ಸಂವಿಧಾನ ಸಮರ್ಪಣಾ ದಿನಾಚಾರಣೆ

ಗದಗ 29: ನಮ್ಮ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸಂವಿಧಾನ ದಿನಾಚಾರಣೆಯನ್ನು ದಿ. 26ರಂದು ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಎಸ್.ಎ.ಪದವಿ ಪೂರ್ವ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯರಾದ ಬಿ.ಎಫ್.ಚೇಗರಡ್ಡಿ ಆಗಮಿಸಿದ್ದರು.ಪ್ರಾಚಾರ್ಯರಾದ .ಡಿ.ಜಿ.ಜೋಗಣ್ಣವರ ಇವರು ಅಧ್ಯಕ್ಷತೆಯನ್ನುವಹಿಸಿದ್ದರು. ಸಾಂಸ್ಕೃತಿಕ ಚಟುವಟಿಕೆಗಳ ಸಂಯೋಜಕರಾದ ಎ.ಆಯ್.ಹಿಂಡಿಯವರು ಪ್ರತಿಜ್ಞಾವಿಧಿ ಬೋಧಿಸಿದರು. ಅತಿಥಿಗಳಾಗಿ ಆಗಮಿಸಿದ ಬಿ.ಎಫ್.ಚೇಗರಡ್ಡಿ ಇವರು ಮಾತನಾಡುತ್ತ ಸಂವಿಧಾನ ರಚನೆಯ ಹಿನ್ನಲೆ ವಿಧಗಳು ಅದರ ಪ್ರಾಮುಖ್ಯತೆ ಹಾಗೂ ಅದರಲ್ಲಿಯ ಬದಲಾವಣೆಯನ್ನು ಕುರಿತು ವಿವರಿಸಿದರು. ಅಧ್ಯಕ್ಷತೆಯನ್ನುವಹಿಸಿದ ಪ್ರಾಚಾರ್ಯರಾದ ಡಿ.ಜಿ.ಜೋಗಣ್ಣವರ ಇವರು ಮಾತನಾಡುತ್ತ ಸಂವಿಧಾನದ ರಚನೆಯಲ್ಲಿ ಅಂಬೇಡ್ಕರ ಅವರ ಪಾತ್ರ ಸಂವಿಧಾನದಲ್ಲಾದ ತಿದ್ದುಪಡಿಯನ್ನು ಕುರಿತು ಹೇಳಿದರು. ಕಾರ್ಯಕ್ರಮದ ಮೋದಲಿಗೆ ವಿದ್ಯಾರ್ಥಿನಿಯಾದ ಕುಮಾರಿ.ದುರ್ಗಾ  ದೊಡ್ಡಮನಿ ಪ್ರಾರ್ಥನೆಯನ್ನು ಗೈದರು. ಎ.ಆಯ್.ಹಿಂಡಿಯವರು ಸರ್ವರನ್ನು ಸ್ವಾಗತಿಸಿದರು. ಎಸ್.ಎಸ್.ಪವಾರ ಇವರು ಕಾರ್ಯಕ್ರಮ ನಿರೂಪಿಸಿದರು.