ಶರಹಟ್ಟಿ 15: ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ಸಮಾಜದಲ್ಲಿ ಸಮಾನತೆ, ನ್ಯಾಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳು ಬೇರೂರಿವೆ. ಇದು ಭಾರತ ಕಂಡ ಅತ್ತಿಯುತ್ತಮ ಸಾಧನೆಗಳಲ್ಲಿ ಒಂದು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಪಟ್ಟಣದ ಜ. ಫಕ್ಕಿರೇಶ ಶ್ರೀಮಠದಿಂದ ಡಾ. ಅಂಬೇಡ್ಕರ್ ಹಾಗೂ ಡಾ. ಜಗಜೀವನರಾಮ್ ಅವರ ಭಾವಚಿತ್ರಗಳ ಮೆರವಣಿಗೆಯು ವಿವಿಧ ಬಡಾವಣೆಗಳ ಮೂಲಕ ಭವ್ಯವಾಗಿ ನಡೆಸಲಾಯಿತು. ನಂತರ ಅಂಬೇಡ್ಕರ್ ವೃತ್ತ ಹಾಗೂ ನೆಹರು ವೃತ್ತದಲ್ಲಿನ ಅವರ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸಲ್ಲಿಸಲಾಯಿತು.
ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪಟ್ಟಣ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಶಿರಹಟ್ಟಿ ಇವರ ಸಂಯುಕ್ತ ಆಶ್ರಯದಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಹಾಗೂ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಮಂತ್ರಿ ಡಾ. ಬಾಬು ಜಗಜೀವನರಾಮ್ ಅವರ 118ನೇ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿ ಅವರು
ಸಂವಿಧಾನದಲ್ಲಿ ಬರೆದ ಪ್ರತಿ ವಾಕ್ಯ, ಓರ್ವ ಸಾಮಾನ್ಯನ ಬದುಕನ್ನು ಉತ್ತಮಗೊಳಿಸುವ ಕನಸು ಹೊಂದಿದೆ. ದೇಶದ ಪ್ರತಿಯೊಬ್ಬನಿಗೂ ಸಮಾನ ಹಕ್ಕು ನೀಡಿದವರು ಅವರು.ವರ್ಗ, ಜಾತಿ, ಧರ್ಮವಿಲ್ಲದೆ ಮಾನವೀಯತೆ ಮೊದಲು ಎಂದು ಬೋಧಿಸಿದವರು.ಅವರ ಕನಸಿನ ಸಮಾಜದ ನಿರ್ಮಾಣ ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹನುಮಂತಪ್ಪ ದೊಡ್ಡಮನಿ ಅವರು, ಡಾ. ಬಿ.ಆರ್. ಅಂಬೇಡ್ಕರ್ ರವರ ಭಾರತೀಯ ಸಂವಿಧಾನದ ಶಿಲ್ಪಿ, ದಲಿತ ಮತ್ತು ಹಿಂದುಳಿದ ವರ್ಗದ ಹಕ್ಕುಗಳ ಪರಿಕಾರರಾಗಿದ್ದ ಮಹಾನ್ ನಾಯಕರು. ಮತ್ತು ಡಾ. ಬಾಬು ಜಗಜೀವನರಾಮ್ ರವರ ಹಸಿರು ಕ್ರಾಂತಿಯ ಹರಿಕಾರ, ಭಾರತದ ಮಾಜಿ ಉಪ ಪ್ರಧಾನಮಂತ್ರಿ, ದೇಶದ ಕೃಷಿ ಅಭಿವೃದ್ಧಿಗೆ ಮಹತ್ವಪೂರ್ಣ ಕೊಡುಗೆ ನೀಡಿದ ನಾಯಕರು ಎಂದು ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತ ದೊಡ್ಡಮನಿ ಮಾತನಾಡಿದ ಅವರು, "ಡಾ. ಅಂಬೇಡ್ಕರ್ ಅವರು ಸಂವಿಧಾನವನ್ನು ರೂಪಿಸದೇ ಇದ್ದರೆ, ದೇಶ ಅರಾಜಕತೆಗೆ ತುತ್ತಾಗುತ್ತಿತ್ತು. ಅವರ ದೂರದೃಷ್ಟಿಯೇ ದಲಿತರು ಮತ್ತು ಹಿಂದುಳಿದವರಿಗೆ ನ್ಯಾಯವನ್ನು ನೀಡಿದೆ" ಎಂದು ಅಭಿಪ್ರಾಯಪಟ್ಟರು.
ತಹಶೀಲ್ದಾರ ಅನೀಲ ಬಡಿಗೇರ, ಪಟ್ಟಣ ಪಂಚಾಯತ್ ಅಧ್ಯಕ್ಷೆ ದೇವಕ್ಕ ಗುಡಿಮನಿ, ಹುಮಾಯೂನ್ ಮಾಗಡಿ, ರಾಮಣ್ಣ ದೊಡ್ಡಮನಿ, ಸಿಪಿಐ ನಾಗರಾಜ ಮಾಡ್ಡಳ್ಳಿ, ಡಿ ಕೆ. ಹೊನ್ನಪ್ಪನವರ, ಜಾನು ಲಮಾಣಿ, ಸಮಾಜ ಕಲ್ಯಾಣ ಅಧಿಕಾರಿ ಗೋಪಾಲ ಲಮಾಣಿ, ಹೊನ್ನಪ್ಪ ಶಿರಹಟ್ಟಿ, ತಿಮ್ಮರಡ್ಡಿ ಮರಡ್ಡಿ, ಮೋಹನ್ ಗುತ್ತೆಮ್ಮನವರ, ನಾಗರಾಜ ಲಕ್ಕುಂಡಿ, ಎಂ.ಕೆ ಲಮಾಣಿ ,ಜಾನು ಲಮಾಣಿ, ಫಕ್ಕಿರೇಶ ರಟ್ಟಿಹಳ್ಳಿ, ಸಂದೀಪ್ ಕಪ್ಪತ್ತನವರ,ನಂದಾ ಪಲ್ಲೇದ್,ತಾಲೂಕು ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು ಸಾರ್ವಜನಿಕರು ಹಾಗೂ ಇತರರಿದ್ದರು.
ಶಿರಹಟ್ಟಿ ತಹಶಿಲ್ದಾರರ ಕಚೇರಿ ಆವರಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಹಾಗೂ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಮಂತ್ರಿ ಡಾ. ಬಾಬು ಜಗಜೀವನರಾಮ್ ಅವರ 118ನೇ ಜಯಂತಿಯನ್ನು ಶಾಸಕ ಡಾ.ಚಂದ್ರು ಲಮಾಣಿ ಉದ್ಘಾಟಿಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತ ದೊಡ್ಡಮನಿ, ತಹಶೀಲ್ದಾರ ಅನೀಲ ಬಡಿಗೇರ, ಪಟ್ಟಣ ಪಂಚಾಯತ್ ಅಧ್ಯಕ್ಷೆ ದೇವಕ್ಕ ಗುಡಿಮನಿ, ಸಿಪಿಐ ನಾಗರಾಜ ಮಾಡ್ಡಳ್ಳಿ, ತಾಲೂಕು ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು ಸಾರ್ವಜನಿಕರು ಹಾಗೂ ಇತರರಿದ್ದರು.