ಶಿಗ್ಗಾವಿ 10 : ಪಟ್ಟಣದ ರಂಭಾಪುರಿ ಜಗದ್ಗುರು ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿ ಸಂಧ್ಯಾ ಎನ್. ಕುಲಕರ್ಣಿ ಕಲಾ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನಗಳಿಸಲು ಪ್ರತಿನಿತ್ಯ ಕನಿಷ್ಠ 4 ರಿಂದ 5 ಗಂಟೆ ವ್ಯಾಸಾಂಗ ಮಾಡುತ್ತಿದ್ದೆ ಮತ್ತು ಕಾಲೇಜು ಪ್ರಾಚಾರ್ಯರು, ಉಪನ್ಯಾಸಕರು ನೀಡಿದ ಪ್ರೋತ್ಸಾಹ ನನಗೆ ಇಷ್ಟೊಂದು ಫಲಿತಾಂಶ ಬರಲು ಸಾಧ್ಯವಾಗಿದೆ ಎಂದರು.
ಪಟ್ಟಣದಲ್ಲಿ ಅಂಚೆ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಪೋಸ್ಟ್‌ಮನ್ ಮಗಳಾಗಿ ನಾನು ಐಎಎಸ್ ಮಾಡುವ ಗುರಿಯೂ ಜೊತೆಗೆ ಖ್ಯಾತ ನ್ಯಾಯವಾದಿ ಆಗಬೇಕು ಎಂಬ ಕನಸು ಕಟ್ಟಿ ಕೊಂಡಿದ್ದೇನೆ. ಹೀಗಾಗಿ ಕಲಾ ವಿಭಾಗ ಆಯ್ಕೆ ಮಾಡಿಕೊಂಡಿದ್ದೇನೆ. ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಹೋಗಬೇಕು.ಉಪನ್ಯಾಸಕರು ಪಾಠ ಮಾಡುವಾಗ ಚಿತ್ತದಿಂದ ಆಲಿಸುತ್ತಿದ್ದೆ. ಕಾಲೇಜನಲ್ಲಿಆಲಿಸಿದ್ದನ್ನು ಮನೆಗೆ ಬಂದು ಮತ್ತೊಮ್ಮೆ ಬರೆದು ತೆಗೆಯುತ್ತಿದ್ದೆ. ನನಗೆ ನಿತ್ಯೆದ ಪಾಠ ಪರಿಪೂರ್ಣವಾಗುತಿತ್ತು ಅಲ್ಲದೇ ಅಂದಿನ ಅಭ್ಯಾಸ ಅಂದೇ ಮಾಡುತ್ತಿದ್ದೆ ಎಂದರು. ಕಾಲೇಜಿನಲ್ಲಿ ಪ್ರಾಚಾರ್ಯ, ಉಪನ್ಯಾಸಕರು ನನ್ನ ಓದಿಗೆ ಮನೆಯಲ್ಲಿ ಹೆತ್ತವರು, ನನ್ನ ಗೆಳತಿಯರು ನಿರಂತರ ನೀಡಿದ ಪ್ರೋತ್ಸಾಹ ಜೀವನದಲ್ಲಿ ಮರೆಯಲ್ಲ ಹಾಗೂ ಕಲಾ ವಿಭಾಗದಲ್ಲಿ ಓದಿದರೇ ಸಾಕಷ್ಟು ಅವಕಾಶಗಳಿವೆ. ಎಲ್ಲರೂ ಶ್ರದ್ದಾ ಭಕ್ತಿಯಿಂದ ಓದಬೇಕು ಎಂಬುದು ಸಂದ್ಯಾ ಕುಲಕರ್ಣಿ ಅಭಿಪ್ರಾಯ.