ಶಿರಾ ತಾಲೂಕು ಕಳ್ಳಂಬೆಳ್ಳ ಠಾಣೆಯಿಂದ ಮನೆ ಮನೆ ಪೊಲೀಸ್ ಸಭೆ
Door-to-door police meeting from Kallambella police station in Shira taluk
ತುಮಕೂರು 19: ಶಿರಾ ತಾಲೂಕಿನ ಕಳ್ಳಂಬೆಳ್ಳ ಪೊಲೀಸ್ ಠಾಣಾ ವತಿಯಿಂದ ಚಿಕ್ಕನಹಳ್ಳಿ ಶ್ರೀ ಆಂಜನೇಯ ಸ್ವಾಮಿ ಸಮುದಾಯ ಭವನದಲ್ಲಿ ಮನೆ ಮನೆ ಪೊಲೀಸ್ ಸಮೂಹ ಮುಖ್ಯಸ್ಥರ ಸಭೆಯನ್ನು ಕರೆಯಲಾಗಿತ್ತು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಿರಾ ಗ್ರಾಮಾಂತರ ವೃತ್ತದ ವೃತ್ತ ನೀರೀಕ್ಷಕರಾದ ಶ್ರೀಯುತ ಡಿಜಿ ಶ್ರೀನಿವಾಸ್ ರವರು ಮಾತನಾಡಿ ಸಮುದಾಯ ಪೊಲೀಸ್ ವ್ಯವಸ್ಥೆಯನ್ನು ಬಲಗೊಳಿಸಲು ಈ ಮನೆ ಮನೆ ಪೊಲೀಸ್ ಪರಿಕಲ್ಪನೆಯು ಅತಿ ಹೆಚ್ಚು ಪರಿಣಾಮಕಾರಿಯಾಗಿದೆ.
ಸಭೆಯಲ್ಲಿ ಹಾಜರಿದ್ದ ಸಮೂಹ ಗಳ ಮುಖ್ಯಸ್ಥರಿಗೆ ಅಪರಾಧ ಮುಕ್ತ ಸಮಾಜದ ಬೆಳವಣಿಗೆಯಲ್ಲಿ ತಮ್ಮ ತಮ್ಮ ಪಾತ್ರಗಳನ್ನು ಹೇಗೆ ನಿರ್ವಹಿಸಬೇಕು ಎಂದು ವಿಸ್ತಾರವಾಗಿ ತಿಳಿಸಿದರು ಪೋಲಿಸ್ ಇಲಾಖೆ ಜಾರಿಗೊಳಿಸಿರುವ ಅನೇಕ ಕಾರ್ಯಕ್ರಮಗಳಲ್ಲಿ ಮನೆ ಮನೆ ಪೊಲೀಸ್ ಸಹ ಒಂದು ಜನಪ್ರಿಯ ಕಾರ್ಯಕ್ರಮವಾಗಿದೆ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಸಮರ್ಕವಾಗಿ ಕಾರ್ಯರೂಪಕ್ಕೆ ತರುವಲ್ಲಿ ಸಾರ್ವಜನಿಕರು ಶ್ರಮಿಸಬೇಕು ಹಾಗೂ ಸಮೂಹ ಮುಖ್ಯಸ್ಥರು ಪೊಲೀಸರೊಂದಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸರಗಳ್ಳತನ ಮನೆಗಳ್ಳತನ ಸಿಸಿಟಿವಿ ಅಳವಡಿಕೆಯ ಬಗ್ಗೆ ಜಾಗೃತಿ ಮೂಡಿಸುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಆಶಯ ನುಡಿಗಳ ನಾಡಿದ ಕಳಂಬೆಳ್ಳ ಪಿಎಸ್ಐ ರವರಾದ ಶ್ರೀ ಬೈರೇಗೌಡರವರು ಮಾತನಾಡಿ ಪ್ರಸ್ತುತ ದಿನಮಾನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಸಲಗಳ್ಳತನ ಮನೆಗಳತನ ಹಾಗೂ ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ನಡೆಯುತ್ತಿದ್ದು ಇದರ ಬಗ್ಗೆ ಸಂಮೋಹಗಳ ಮುಖ್ಯಸ್ಥರು ಜನರಲ್ಲಿ ಜಾಗೃತಿ ಮೂಡಿಸಬೇಕು ಮತ್ತು ವಾಹನ ಚಾಲನಾ ಪರವಾನಗಿ ಮತ್ತು ವಾಹನಗಳ ವಿಮೆಯ ಬಗ್ಗೆ ಹಾಗೂ ಹೆಲ್ಮೆಟ್ ಧಾರಣೆಯ ಬಗ್ಗೆ ಜಾಗೃತಿ ಮೂಡಿಸಬೇಕು .
ಹಾಗೂ ಸಮೂಹಗಳಲ್ಲಿ ಬರುವ ಸದಸ್ಯರಿಗೆ ಈ ಬಗ್ಗೆ ತಿಳಿ ಹೇಳಬೇಕು ಮೊಬೈಲ್ಗಳಲ್ಲಿ ಬರುವ ಆಪ್ ಗಳ ಬಗ್ಗೆ ಹಾಗೂ ಹೊಸಬರು ಗುಮಾನಿ ಆ ಸಾಮಿಗಳ ಬಗ್ಗೆ ಈಗ ವಹಿಸಬೇಕು ಅಪರಾಧ ಮುಕ್ತ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಬೀಟ್ ಪೊಲೀಸರಿಗೆ ಸರಿಯಾದ ಮಾಹಿತಿಯನ್ನು ನೀಡಬೇಕು ಹಾಗೂ ತಾವು ಸಹ ಶ್ರಮಿಸಬೇಕು ಎಂದು ಕರೆ ನೀಡಿದರು ಕಾರ್ಯಕ್ರಮದಲ್ಲಿ ಎ ಎಸ್ ಐ ಹುಚ್ಚೀರಣ್ಣ ರವರು ಪ್ರಾರ್ಥಿಸಿ ಮುಖಪೇದೆ ಶಾಹಿದ್ ರವರು ನಿರೂಪಿಸಿ ದರು ಇದೇ ಸಂದರ್ಭದಲ್ಲಿ ಠಾಣೆಯ ಸಿಬ್ಬಂದಿ ಯಾದ ಎ ಎಸ್ ಐ ನರಸಿಂಹಮೂರ್ತಿ ಎಸ್ ಐ ಶ್ರೀನಿವಾಸ್ ಹಾಗೂ ಠಾಣಾ ಸಿಬ್ಬಂದಿಗಳು ಹಾಜರಿದ್ದರು.
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್ 