ಭಾರತದ ಸಂವಿಧಾನ ಸಮಸ್ತ ಜನತೆಯ ಪ್ರತಿನಿಧಿ: ತಿಮ್ಮಾಪುರ್

ಗದಗ 27: ದೇಶದ ಸರ್ವಜನತೆಯ ಧರ್ಮ, ಸಂಸ್ಕೃತಿ, ಭಾಷೆ, ಸಂಪ್ರದಾಯ, ರೂಢಿ ಪದ್ದತಿಗಳ ಪ್ರತೀಕವಾಗಿರುವ ಭಾರತದ ಸಂವಿಧಾನವು ವಿಶ್ವದಲ್ಲೇ ಅತ್ಯಂತ ಶ್ರೇಷ್ಠವಾಗಿದ್ದು ಸಮಸ್ತ ಜನತೆಯ ಪ್ರತಿನಿಧಿಯಾಗಿದೆ ಎಂದು ರಾಜ್ಯದ ಸಕ್ಕರೆ ಇಲಾಖೆ ಸಚಿವರಾದ ಆರ್.ಬಿ.ತಿಮ್ಮಾಪುರ್ ನುಡಿದರು.

ಗದಗ ಜಿಲ್ಲಾಡಳಿತವು ಗದಗ ಬೆಟಗೇರಿಯ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿಂದು ಸಾರ್ವಜನಿಕ ರಾಷ್ಟ್ರ ಧ್ವಜಾರೋಹಣವನ್ನು ನೆರವೇರಿಸಿ, ವಿವಿಧ ದಳಗಳನ್ನು ವೀಕ್ಷಿಸಿ ಅವುಗಳ ಪಥ ಸಂಚಲನದಲ್ಲಿ ಗೌರವವಂದನೆ ಸ್ವೀಕರಿಸಿ ಅವರು ಮಾತನಾಡಿದರು. ದೇಶದ ಜನಗಳ ಐಕ್ಯತೆ ಮತ್ತು ಸಹಿಷ್ಣುತೆಯಲ್ಲಿ ಬೆಸೆಯುವಂತೆ ಸಂವಿಧಾನದ ಕರಡನ್ನು ಸಿದ್ಧಪಡಿಸಿದ ಕೀತರ್ಿ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ನಮ್ಮ ಬೃಹತ್ ಸಂವಿಧಾನ ಒಂದೆರಡು ದಿನಗಳಲ್ಲಿ ಏಕವ್ಯಕ್ತಿ ರಚಿಸಿದ್ದಲ್ಲ ಸ್ವಾತಂತ್ರ್ಯ ಮುನ್ನ 1946 ಡಿಸೆಂಬರ 9 ರಿಂದ 1949ರ ನವಂಬರ 26 ರ ವರೆಗೆ 11 ಅಧಿವೇಶನಗಳ ಸಹಿತ ಒಟ್ಟು 2 ವರ್ಷ 11 ತಿಂಗಳು 18 ದಿನಗಳ ಸತತ ಪರಿಶ್ರಮದ ಫಲಶೃತಿ ಇದು. ಇವುಗಳನ್ನು ಪ್ರತಿಯೊಬ್ಬ ಪ್ರಜೆಯು ಅತ್ಯವಶ್ಯವಾಗಿ ಪಾಲಿಸಿದಾಗ ಪ್ರಜಾಪ್ರಭುತ್ವವು ಯಶಸ್ವಿಯಾಗುತ್ತದೆ ಎಂದು ಸಚಿವ ಆರ್.ಬಿ.ತಿಮ್ಮಾಪುರ ನುಡಿದರು. 

     ಕೇಂದ್ರ ಸಕರ್ಾರದ ಯೋಜನೆ ಬೇಟಿ ಬಚಾವೊ ಬೇಟಿ ಪಡಾವೊ-ಹೆಣ್ಣು ಮಕ್ಕಳನ್ಮ್ನ ರಕ್ಷಿಸಿ, ಹೆಣ್ಣು ಮಕ್ಕಳನ್ನು ಓದಿಸಿ-ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಗದಗ ಜಿಲ್ಲೆ ವಿಶೇಷ ಸಾಧನೆ ಮಾಡುವ ಮೂಲಕ ರಾಷ್ಟ್ರ ಮನ್ನಣೆಗೆ ಪಾತ್ರವಾಗಿದೆ. ಗದಗ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಕನರ್ಾಟಕ ರಾಜ್ಯದ ಕಾನೂನು ಸೇವೆಗಳ ಪ್ರಾಧಿಕಾರದಿಂದ 2017-18ನೇ ಸಾಲಿನಲ್ಲಿ ರಾಜ್ಯದಲ್ಲಿ ಅತ್ಯುತ್ತಮ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಎಂದು ಗುರುತಿಸಲ್ಪಟ್ಟಿದ್ದು ಅಭಿನಂದನೀಯ ಎಂದ ಸಚಿವರು ಗದಗ ಜಿಲ್ಲೆಯಲ್ಲಿ ರಾಜ್ಯ ಸಕರ್ಾರವು ಜನರ ಹಿತಕ್ಕಾಗಿ ಜಾರಿಗೊಳಿಸಿರುವ ಅಭಿವೃದ್ಧಿ ಯೋಜನೆಗಳ ಕುರಿತು ಮಾಹಿತಿ ನೀಡಿದರು.      

ಶಿಕ್ಷಣ: ಅಕ್ಷರ ದಾಸೋಹ ಕಾರ್ಯಕ್ರಮದಡಿ ಜಿಲ್ಲೆಯ ಸಕರ್ಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳ ದಾಖಲಾತಿ ಸಂಖ್ಯೆ 133354 ಸರಾಸರಿ 131189 ಮಕ್ಕಳು ಬಿಸಿಯೂಟ ಪಡೆಯುತ್ತಿದ್ದಾರೆ. ಕ್ಷೀರಭಾಗ್ಯ ಯೋಜನೆಯಡಿಯಲ್ಲಿ ಸರಾಸರಿ 131189 ಮಕ್ಕಳು ವಾರದ 5 ದಿನ ಬಿಸಿಹಾಲು ಸೇವಿಸುತ್ತಿದ್ದು ಮಕ್ಕಳ ಆರೋಗ್ಯ ವೃದ್ದಿಯಲ್ಲಿ ಚೈತನ್ಯ ಹೆಚ್ಚಿಸುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ.  ಗಜೇಂದ್ರಗಡ, ಮುಂಡರಗಿ ಹಾಗೂ ಲಕ್ಷ್ಮೇಶ್ವರಗಳಲ್ಲಿ 3ಕೋಟಿ ರೂ ವೆಚ್ಚದಲ್ಲಿ ಸಕರ್ಾರಿ ಪ.ಪೂ.ಕಾಲೇಜು ಕಟ್ಟಡಗಳ ನಿಮರ್ಾಣ ಪ್ರಗತಿಯಲ್ಲಿದ್ದು 2018-19ರ ಸಾಲಿನಲ್ಲಿ ವಿಶೇಷ ಪ್ಯಾಕೇಜ್ ಯೋಜನೆಯಡಿ ನರಗುಂದದ ಬನಹಟ್ಟಿಯಲ್ಲಿ ರೂ.1.90 ಕೋಟಿ, ಲಕ್ಷ್ಮೇಶ್ವರದ ಶಿಗ್ಲಿಯಲ್ಲಿ ರೂ.1 ಕೋಟಿ ರೋಣ ತಾಲೂಕಿನ ನರೇಗಲ್ಲ್ಲದಲ್ಲಿ  ರೂ.55.00 ಲಕ್ಷ ವೆಚ್ಚದಲ್ಲಿ ಸಕರ್ಾರಿ ಪ.ಪೂ.ಕಾಲೇಜು ಕಟ್ಟಡ ನಿಮರ್ಾಣಕ್ಕೆ ಕ್ರಮ ಜರುಗಿಸಲಾಗುತ್ತಿದೆ. ವಿದ್ಯಾಸಿರಿ ಯೋಜನೆಯಡಿ 2018-19 ನೇ ಸಾಲಿನಲ್ಲಿ ಒಟ್ಟು 185 ವಿದ್ಯಾಥರ್ಿಗಳಿಗೆ ಒಟ್ಟು 27.75 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. 

     ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯ 21339 ಅಂತ್ಯೋದಯ ಪಡಿತರ ಚೀಟಿದಾರರಿಗೆ ಹಾಗೂ 226308 ಬಿಪಿಎಲ್ ಕಾಡರ್್ದಾರರಿಗೆ ಉಚಿತವಾಗಿ ಆಹಾರಧಾನ್ಯ ವಿತರಿಸಲಾಗುತ್ತಿದೆ. ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯಡಿ 3155 ಫಲಾನುಭವಿಗಳಿಗೆ ಅನಿಲ ಸಂಪರ್ಕ ಸೌಲಭ್ಯ ನೀಡಲಾಗಿದೆ. ಗದುಗಿನಲ್ಲಿ ನಿಮರ್ಾಣಗೊಳ್ಳುತ್ತಿರುವ ರಂಗಮಂದಿರವು ಫೆಬ್ರುವರಿಯಲ್ಲಿ ಪೂರ್ಣಗೊಳ್ಳಲಿದೆ. ಗಜೇಂದ್ರಗಡ-ನರೇಗಲ್ ಪಟ್ಟಣ ಹಾಗೂ ಮಾರ್ಗ ಮಧ್ಯದಲ್ಲಿ ಬರುವ 7 ಹಳ್ಳಿಗಳಿಗೆ ಮಲಪ್ರಭಾ ಬಲದಂಡೆ ಕಾಲುವೆಯಿಂದ ಕುಡಿಯುವ ನೀರು ಸರಬರಾಜು ಯೋಜನೆಗೆ ಸಕರ್ಾರದಿಂದ ಪರಿಷ್ಕೃತ ಅಂದಾಜುಪಟ್ಟಿ 69ಕೋಟಿರೂ. ಗಳಿಗೆ ಅನುಮೋದನೆ ದೊರೆತಿದೆ.  ಡಿಬಿಓಟಿ ಯೋಜನೆಯಡಿ ಗದಗ ಜಿಲ್ಲೆಯ ಎಲ್ಲಾ ತಾಲೂಕುಗಳ 332 ಗ್ರಾಮಗಳಿಗೆ ಮತ್ತು ಮುಂಡರಗಿ ಪಟ್ಟಣಕ್ಕೆ ಕುಡಿಯುವ ನೀರನ್ನು ಒದಗಿಸಲಾಗುತ್ತಿದ್ದು ಈವರೆಗೆ ಸದರಿ ಕಾಮಗಾರಿಯಲ್ಲಿ ರೂ.916.50 ಕೋಟಿಗಳ ವೆಚ್ಚ ಮಾಡಲಾಗಿರುತ್ತದೆ.       ರಾಜ್ಯ ಸಕರ್ಾರವು ನಾಡಿನ ನೆಲ, ಜಲ,ಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ಮತ್ತು  ರೈತರ ಒಳಿತಿಗಾಗಿ ಕೃಷಿಸಾಲ ಮನ್ನಾ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ರಾಜ್ಯದ ಹಾಗೂ ಗದಗ ಜಿಲ್ಲೆಯ ಅಭಿವೃದ್ಧಿಗೆ ಮಹಾಜನತೆಯ ಸಹಾಯ, ಸಹಕಾರ ಅವಶ್ಯವಾಗಿದೆ ಎಂದು ಸಚಿವ ಆರ್.ಬಿ.ತಿಮ್ಮಾಪುರ್ ನುಡಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳು: ಸಿ.ಡಿ.ಓ ಜೈನ್ ಪ್ರೌಢ ಶಾಲೆ, ಸರಕಾರಿ ಉದರ್ು ಪೌಢ ಶಾಲೆ, ಹೆಚ್.ಸಿ.ಇ.ಎಸ್. ಪ್ರಾ ಶಾಲೆ,ಬೆಟಗೇರಿ, ಬ್ರೈಟ್ ಹಾರಿಝಾನ್ ಶಾಲೆಯ ವಿಧ್ಯಾಥರ್ಿಗಳು ಪ್ರಸ್ತುಪಡಿಸಿದ ರಾಷ್ಟ್ರೀಯ ಭಾವೈಕ್ಯತೆ ಸಾರುವ ಹಾಗೂ ದೇಶ ಭಕ್ತಿ ಗೀತೆಗಳ ನೃತ್ಯ ರೂಪಕಗಳನ್ನು ಪ್ರಸ್ತುತಪಡಿಸಿದರು. ರೋಟರಿ ಪ್ರೌಢ ಶಾಲೆಯ ವಿದ್ಯಾಥರ್ಿಗಳು ದೇಶದ ಸ್ವಾತಂತ್ರ್ಯಕ್ಕಿಂತ ಮುಂಚೆ ದೇಶದಲ್ಲಿದ್ದ ಅಸ್ಪೃಶ್ಯತೆಯನ್ನು ತೆಗೆದು ಹಾಕುವ ನಿಟ್ಟಿನಲ್ಲಿ ಡಾ. ಅಂಬೇಡ್ಕರ ಅವರ ವಿಚಾರಧಾರೆ ಬಿಂಬಿಸುವ.

ಉಪಸ್ಥಿತಿ: ಗದಗ ಜಿ.ಪಂ. ಎಸ್.ಪಿ. ಬಳಿಗಾರ, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ, ಗದಗ-ಬೆಟಗೇರಿ ನಗರಸಭೆಯ ಅಧ್ಯಕ್ಷ ಸುರೇಶ ಕಟ್ಟಿಮಜಿ.ಪಂ. ಉಪಾಧ್ಯಕ್ಷೆ ಶಕುಂತಲಾ. ಆರ್.ಮೂಲಿಮನಿ, ನಗರಸಭೆ ಉಪಾಧ್ಯಕ್ಷ ಪ್ರಕಾಶ.ಆರ್.ಬಾಕಳೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಭು ಬುರಬುರೆ, ಗದಗ ತಾ.ಪಂ. ಅಧ್ಯಕ್ಷ ಮೋಹನ. ಡಿ. ದುರಗಣ್ಣವರ, ಉಪಾಧ್ಯಕ್ಷೆ ಸುಜಾತ.ಬ.ಖಂಡು, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ಕ್ಷೀರಸಾಗರ ಸೇರಿದಂತೆ ಮಾಜಿ ಶಾಸಕರಾದ ಡಿ.ಆರ.ಪಾಟೀಲ, ಜಿ.ಎಸ್.ಪಾಟೀಲ, ಬಿ.ಆರ್.ಯಾವಗಲ್, ಸ್ವಾತಂತ್ರ್ಯ ಹೋರಾಟಗಾರರು, ಜನಪ್ರತಿನಿಧಿಗಳು, ಗಣ್ಯರು, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿ ಸಿಬ್ಬಂದಿಗಳು, ಸಾರ್ವಜನಿಕರು, ಸಾವಿರಾರು ಸಂಖ್ಯೆಯಲ್ಲಿ ವಿವಿಧ ಶಾಲಾ ಕಾಲೇಜು ವಿದ್ಯಾಥರ್ಿಗಳು ಗಣರಾಜ್ಯೋತ್ಸವದಲ್ಲಿ ಸಂತೋಷ ಸಂಭ್ರಮಗಳಿಂದ  ಭಾಗವಹಿಸಿದ್ದರು. ಪಂಡಿತ ಪುಟ್ಟರಾಜು ಗವಾಯಿಗಳ ಸಂಗೀತ ಮಹಾ ವಿದ್ಯಾಲಯದ ವಿಧ್ಯಾಥರ್ಿಗಳ ತಂಡವು ನಾಡಗೀತೆ ಪ್ರಸ್ತುತಿಸಿದರು. ದತ್ತ ಪಸನ್ನ ಪಾಟೀಲ, ಕು. ಮಂಜರಿ ಹೊಂಬಾಳಿ ಕಾರ್ಯಕ್ರಮ ನಿರೂಪಿಸಿದರು.