ಸತತ ಪ್ರಯತ್ನವೇ ಸಾಧನೆಗೆ ಹಾದಿ: ರಮೇಶ ಮಿರ್ಜಿ

Constant effort is the path to success: Ramesh Mirji

ಮೂಡಲಗಿ 07:  ವಿದ್ಯಾರ್ಥಿ ಜೀವನ ತಮೋಮಯವಾದುದು, ಸಾಧನಾಮಯವಾದುದು. ತಂದೆ,ತಾಯಿ ಗುರುಹಿರಿಯರ ಮಾರ್ಗದರ್ಶನದೊಂದಿಗೆ  ನಿರಂತರ ಅಧ್ಯಯನದಲ್ಲಿ  ತೊಡಗುವುದರಿಂದ ಉತ್ತಮ ಸಾಧನೆ ಖಂಡಿತ ಸಾಧ್ಯ ಎಂದು ಗೋಕಾಕ ಸರಕಾರಿ ಪ್ರೌಢ ಶಾಲೆಯ ಶಿಕ್ಷಕ ರಮೇಶ ಮಿರ್ಜಿ ಹೇಳಿದರು. 

ಅವರು ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆ ಶ್ರೀ ಶಿವಬೋಧರಂಗ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಪ್ರೌಢ ಶಾಲೆಗಳ ಪ್ರಸಕ್ತ ಸಾಳಿನ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿ, ಜಗತ್ತಿನ ಬಹುತೇಕ ಸಾಧಕರು ಸಮಸ್ಯೆ ,ಸವಾಲುಗಳನ್ನು ಎದುರಿಸಿಯೇ ಯಶಸ್ಸಿನ ಶಿಖರ ತಲುಪಿದ್ದಾರೆ.  ಕಷ್ಟಗಳು ಶಿಸ್ತನ್ನು ಕಲಿಸುವ  ಜೀವನದ ಪಾಠಶಾಲೆಗಳು. ಆದ್ದರಿಂದ ವಿದ್ಯಾರ್ಥಿಗಳು ಸಮಸ್ಯೆಗಳಿಗೆ ಎದೆಗುಂದದೇ ಆತ್ಮವಿಶ್ವಾಸದಿಂದ ಅಧ್ಯಯನದಲ್ಲಿ  ತೊಡಗಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಅಗಾಧ ಪ್ರತಿಭೆ ಇದೆ. ಕೀಳರಿಮೆಯನ್ನು ಬಿಟ್ಟು ಗುರಿ ಸಾಧನೆಯತ್ತ  ನಿರಂತರ ಪ್ರಯತ್ನ ಮಾಡಿದರೆ ಗೆಲವು ನಿಶ್ಚಿತ  ಎಂದ ಅವರು  ಕಳೆದ ಹಲವು ದಶಕಗಳಿಂದ ಮೂಡಲಗಿ ಶಿಕ್ಷಣ ಸಂಸ್ಥೆ ಈ ಭಾಗದ ಗ್ರಾಮೀಣ ವಿದ್ಯಾರ್ಥಿಗಳಿಗೆ  ಆಸರೆಯಾಗಿದ್ದು  ವಿದ್ಯಾರ್ಥಿಗಳು ಮಹಾವಿದ್ಯಾಲಯದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು  ತಮ್ಮ ಕುಟುಂಬಕ್ಕೆ, ನಾಡಿಗೆ, ದೇಶಕ್ಕೆ  ಕೀರ್ತಿ ತರುವಂತಹ  ನಾಗರಿಕರಾಗಿ ಬೆಳೆಯಬೇಕು ಎಂದರು. 

ಬಿಇಒ ಅಜೀತ ಮನ್ನಿಕೇರಿ ಮಾತನಾಡಿ, 69 ವಸಂತಗಳನ್ನು ಪೂರೈಸಿರುವ ಮೂಡಲಗಿ ಶಿಕ್ಷಣ ಸಂಸ್ಥೆ ಮೂಡಲಗಿ ಪಟ್ಟಣ ಅಷ್ಟೆ ಅಲ್ಲದೇ ಅನೇಕ ಗ್ರಾಮಗಳ ವಿದ್ಯಾರ್ಥಿಗಳ ಬಾಳಿನಲ್ಲಿ ಬೆಳಕು ಚೆಲುವ ಕಾರ್ಯ ಮಾಡಿದೆ ಎಂದ ಅವರು ನಾನು ಕೂಡ ಈ ಸಂಸ್ಥೆಯಲ್ಲಿ ಕಲಿತು ಒಳ್ಳೆಯ ಸರಕಾರಿ ಹುದ್ದೆಯನ್ನು  ಅಲಕರಿಸಿದ್ದು, ತಾವು ಕೂಡ ತಮ್ಮ ಬಧುಕಿನಲ್ಲಿ ಶಿಸ್ತು, ಪ್ರಾಮಾಣಿಕತೆಯನ್ನು ಅಳವಡಿಸಿಕೊಂಡು ಅಧ್ಯಯನಶೀಲರಾಗಿ ಶಿಕ್ಷಣ ಸಂಸ್ಥೆಯ ಮತ್ತು ಪಾಲಕರ, ಶಿಕ್ಷಕರ ಕೀರ್ತಿ ಹೆಚ್ಚಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕೀವಿ ಮಾತು ಹೇಳಿದರು.   

ಪಿಎಸ್‌ಐ ರಾಜು ಪೂಜೇರಿ ಮಾತನಾಡಿ, ವಿದ್ಯಾರ್ಥಿಗಳು ಅತಿಯಾಗಿ ಮೋಬೈಲ್ ಬಳಕೆ ಮತ್ತು ದುಷ್ಚಟಗಳಿಂದ ದೂರವಿದ್ದರೆ ಜೀವನದಲ್ಲಿ ಏನು ಬೇಕಾದರು ಸಾಧಿಸಬಹುದು ಎಂದರು.  

ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಆರ್ ಸೊನವಾಲ್ಕರ ಮಾತನಾಡಿ, ಗುಣಮಟ್ಟದ ಶಿಕ್ಷಣಕ್ಕಾಗಿ ಮೂಡಲಗಿ ಶಿಕ್ಷಣ ಸಂಸ್ಥೆಯಲ್ಲಿ ಅಭ್ಯಸಿಸುವ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯಿಂದಲ್ಲೂ ಸೌಲಭ್ಯ ನೀಡಲು ಆಡಳಿತ ಮಂಡಳಿ ಕಂಕಣಬದ್ಧರಾಗಿದ್ದು,  ಎಲ್ಲ ಅಂಗ ಸಂಸ್ಥೆಯಲ್ಲಿ ಅನುಭವಿ ಮತ್ತು ವಿಧ್ಯಾವಂತ ಉಪನ್ಯಾಸಕರನ್ನು ಒಂದಿದ್ದು,   ವಿದ್ಯಾರ್ಥಿಗಳಲ್ಲಿ ಚೈತನ್ಯವನ್ನು ಮೂಡಿಸಲ್ಲು ಪಾಠದೊಂದಿಗೆ ಪಠ್ಯೇತರ ಮತ್ತು ಸಾಂಸ್ಕೃತಿಕ ಚಟವಟಿಕೆಯಲ್ಲಿ ವಿದ್ಯಾರ್ಥಿಗಳನ್ನು ಭಾಗವಹಿಸಲು ಪ್ರೇರೆಪಿಸಲ್ಲಾಗುವುದು ಎಂದರು.  

ಸಮಾರಂಭದ ವೇದಿಕೆಯಲ್ಲಿ ಸಂಸ್ಥೆಯಉಪಾದ್ಯಕ್ಷ ರವಿಂದ್ರ ಸೊನವಾಲಕರ,  ನಿರ್ದೇಶಕರಾದ ವಿಜಯಕುಮಾರ ಸೊನವಾಲಕರ, ಅಪ್ಪಾಸಾಹೇಬ ಹೊಸಕೋಟಿ, ಸಂದೀಪ ಸೊನವಾಲ್ಕರ, ಅನೀಲ ಸತರಡ್ಡಿ, ಶಿವಾ ಹೊಸೂರ, ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಪ್ರಾಚಾರ್ಯ ಪ್ರೊ.ಜಿ.ವ್ಹಿ.ನಾಗರಾಜ,  ಉಪಸ್ಥಿತರಿದ್ದರು.  

ಕಾರ್ಯಕ್ರಮದಲ್ಲಿ ಕಳೆದ  ಸಾಲಿನ ಎಸ್‌.ಎಸ್‌.ಎಲ್ ಸಿ ಮತ್ತು ಪಿಯುಸಿ ಪರೀಕ್ಷೆ ಮತ್ತು  ಕ್ರೀಡೆಯಲ್ಲಿ ಸಾಧನೆ ಗೈದ ವಿಧ್ಯಾರ್ಥಿಗಳನ್ನು, ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಹಳೇ ವಿದ್ಯಾರ್ಥಿಗಳನ್ನು ಮತ್ತು ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮುಖ್ಯಸ್ಥರನ್ನು ಸತ್ಕರಿಸಿ ಗೌರವಿಸಿದರು. ಪ.ಪೂ ಕಾಲೇಜಿನ ಪ್ರಾಚಾರ್ಯ ಎಮ್‌ಎಸ್ ಪಾಟೀಲ  ಸ್ವಾಗತಿಸಿದರು, ಎಚ್‌.ಡಿ.ಚಂದರಗಿ, ಬಿ.ಜಿ.ಗಡಾದ, ಆರ್‌.ಎಂ.ಕಾಂಬಳ್ಳೆ ನಿರೂಪಿಸಿದರು, ಎಸ್‌.ಕೆ.ಹಿರೇಮಠ, ರಮೇಶ ಬಿರಾದರ ವರದಿ ವಾಚಿಸಿದರು,  ಉಪಪ್ರಾಚಾರ್ಯ ಬಿ.ಕೆ.ಕಾಡಪ್ಪಗೋಳ ವಂದಿಸಿದರು.