ಸಂವಿಧಾನ ದಿನಾಚರಣೆ ಕಾರ್ಯಕ್ರಮ

ಲೋಕದರ್ಶನ ವರದಿ

ವಿಜಯಪುರ 29: ಭಾರತದ ಸಂವಿಧಾನವು ಪ್ರತಿಯೊಬ್ಬ ಪ್ರಜೆಯು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆಥರ್ಿಕವಾಗಿ ರಾಜಕೀಯವಾಗಿ ಅಭಿವೃದ್ಧಿ ಹೊಂದಲು ಅವಕಾಶ ನೀಡುತ್ತದೆ. ಸಂವಿಧಾನದ ಸರಿಯಾದ ಅನುಷ್ಠಾನದಿಂದ ಮಾತ್ರ ದೇಶದ ಸವರ್ಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ಸದಾನಂದ ನಾಯಕ್ ಹೇಳಿದರು. 

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವಿಜಯಪುರದ ಕಾರ್ಯದಶರ್ಿಯಾದ ಪ್ರಭಾಕರರಾವ್ ಅವರು ಸಂವಿಧಾನದ ಆಶಯವನ್ನು ಈಡೇರಿಸಲು ಅತ್ಯಾಚಾರತಡೆ ಕಾಯ್ದೆಗಳು ಬಾಲ್ಯ ವಿವಾಹ ನಿಷೇದಕಾಯ್ದೆ, ಮಾನಸಿಕ ಆರೋಗ್ಯಕಾಯ್ದೆ, ಮಹಿಳಾ ದೌರ್ಜನ್ಯ ತಡೆಕಾಯೆಯಂತಹ ಕಾಯ್ದೆಗಳನ್ನು ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಲು ತರಲಾಗಿದೆ ಎಂದು ಹೇಳಿದರು. ಅಲ್ಲದೇ ಪ್ರತಿಯೊಬ್ಬ ನಾಗರೀಕನು ಅವನಿಗೆ ಇರುವ ಹಕ್ಕುಗಳು ದೊರೆಯುವಂತಾಗಬೇಕು ಹಾಗೂ ಅದೇರೀತಿ ಪ್ರತಿಯೊಬ್ಬ ನಾಗರಿಕನು ತನ್ನ ಕರ್ತವ್ಯಗಳನ್ನು ಪಾಲಿಸಿದಾಗ ಸಂವಿಧಾನದ ಮೂಲ ಉದ್ದೇಶ ಈಡೇರಿಸಿದಂತೆ ಆಗುತ್ತದೆ ಎಂದು ತಿಳಿಸಿದರು.

ಉಪನ್ಯಾಸಕರಾಗಿ ಆಗಮಿಸಿದ್ದ ಸಿದ್ದೇಶ್ವರ ಕಾನೂನು ಮಹಾ ವಿದ್ಯಾಲಯದ ಪ್ರಾದ್ಯಾಪಕರಾದ ಬಿ. ಬಿ. ಯಾದವಾಡರವರು ನಮ್ಮ ಸಂವಿಧಾನದ ಇತಿಹಾಸವನ್ನು, ಸಂವಿಧಾನ ರಚನೆಯ ಪ್ರಕ್ರಿಯೆಯ ಕುರಿತು ವಿವರವಾಗಿ ಮನ ಮುಟ್ಟುವಂತೆ ತಿಳಿಸಿದರು. ಅಲ್ಲದೇ ಸಂವಿಧಾನದ ಪೀಠಿಕೆಯ ಮಹತ್ವ ಕುರಿತು ತಿಳಿಸಿದರು.

ಮತದಾನದ ಹಕ್ಕು, ಅಧಿಕಾರ ವಿಕೇಂದ್ರೀಕರಣ ಹೀಗೆ ಹಲವಾರು ವಿಚಾರಗಳು ಸಂವಿಧಾನದಲ್ಲಿವೆ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಗಳನ್ನು ನಾವು ದಿನನಿತ್ಯ ಸ್ಮರಿಸಬೇಕು, ದೇಶ ನಮಗಾಗಿ ಏನು ಕೊಟ್ಟಿದೆ ಎನ್ನುವ ಪೂರ್ವದಲ್ಲಿ ದೇಶಕ್ಕಾಗಿ ನಾವೇನು ಕೊಟ್ಟಿದ್ದೇವೆ ಎಂದು ಆತ್ಮಾವಲೋಕನಮಾಡಿಕೊಳ್ಳಬೇಕೆಂದು ಡಾ.ಬಿ ಎನ್ಎಮ್ ಇ ಟ್ರಸ್ಟ್ ಕಾರ್ಯದಶರ್ಿ ಎಸ್ಎಮ್ ಪಾಟೀಲ ಮಾತನಾಡಿದರು.

ಇದು ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ವಿರುವಕಾಯರ್ಾಂಗ, ನ್ಯಾಯಾಂಗ, ಶಾಸಕಾಂಗ ವಿರುವ ನಮ್ಮರಾಷ್ಟ್ರದ ಸಂವಿಧಾನ ಇದನ್ನು ರಚಿಸಲು ಮಹಾನ್ ದೇಶಪ್ರೇಮಿಗಳು ತಮ್ಮತ್ಯಾಗ ಬಲಿದಾನಗಳನ್ನು ಮಾಡಿದ್ದಾರೆ ಎಂದು ನ್ಯಾಯವಾದಿಗಳ ಸಂಘದ ಅದ್ಯಕ್ಷ ಬಿ ಎಮ್ ಜಿರಾಳೆ ಹೇಳಿದರು.

ನಮ್ಮ ಮೂಲಭೂತ ಹಕ್ಕುಗಳನ್ನು ಮತ್ತು ಕರ್ತವ್ಯಗಳನ್ನು ಅರಿತುಕೊಂಡು ಕಾನೂನು ಪರಿಪಾಲನೆ ಮಾಡಿಕೊಂಡು ಬಂದರೆ ನಮಗೆ ಕಾನೂನು ರಕ್ಷಣೆ ಮಾಡುತ್ತದೆ. ಜಗತ್ತಿನಲ್ಲಿಯಎಲ್ಲ ದೇಶಗಳ ಸಂವಿಧಾನಗಳಿಗಿಂತ ಭಾರತದ ಸಂವಿಧಾನಕ್ಕೆಉನ್ನತ ಸ್ಥಾನವಿದೆ,ಇಂತಹ ಮಹತ್ವದ ದಿನಾಚರಣೆಗಳ ಮಹತ್ವ ತಿಳಿಯಬೇಕಾಗಿದೆ ಮತ್ತು ಅವುಗಳನ್ನು ನಮ್ಮ ದಿನನಿತ್ಯದಜೀವನದಲ್ಲಿ ಅಳವಡಿಸಿಕೋಳ್ಳಬೇಕಾಗಿದೆ ಎಂದುಕಾರ್ಯಕ್ರಮದಅದ್ಯಕ್ಷತೆಯನ್ನು ವಹಿಸಿದ್ದ ಸಿದ್ದೇಶ್ವರ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಎಚ್ಎಸ್ ಸಲಗರ ಹೇಳಿದರು. 

ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರುಗಳಾದ ವೆಂಕಟೇಶ ಜೋಶಿ, ದೇವೇಂದ್ರಪ್ಪಾ ಬಿರಾದಾರ, ರಾಘವೇಂದ್ರಗೌಡ ಹಾಗೂ ಜಿಲ್ಲೆಯ ಎಲ್ಲ ವಿಭಾಗದ ಹಿರಿಯ ಮತ್ತು ಸಿವ್ಹಿಲ್ ನ್ಯಾಯಾಧೀಶರುಗಳು,ಕಾನೂನು ಮಹಾವಿದ್ಯಾಲಯದ ಉಪನ್ಯಾಸಕ ವೃಂದ ಮತ್ತು ಕಾನೂನು ವಿದ್ಯಾಥರ್ಿಗಳು, ಡಾ.ಬಿ ಎಮ್ ಇ ಟ್ರಸ್ಟ್ನಎಲ್ಲ ಪದಾಧಿಕಾರಿಗಳು, ಬಿ ಎ ಎಂ ಎಸ್ ವಿದ್ಯಾಥರ್ಿಗಳು, ಬಿಎಡ್ ಕಾಲೇಜು ಉಪನ್ಯಾಸಕರು ಮತ್ತು ವಿದ್ಯಾಥರ್ಿಗಳು ನಾಗೂರ ನಸರ್ಿಂಗ್ ಕಾಲೇಜಿನ ಸಿಬ್ಬಂಧಿ ಹಾಗೂ ವಿದ್ಯಾಥರ್ಿನಿಯರು ಪಾಲ್ಗೊಂಡಿದ್ದರು. ಬಾಬು ಸಜ್ಜನ ನಿರೂಪಿಸಿದರು. ಪಾಟೀಲ ಸ್ವಾಗತಿಸಿದರು. ಶ್ವೇತಾ ಪಾಟೀಲ ವಂದಿಸಿದರು.