ಸಂವಿಧಾನ ದಿನಾಚರಣೆ : ಸ್ಪರ್ಧಾ ವಿಜೇತರು
Constitution Day Celebration: Competition Winners
ಕಾರವಾರ, ನ.26 : ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅಂತಾರಾಷಿೊಥಯ ಸಂವಿಧಾನ ದಿನಾಚರಣೆ ಪ್ರಯುಕ್ತ ಜಿಲ್ಲಾ ಮಟ್ಟದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೇಯನ್ನು ಆಯೋಜಿಸಲಾಗಿದ್ದು, ಸ್ಪರ್ಧೇಯಲ್ಲಿ ವಿಜೇತರಿಗೆ ಬುಧುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಲಾಯಿತು.
ವಿಜೇತರ ವಿವರ: ಚಿತ್ರಕಲೆ 6 ರಿಂದ 8 ನೇ ತರಗತಿ ವಿಭಾಗದಲ್ಲಿ ಲಾಯಸ್ಸ್ ಇಂಗ್ಲೀಷ್ ಮಾಧ್ಯಮ ಪ್ರೌಢ ಶಾಲೆಯ ತೃಪ್ತಿ ಪಿ ಗೌಳಿ (ಪ್ರಥಮ ಸ್ಥಾನ), ಸಿದ್ಧಾಪುರದ ಇಟಲ ಪ್ಲವರ್ ಸಾಲೆಯ ಯಶಸ್ವಿನಿ ಆರ್ ಹೇಂದ್ರೆ (ದ್ವಿತೀಯ ಸ್ಥಾನ), ಭಟ್ಕಳ ವಿದ್ಯಾಭಾರತಿ ಪ್ರೌಢ ಶಾಲೆಯ ಸಮರ್ಥ ವಿ. ಮಾನಕಾಮೆ (ತೃತೀಯ ಸ್ಥಾನ) ಪಡೆದಿದ್ದಾರೆ. 9 ರಿಂದ ಪಿಯುಸಿ ವಿಭಾಗದಲ್ಲಿ ಶಿರಸಿ ಎಂ.ಇ.ಎಸ್ ಪದವಿ ಪೂರ್ವ ಕಾಲೇಜಿನ ಬಿಂದು ಜೆ. ಜೈವಂತ (ಪ್ರಥಮ ಸ್ಥಾನ), ಕುಮಟಾ ಬಾಳಿಗಾ ಪದವಿ ಪೂರ್ವ ಕಾಲೇಜಿನ ಭರತ ಹೃಷಿಕೇಶ (ದ್ವಿತೀಯ ಸ್ಥಾನ), ಸೆಂಟ್ ಮೈಕಲ್ ಪ್ರೌಢ ಶಾಲೆಯ ಡೇಲ್ಸಿಯಾ ಸಿ. ಫರ್ನಾಂಡಿಸ್ (ತೃತೀಯ ಸ್ಥಾನ) ಪಡೆದಿದ್ದಾರೆ.
ಕಾಲೇಜು ವಿದ್ಯಾರ್ಥಿಗಳಿಗೆ ಏರಿ್ಡಸಲಾದ ಛಾಯಾಗ್ರಹಣ ಸ್ಪರ್ಧೇಯಲ್ಲಿ ಶಿರಿಸಿಯ ಎಂ.ಇ.ಎಸ್ ಕಾನೂನು ಮಹಾವಿದ್ಯಾಲಯದ ಚಂದನ್ ಕುಲ್ಕರ್ಣಿ (ಪ್ರಥಮ ಸ್ಥಾನ), ಅಂಕೋಲಾದ ಕೆ.ಎಲ್.ಇ ಸೋಸೈಟಿಯ ಶೇಷಗಿರಿ ಪಿಕಳೆ ಶಿಕ್ಷಣ ಮಂಹಾವಿದ್ಯಾಲಯದ ಸಾಗರ ನಾಯ್ಕ (ದ್ವಿತೀಯ ಸ್ಥಾನ), ಕುಮಟಾ ಸರ್ಕಾರಿ ಪ್ರಥಮ ದರ್ಜೇ ಕಾಲೇಜಿನ ಸಹಾನ ವಿ ಪಟಗಾರ, (ತೃತೀಯ ಸ್ಥಾನ) ಪಡೆದು ಕೊಂಡಿದ್ಧಾರೆ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಿದ್ಯಾರ್ಥಿಗಳಿಗೆ ಭಾಷಣ ಸ್ಫರ್ಧೇ ಏರಿ್ಡಸಲಾಗಿದ್ದು, ಅದರಲ್ಲಿ ಸಿದ್ದಾಪುರದ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ ಮದನಕಳ ಜೈತ್ರ ಎಸ್ ಹಿರೇಮಠ (ಪ್ರಥಮ ಸ್ಥಾನ), ಮುಂಡಗೋಡ ಇಂದಿರಾ ಗಾಂಧಿ ವಸತಿ ಶಾಲೆ ಪಾಳಾ ಕೀರ್ತಿ ಹಂಚಿನಮನಿ (ದ್ವಿತೀಯ ಸ್ಥಾನ), ಕಾರವಾರದ ಡಾ. ಬಿ.ಆರ್ ಆಂಬೇಡ್ಕರ್ ವಸತಿ ಶಾಲೆ ಅಮದಳ್ಳಿ ಸ್ವಪ್ನ ಶೇಟ್ (ತೃತೀಯ ಸ್ಥಾನ) ಪಡೆದುಕೊಂಡಿದ್ದಾರೆ.
ರಾಜ್ಯ ಮಟ್ಟ ಸ್ಪರ್ದೇಯಲ್ಲಿ ಶಿರಸಿಯ ಎಂಇಎಸ್ ಕಾಲೇಜಿನ ವಿದ್ಯಾರ್ಥಿನಿ ಬಿಂದು ಜೆ. ಜೈವಂತ ಚಿತ್ರಕಲೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಹಾಗೂ ಸಿದ್ದಾಪುರದ ಇಂದಿರಾ ಗಾಂಧೀ ವಸತಿ ಶಾಲೆಯ ಚೈತ್ರಾ ಎಸ್ ಹಿರೇಮಠ ಭಾಷಣ ಸ್ಪರ್ಧೇಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 