ಭಾರತದ ಸಂವಿಧಾನವು ಶ್ರೇಷ್ಠವಾದದ್ದು: ಅಭಿದ್ ಗದ್ಯಾಳ

ಭಾರತದ ಸಂವಿಧಾನವು ಶ್ರೇಷ್ಠವಾದದ್ದು: ಅಭಿದ್ ಗದ್ಯಾಳ  Constitution of India is great: Abhid Gadyala


ಬಳ್ಳಾರಿ 27:  ಭಾರತವು ಇಂದು ಜಾಗತಿಕ ಮಟ್ಟದಲ್ಲಿ ಗಮನಾರ್ಹ ಸ್ಥಾನ ಪಡೆದಿದ್ದು ಸಶಕ್ತವಾದ ಸಂವಿಧಾನ ಮೂಲಕ ಎಂದು ಉಡುಪಿಯ ಅಪರ ಜಿಲ್ಲಾಧಿಕಾರಿ ಅಭಿದ್ ಗದ್ಯಾಳ ಹೇಳಿದರು.ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ. ಬಿ ಆರ್ ಅಂಬೇಡ್ಕರ್ ಸಭಾಭವನದಲ್ಲಿ ಬುಧವಾರದಂದು ಆಯೋಜಿಸಿದ್ದ ರಾಷ್ಟ್ರೀಯ ಸಂವಿಧಾನ ದಿನಾಚರಣೆ ಪ್ರಯುಕ್ತ “ಪ್ರಸ್ತುತ ಸಂವಿಧಾನ: 75 ವರ್ಷಗಳ ಪ್ರಜಾಪ್ರಭುತ್ವ, ಘನತೆ ಮತ್ತು ಅಭಿವೃದ್ಧಿ” ಭಾಷಣಕಾರರಾಗಿ ವರ್ಚುವಲ್ ಮುಖಾಂತರ ಭಾಗವಹಿಸಿ ಅವರು ಮಾತನಾಡಿದರು. 

ನಮ್ಮ ದೇಶದ ನೆರೆಯ ರಾಷ್ಟ್ರಗಳ ಸಂವಿಧಾನವು ಅಳಿವಿನಂಚಿನಲ್ಲಿವೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸ್ವಾತಂತ್ರಗೊಳ್ಳುತ್ತಿರುವ ದೇಶಗಳು ಭಾರತ ಸಂವಿಧಾನವನ್ನು ಬಳಸಿಕೊಳ್ಳುತ್ತಿವೆ. ಇತರ ದೇಶಗಳ ಆಡಳಿತ ದುರಸ್ಥಿಗೊಳಪಟ್ಟಾಗ ಕೂಡಾ ಭಾರತ ಸಂವಿಧಾನವನ್ನು ಬಳಸಿಕೊಳ್ಳುತ್ತಿವೆ. ಭಾರತ ಸಂವಿಧಾನವು ಜೀವಂತ ಸಂವಿಧಾನವಾಗಿದ್ದು. ನ್ಯಾಯ, ಸಮಾನತೆ, ಸ್ವಾತಂತ್ರತೆ ಹಾಗೂ ಭಾತೃತ್ವ ಕುರಿತು ತಿಳಿಸುತ್ತದೆ. ಪ್ರತಿಯೊಬ್ಬ ನಾಗರಿಕನು ತಮ್ಮ ಹಕ್ಕುಗಳನ್ನು ಜವಾಬ್ದಾರಿಯುತವಾಗಿ ಚಲಾಯಿಸುವ ಮೂಲಕ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಬೇಕು ಎಂದು ಹೇಳಿದರು.ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ. ಜಯಲಕ್ಷ್ಮಿ ನಾಯಕ ಅವರು ಮಾತನಾಡಿ, ಇಂದು ಸಂವಿಧಾನ ದಿನದಂದು ಭಾರತದ ಪ್ರತಿ ಮಹಿಳೆಯರು ಸಂತೋಷಪಡುವ ದಿನವಾಗಿದೆ. ಸಂವಿಧಾನವನ್ನು ನಮಗೆ ನಾವೇ ಅರ​‍್ಿಸಿಕೊಂಡಿರುವುದರಿಂದ ಘನತೆಯುತವಾದ ಜೀವನ ನಡೆಸಲು ಸಾಧ್ಯವಾಗಿದೆ. ಮಹಿಳೆಯರನ್ನು ಹಲವಾರು ಸಂಪ್ರದಾಯಗಳ ಮೂಲಕ ಹಕ್ಕು, ಸ್ವಾತಂತ್ರವಿರಲಿಲ್ಲ. ಅಂಬೇಡ್ಕರ ಅವರು ಸಂವಿಧಾನದ ಮೂಲಕ ಮಹಿಳೆಯರಿಗೆ ಹಕ್ಕುಗಳನ್ನು ಕೊಟ್ಟಿದ್ದಾರೆ. ಸಂವಿಧಾನವು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸಲ್ಲುವಂತಹದ್ದಾಗಿದೆ ಎಂದರು.ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ. ಎನ್ ಎಮ್ ಸಾಲಿ ಮಾತನಾಡಿ, ಸಾರ್ವಭೌಮತ್ವ ಎಂಬುದು ನಮ್ಮ ದೇಶದ ಆಸ್ತಿಯಾಗಿದ್ದು, ಸಮಾಜವಾದ, ಜಾತ್ಯಾತೀತತೆ, ಪ್ರಜಾಸತ್ತತೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಏಕತೆ, ಸಮಗ್ರತೆ ಎಂಬುವವು ಸಂವಿಧಾನದ ಮೂಲ ಧ್ಯೇಯವಾಗಿವೆ ಎಂದರು.  

ವಿವಿಯ ಕುಲಪತಿಗಳಾದ ಪ್ರೊ. ಎಂ ಮುನಿರಾಜು ವರ್ಚುವಲ್ ಮುಖಾಂತರ ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ಮಾತನಾಡಿ, ವಿಶ್ವದ ಎಲ್ಲ ದೇಶಗಳ ಸಂವಿಧಾನಗಳ ಪೈಕಿ ಭಾರತದ ಸಂವಿಧಾನವು ಶ್ರೇಷ್ಠವಾಗಿದ್ದು, ವಿವಿಧತೆ ಮತ್ತು ಸಾಂಸ್ಕೃತಿಕ ವೈಭವ ಹೊಂದಿರುವ ದೇಶದಲ್ಲಿ ಎಲ್ಲವೂ ಸಂವಿಧಾನದ ಮೇಲೆ ಅವಲಂಬಿತವಾಗಿದೆ. ಸಂವಿಧಾನದ ಅರಿವು ಮೂಡಿಸುವ ಕಾರ್ಯ ದೇಶದೆಲ್ಲೆಡೆ ನಡೆಯಬೇಕಿದೆ ಎಂದು ಮಾತನಾಡಿದರು.ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ. ಜಯಲಕ್ಷ್ಮಿ ನಾಯಕ ಅವರು, ಸಂವಿಧಾನದ ಪ್ರತಿಜ್ಞಾವಿಧಿ ಬೋಧಿಸಿದರು. 

ವಿಶ್ವವಿದ್ಯಾಲಯದ ಪ್ರಭಾರ ಕುಲಸಚಿವರಾದ ಪ್ರೊ. ಜಿ ಪಿ ದಿನೇಶ್, ಡಾ ಬಿ ಆರ್ ಅಂಬೇಡ್ಕರ್ ಅಧ್ಯಯನ ಪೀಠದ ನಿರ್ದೇಶಕರಾದ ಡಾ. ಗೌರಿ ಮಾನಸ ವೇದಿಕೆಯಲ್ಲಿದ್ದರು. ಈ ಸಂದರ್ಭದಲ್ಲಿ ವಿವಿಯ ಕುಲಸಚಿವರಾಗಿ ಸೇವೆ ಸಲ್ಲಿಸಿ ವರ್ಗಾವಣೆಯಾದ ನಾಗರಾಜು ಸಿ ಅವರನ್ನು ಗೌರವಿಸಿ ಬೀಳ್ಕೊಡಲಾಯಿತು.ಕಾರ್ಯಕ್ರಮದ ಸಂಯೋಜಕರಾದ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ ವೀರ​‍್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು.ವಿವಿಧ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರುಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಇದ್ದರು.