಮ ಸಂವಿಧಾನವನ್ನು ರಚಿಸಿದ್ದಾರೆ ಎಂದು ಹೇಳಿದರು.
ಎಸ್.ಪಿ.ಎಮ್. ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಎಸ್.ಎಸ್. ಕುರಬೇಟಿ ಮಾತನಾಡಿ, ಭಾರತದ ಸಂವಿಧಾನವನ್ನು ಅಂಗೀಕರಿಸಿದ ನೆನಪಿಗಾಗಿ ಪ್ರತಿ ವರ್ಷ ನವೆಂಬರ್ 26 ರಂದು ಭಾರತದಲ್ಲಿ ಸಂವಿಧಾನ ದಿನವನ್ನು ಆಚರಿಸಲಾಗುತ್ತದೆ ಎಂದರು. ಅಧ್ಯಕ್ಷತೆಯನ್ನು ಹಿರಾಬಾಯಿ ಭರಮಾ ಚೌಗಲೆ ಪದವಿ ಕಾಲೇಜಿನ ಪ್ರಾಚಾರ್ಯ ಎಸ್.ಎಸ್. ದಿಗ್ಗೆವಾಡಿ ವಹಿಸಿದ್ದರು. ಬಿ.ಎ.ಚೌಗುಲೆ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನಯ ಚೌಗಲೆ, ಉಪನ್ಯಾಸಕರಾದ ಪಿ.ಆರ್ ಸವದತ್ತಿ, ಆಯ್.ಆರ್ ಪತ್ತಾರ, ಎಮ್.ಆರ್ ಕಠಾರಿ, ಸುರೇಶ ಶಿಂಧೆ, ಕುಮಾರ ಭಜಂತ್ರಿ, ಪಿ ಡಿ ಲಂಗೋಟಿ, ಜಿ.ಡಿ. ಪೂಜಾರಿ, ಕಾವೇರಿ ಪಾಟೀಲ, ಎ.ವಿ ಪಾಟೀಲ, ಆಶಾ ಕಾಂಬಳೆ, ಪಿ.ಎಸ್ ಕಾಳೆ, ರಾಮು ಕಾಕಡೆ ಹಾಗೂ ವಿದ್ಯಾರ್ಥಿಗಳು ಇದ್ದರು.